ಕೊಲಂಬೊ (ಪಿಟಿಐ): ಶ್ರೀಲಂಕಾ ಸಚಿವರೊಬ್ಬರಿಗೆ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡದ ಭಾರತ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುವಂತೆ ಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ವಿರೋಧ ಪಕ್ಷ ಯುಎನ್ಪಿ ಆಗ್ರಹಪಡಿಸಿದೆ.

`ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಳ್ಳಲು ಸಚಿವ ರೆಜಿನಾಲ್ಡ್ ಕೂರೇ ಅವರಿಗೆ ಅವಕಾಶ ನೀಡದಿರುವುದು ಅಕ್ಷ್ಯಮ್ಯ ಅಪರಾಧ. ಲಂಕಾ ಸರ್ಕಾರವು ಭಾರತದ ವಿರುದ್ಧ ಕಡ್ಡಾಯವಾಗಿ ಪ್ರತಿಭಟನೆ ವ್ಯಕ್ತಪಡಿಸಲೇಬೇಕು~ ಎಂದು ವಿರೋಧ ಪಕ್ಷದ ನಾಯಕ ಜಾನ್ ಅಮರತುಂಗ ಒತ್ತಾಯಿಸಿದ್ದಾರೆ.

ಹಿನ್ನೆಲೆ: ಸಚಿವ ರೆಜಿನಾಲ್ಡ್ ಕೂರೇ ಅವರು, ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಕೊಯಮತ್ತೂರಿಗೆ ತೆರಳಿದ್ದರು. ಸಚಿವರು ಬರುವ ಸೂಚನೆ ತಿಳಿದ ಕೆಲವು ತಮಿಳು ಸಂಘಟನೆಗಳು ಅವರ ವಿರುದ್ಧ ಪ್ರತಿಭಟಿಸಲು ಸಿದ್ಧತೆ ನಡೆಸಿದ್ದವು. ಪೊಲೀಸರು ಈ ವಿಚಾರವನ್ನು ಸಚಿವರಿಗೆ ತಿಳಿಸಿದರು. ಇದರಿಂದ ರೆಜಿನಾಲ್ಡ್ ಕೂಡಲೇ ಶ್ರೀಲಂಕಾಕ್ಕೆ ಮರಳಲು ಸಿದ್ಧರಾದರು.

ಆದರೆ ಈ ಸಂದರ್ಭದಲ್ಲಿ ಸಚಿವರು ಉಳಿದಿದ್ದ ಹೋಟೆಲ್ ಅಂಗಳಕ್ಕೇ ಜಮಾಯಿಸಿದ ಎಂಡಿಎಂಕೆ, ಪೆರಿಯಾರ್ ದ್ರಾವಿಡ ಕಜಗಂ, ವಿದುತಲೈ ಚಿರುತೈಗಳ್ ಮತ್ತು ಇತರ ತಮಿಳು ಸಂಘಟನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ರೆಜಿನಾಲ್ಡ್ ಅವರನ್ನು ತಡೆದು, ಘೇರಾವ್ ಹಾಕಿದವು. ಎಲ್ಟಿಟಿಇ ವಿರುದ್ಧ ನಡೆದ ಯುದ್ದದಲ್ಲಿ ತಮಿಳರನ್ನು ಹತ್ಯೆ ಮಾಡಿದ ಶ್ರೀಲಂಕಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

`ಇಂಥ ಸಮಯದಲ್ಲಿ ಸಚಿವರಿಗೆ ಹೆಚ್ಚಿನ ಭದ್ರತೆ ನೀಡಿ, ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕಾದದ್ದು ಅಲ್ಲಿನ ಸರ್ಕಾರದ ಕರ್ತವ್ಯವಾಗಿತ್ತು~ ಎಂದು ಅಮರತುಂಗ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಸರ್ಕಾರದ ಸಚಿವರಿಗೆ ಇಂಥ ಇರಿಸುಮುರಿಸು ಪ್ರಕರಣ ಎದುರಾಗಿರುವುದು ಇದು ಎರಡನೇ ಬಾರಿ. ಕಳೆದ ವಾರ ಲಂಡನ್ನಲ್ಲಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರಿಗೆ ಇಂಥದ್ದೇ ಪ್ರತಿಭಟನೆ ಎದುರಾದ ಕಾರಣ, ಅವರು ತಾವು ಭಾಗವಹಿಸಬೇಕಾಗಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.