ಮಂಗಳವಾರ, ಮೇ 11, 2021
20 °C

ಭಾರತದ ಯುವತಿ ಕಾಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಭಾರತದ ಎಮಾನ್ ಶಾ ಎಂಬ ಯುವತಿಯೊಬ್ಬಳು ತನ್ನ ಕುಟುಂಬದೊಂದಿಗೆ ರಜೆ ಕಳೆಯಲು ಇಲ್ಲಿಗೆ ಆಗಮಿಸಿ ಶಾಪಿಂಗ್‌ಗೆ ತೆರಳಿದಾಗ ಕಾಣೆಯಾಗಿರುವ ಘಟನೆ ನಡೆದಿದೆ. ಯುವತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.ಎಮಾನ್ ಷಾ ಜೂನ್ 10ರ ಸಂಜೆ ರಜೆ ಮುಗಿಸಿ ತನ್ನ ಕುಟುಂಬದೊಂದಿಗೆ ಲಂಡನ್ನಿನಿಂದ ಹೊರಡಬೇಕಿತ್ತು.

ಆದರೆ ಅದೇ ದಿನ ಮಧ್ಯಾಹ್ನ ಅತಿ ಹೆಚ್ಚು ಜನಸಂದಣಿ ಇರುವ ಆಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿ ಕುಟುಂಬದೊಂದಿಗೆ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಆಕೆ ಕಾಣೆಯಾಗಿದ್ದಾಳೆ.`ಆಕೆಯನ್ನು ಸಾಧ್ಯವಾದಷ್ಟು ಬೇಗ ಪತ್ತೆ ಮಾಡುತ್ತೇವೆ' ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಎಮಾನ್‌ಳ ಕುಟುಂಬ ಆಕ್ಸ್‌ಫರ್ಡ್ ಸ್ಟ್ರೀಟ್‌ಗೆ ಹತ್ತಿರವಿರುವ ಪಂಚತಾರಾ ಹೋಟೆಲ್‌ನಲ್ಲಿ ತಂಗಿತ್ತು. ಆಕೆ ಹೋಟೆಲ್‌ನಲ್ಲಿರಬಹುದೆಂದು ಹುಡುಕಾಟ ನಡೆಸಿದಾಗ ಆಕೆ ಅಲ್ಲಿಯೂ ಇರಲಿಲ್ಲ. ಆಕೆ ಸ್ವಲ್ಪ ಹಣವನ್ನು ತನ್ನ ಬಳಿ ಇಟ್ಟುಕೊಂಡಿದ್ದಳು ಆದರೆ ಆಕೆಯ ಬಳಿ ಮೊಬೈಲ್ ಫೊನ್ ಇರಲಿಲ್ಲ.ಆಕೆಯ ತಂದೆ ತನ್ವೀರ್ ಷಾ ಭಾರತದಲ್ಲಿ ಜಾಹೀರಾತು ಕಂಪೆನಿ ನಡೆಸುತ್ತಿದ್ದು, `ನಮ್ಮ ಮಗಳು ಕಾಣೆಯಾಗಿರುವುದರಿಂದ ವಿಪರೀತ ಆತಂಕಗೊಂಡಿದ್ದೇವೆ. ಆಕೆ ಕಾಣೆಯಾಗಲು ಯಾವುದೇ ಕಾರಣಗಳಿಲ್ಲ. ಆಕೆ ಸಂತೋಷವಾಗಿದ್ದಳು ಹಾಗೂ ಪರೀಕ್ಷೆಯನ್ನು ಉತ್ತಮವಾಗಿ ಪೂರ್ಣಗೊಳಿಸಿ, ವಿಶ್ವವಿದ್ಯಾಲಯ ಸೇರುವ ತವಕದಲ್ಲಿದ್ದಳು' ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.