ಮುಧೋಳ: ನಗರಕ್ಕೆ ಘಟಪ್ರಭಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ. ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುವ ದಿನಗಳು ಸಮೀಪಿಸುತ್ತಿವೆ.

ಒಂದು ಕಾಲದಲ್ಲಿ ಮುಧೋಳ ನಗರಕ್ಕೆ ಬಹುಸಂಖ್ಯೆಯಲ್ಲಿ ಬಂದು ನೆಲೆಸಲು ಇಲ್ಲಿನ ನೀರಿನ ವ್ಯವಸ್ಥೆಯೇ ಕಾರಣವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಬೇಸಿಗೆಯಲ್ಲಿ ಬೇರೆ ಊರುಗಳಿಗೆ ವಲಸೆ ಹೋಗುವಂಥ ಸ್ಥಿತಿ ಬಂದೊದಗಿತ್ತು. ಇದೀಗ ಬಹು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕುಡಿಯುವ ನೀರಿನ ಯೋಜನೆ ಮುಗಿಯುವ ಹಂತ ತಲುಪಿದ್ದು, ಕೆಲವೇ ತಿಂಗಳಲ್ಲಿ ಮುಧೋಳ ಜನ ಇದರ ಲಾಭ ಪಡೆಯಲಿದ್ದಾರೆ.

2004 ಅಗಷ್ಟ ತಿಂಗಳಲ್ಲಿ ಕಾಮಗಾರಿ ಪ್ರಾರಂಭಗೊಂಡು 2006ರಲ್ಲಿ ಮುಗಿಯಬೇಕಿತ್ತು. ಆರಂಭದಲ್ಲಿ ಈ ಯೋಜನೆಗೆ ರೂ 13 ಕೋಟಿ ಹಣ ಮಂಜೂರು ಮಾಡ ಲಾಗಿತ್ತು. ಕಾಮಗಾರಿ ಪ್ರಾರಂಭ ಗೊಂಡು ಇನ್ನೇನು ಒಂದೆರಡು ವರ್ಷ ದಲ್ಲಿ ಮುಧೋಳಕ್ಕಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕೇ ಬಿಡುತ್ತದೆ ಎಂದು ಜನ ಅಂದುಕೊಳ್ಳು ವಷ್ಟರಲ್ಲಿ ಕಾಮಗಾರಿ ನಿಂತೇ ಹೋಗಿತ್ತು.

ಮಂಜೂರಾದ ಹಣ ಯೋಜನೆಗೆ ಸಾಲದು, ಗುತ್ತಿಗೆ ಹಿಡಿಯುವಾಗ ಇದ್ದ ಸಿಮೆಂಟ್, ಕಬ್ಬಿಣ, ಜಲ್ಲಿ, ಮರಳು ಇನ್ನಿತರ ಕಚ್ಚಾ ವಸ್ತುಗಳ ಮಾರುಕಟ್ಟೆ ದರಗಳು ಈಗ ಗಗನಕ್ಕೇರಿವೆ. ಆದ್ದರಿಂದ ಯೋಜನಾ ವೆಚ್ಚವನ್ನು ಪರಿಷ್ಕರಿಸುವಂತೆ ಗುತ್ತಿಗೆದಾರರು ಸರ್ಕಾರಕ್ಕೆ ಮನವಿ ಮಾಡಿದ್ದರು.

ಯೋಜನೆಯ ಗಾತ್ರವನ್ನು ಸಚಿವ ಕಾರಜೋಳರು ಹೆಚ್ಚಿಸಿಕೊಡುವುದಾಗಿ ಭರವಸೆ ನೀಡಿದರು. ಆದರೂ ಕಾಮ ಗಾರಿ ಆಮೆಗತಿಯಲ್ಲಿ ಸಾಗಿತ್ತು. 15 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯದ 2 ಟ್ಯಾಂಕ್ಗಳನ್ನು ಎತ್ತಿ ಹಿಡಿಯುವ ಪಿಲ್ಲರ್ಗಳು ಎದ್ದು ನಿಂತವು, ಮೊದಲು ತಾಲ್ಲೂಕಿನ ಇಂಗಳಗಿ ಬ್ಯಾರೇಜ್ನಿಂದ ನೀರು ತರುವುದಾಗಿ ನಿಶ್ಚಿಯಿಸಲಾಗಿತ್ತು ಆದರೆ ಸ್ಥಳೀಯ ಸಮಸ್ಯೆಗಳಿಂದ ಮುಧೋಳದ ಸಿದ್ಧೇಶ್ವರ ಬ್ಯಾರೇಜ್ನಿಂದ ನೀರು ಎತ್ತಲು ನಿರ್ಧರಿಸಲಾಯಿತು. ಆದರೆ ಸಿದ್ಧೇಶ್ವರ ಬ್ಯಾರೇಜ್ಗೆ ನಗರದ ಚರಂಡಿಗಳ ನೀರು ಸೇರುವುದರಿಂದ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಯಿತು.

8 ಕಿ.ಮೀ ದೂರದ ಜಾಲಿಬೇರು ಬ್ಯಾರೇಜ್ನಿಂದ ನೀರು ಎತ್ತಲು ನಿರ್ಧರಿಸಿ ಜಾಕ್ವೆಲ್ ಪಂಪ್ ಹೌಸ್ ನಿರ್ಮಾಣಕ್ಕೆ ಕಾಂಕ್ರೆಟ್ ಹಾಕಲಾ ಯಿತು. ಆದರೆ ಭೂ ಮಟ್ಟದವರೆಗೆ ಹಾಕಲಾದ ಕಾಂಕ್ರೆಟ್ 2009ರಲ್ಲಿ ಆಲಮಟ್ಟಿ ಹಿನ್ನೀರಿನಿಂದ ಬಂದ ಪ್ರವಾಹಕ್ಕೆ ಕಿತ್ತು ಹೋಯಿತು. ಈ ಎಲ್ಲ ಕಾರಣಗಳಿಂದ ಯೋಜನೆಗೆ ವಿಳಂಬವಾಗಿ ಇದೀಗ ಆ ಎಲ್ಲ ಸಮಸ್ಯೆ ಗಳನ್ನೂ ನೀಗಿ ಕಾಮಗಾರಿ ಭರದಿಂದ ಸಾಗಿದೆ.

