ಗುರುವಾರ , ಜನವರಿ 30, 2020
19 °C

ಭಾರತ–ಪಾಕ್‌ ಮಾತುಕತೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಮುಹಮ್ಮದ್‌ ಶಾಬಾಜ್‌ ಶರೀಫ್‌ ಭಾರತ–ಪಾಕ್‌ ಸಂವಾದ ಪ್ರಕ್ರಿಯೆ ಪುನರಾರಂಭಗೊಳ್ಳಬೇಕು ಮತ್ತು ಎಲ್ಲ ವಿವಾದಗಳನ್ನು ಶಾಂತಿಯುತ­ವಾಗಿ ಪರಿಹರಿಸಿ­ಕೊಳ್ಳಬೇಕು ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಒತ್ತಾಯಿಸಿದ್ದಾರೆ.

ಗುರುವಾರ ಪ್ರಧಾನಿ ಸಿಂಗ್‌ ಅವರನ್ನು ಭೇಟಿಯಾದ ಶರೀಫ್‌ ತನ್ನ ಹಿರಿಯ ಸಹೋದರ ಪಾಕ್‌ ಪ್ರಧಾನಿ ನವಾಜ್‌ ಶರೀಫ್‌ ಅವರ ಶುಭಾಷಯ ತಿಳಿಸಿದರು.

ಎರಡೂ ದೇಶಗಳ ಜನರು ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸಮೃದ್ಧಿಗಾಗಿ ಭಾರತದೊಂದಿಗೆ ಸ್ನೇಹ ಮತ್ತು ಸಹಕಾರ ಸಂಬಂಧ ಹೊಂದಲು ಪಾಕ್‌ ಬಯಸುತ್ತಿದೆ ಎಂದು ಶಾಬಾಜ್‌ ಶರೀಫ್‌ ಈ ಸಂದರ್ಭದಲ್ಲಿ ಹೇಳಿದರು.ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ನವಾಜ್‌ ಶರೀಫ್‌ ಜತೆಗಿನ ಸಭೆಯಲ್ಲಿ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಿಲ್ಲ ಎಂದು ಪ್ರಧಾನಿ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಬಾಜ್‌ ಶರೀಫ್‌ ಪಾಕ್‌ ಆಡಳಿತಾರೂಢ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ಎರಡನೇ ಪ್ರಮುಖ ನಾಯಕ. ಹಾಗಾಗಿ ಅವರ ಪ್ರಧಾನಿ ಭೇಟಿ ಮತ್ತು ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪ್ರತಿಕ್ರಿಯಿಸಿ (+)