ಭೂಸ್ವಾಧೀನಕ್ಕೆ ವಿಳಂಬ: ಜಾಲಿಬೇರ ಬ್ಯಾರೇಜ್ನಿಂದ ಸೋರಗಾಂವ ರಸ್ತೆ ವರೆಗೆ ಪೈಪ್ಲೈನ್ಗೆ ಸರ್ಕಾರಿ ರಸ್ತೆ ಇಲ್ಲದ್ದರಿಂದ ಮತ್ತು ಬ್ಯಾರೇಜ್ ಹತ್ತಿರ ಪಂಪ್ಹೌಸ್ ನಿರ್ಮಾಣಕ್ಕೆ ಸರ್ಕಾರದ ಜಾಗವಿಲ್ಲದ್ದರಿಂದ ಭೂಸ್ವಾಧೀನಕ್ಕೆ ಸಮಸ್ಯೆ ಎದುರಾಗಿತ್ತು. ಸಚಿವ ಗೋವಿಂದ ಕಾರಜೋಳರು ತಹಸೀಲ್ದಾರರ ಮಧ್ಯಸ್ಥಿಕೆಯಲ್ಲಿ ರೈತರ ಮನವೊಲಿಸಿ ಭೂಸ್ವಾಧೀನ ಪಡೆಸಿಕೊಂಡು ಕಾಮಗಾರಿಯನ್ನು ಪ್ರಾರಂಭಿಸುವಲ್ಲಿ ನೆರವಾದರು. 2010ರವರೆಗೆ ಜಾಕ್ವೆಲ್ ಪಂಪ್ಹೌಸ್ ಪ್ರವಾಹ ಮಟ್ಟದಿಂದ ಮೇಲೆ ಬಂದಿತು.

ಇದೀಗ ಯೋಜನೆಗೆ ಬೇಕಾದ ಎಲ್ಲ ಪೈಪ್ಗಳು ಬಂದಿವೆ, 6 ಕಿ.ಮೀ. ದೂರದಷ್ಟು ಪೈಪ್ಲೈನ್ ಕಾಮಗಾರಿ ಸಧ್ಯದಲ್ಲೆ ಮುಗಿಯುವ ನಿರೀಕ್ಷೆ ಇದೆ. ನಗರದ ಟೀಚರ್ಸ್ ಕಾಲೊನಿಯಲ್ಲಿನ ಒಂದು ಟ್ಯಾಂಕ್ ಮತ್ತು ಈಗಿರುವ ಮಹಾರಾಜಾ ಕೆರೆಯ ಒಂಡಿಯ ಮೇಲೆ ಒಂದು ಟ್ಯಾಂಕ್ ಜೊತೆಗೆ ಜಲ ಶುದ್ಧೀಕರಣ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹೈದರಾಬಾದಿನ ರುದ್ರಾಣಿ ಕನ್ಸ್ಟ್ರಕ್ಷನ್ಸ್ ಗುತ್ತಿಗೆ ಪಡೆದುಕೊಂಡಿದೆ. ಕಳೆದ 2 ತಿಂಗಳ ಹಿಂದೆ ಸಚಿವ ಗೋವಿಂದ ಕಾರಜೋಳ ಯೋಜನೆಯನ್ನು ಅತಿಶೀಘ್ರದಲ್ಲಿ ಮುಗಿಸಿ ಕೊಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ. ರಾಜ್ಯದ ಒಟ್ಟು 213 ಯೋಜನೆಗಳಲ್ಲಿ ಜಿಲ್ಲೆಯ ಬನಹಟ್ಟಿ, ರಬಕವಿ, ಗುಳೇದಗುಡ್ಡ, ತಾಲ್ಲೂಕಿನಲ್ಲಿನ ಮುಧೋಳ ಹಾಗೂ ಮಹಾಲಿಂಗಪುರದ ಯೋಜನೆಗಳೂ ಆಗಿದ್ದು. ಮುಧೋಳದ ಯೋಜನೆಯನ್ನು ಹೊರತು ಪಡಿಸಿದರೆ ಬಹುತೇಕ ಎಲ್ಲ ಯೋಜನೆಗಳು ಮುಗಿದಿವೆ.

ಈಗಿರುವ ಮಹಾರಾಜಾ ಕೆರೆಯ ನೀರು ಹಳೆಯ ಮುಧೋಳಕ್ಕೆ ಮಾತ್ರ ಸಾಕಾಗುವಷ್ಟಿದ್ದು, ಮುಂಬರುವ ದಿನಗಳಲ್ಲಿ ಕೆರೆಯ ಗಾತ್ರವನ್ನೂ ಹೆಚ್ಚಿಸುವ ಅಗತ್ಯವಿದೆ. ಬಡಾವಣೆಗಳಿಗೆ ಅಲ್ಲಲ್ಲಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತದೆ. ಈ ಬೃಹತ್ ಯೋಜನೆ ಪೂರ್ಣಗೊಂಡರೆ ಮುಧೋಳದ ಬಡಾವಣೆಗಳು ಸೇರಿದಂತೆ ಹಳೆಯ ಮುಧೋಳನಗರದ ನೀರಿನ ಬರ ನೀಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.