ಬುಧವಾರ, ಮೇ 25, 2022
31 °C

ಭಾರತ- ಪಾಕ್ ಗಡಿಯಲ್ಲಿ ಕಾಡಿಗೆ ಬೆಂಕಿ; ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಪಿಟಿಐ): ಇಲ್ಲಿನ ಭಾರತ-ಪಾಕ್ ಗಡಿಯುದ್ದಕ್ಕೂ ಹಲವು ಕಿ.ಮೀಗಳವರೆಗೆ ಹಬ್ಬಿರುವ  ಕಾಳ್ಗಿಚ್ಚಿನಿಂದಾಗಿ ನೆಲಬಾಂಬ್‌ಗಳು ಸ್ಫೋಟಿಗೊಂಡ ಪರಿಣಾಮ ಪೂಂಚ್ ಜಿಲ್ಲೆಯಲ್ಲಿ ಸಂಪರ್ಕ ವ್ಯವಸ್ಥೆ ಕಡಿತಗೊಂಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ದಾರಾ ಶೇರ್‌ಖಾನ್ ಪ್ರದೇಶದಲ್ಲಿ ಹೊತ್ತಿಕೊಂಡ ಬೆಂಕಿ ಗುರುವಾರ ಸಂಜೆ ಗಡಿ ನಿಯಂತ್ರಣ ರೇಖೆಯತ್ತ ಹಬ್ಬಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.3ರಿಂದ 4ಕಿ.ಮೀ. ದೂರಕ್ಕೆ ಬೆಂಕಿ ವ್ಯಾಪಿಸಿದ ಪರಿಣಾಮ ನುಸುಳುಕೋರರನ್ನು ತಡೆಯಲು ಭದ್ರತಾ ಪಡೆಗಳು ಹುದುಗಿಸಿಟ್ಟಿದ್ದ ನೆಲಬಾಂಬ್‌ಗಳು ಸ್ಫೋಟಗೊಂಡವು. ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ ಎಂದು ಸೇನಾ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆ ಸಿಬ್ಬಂದಿ, ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರು ಸೇರಿಕೊಂಡು ಶುಕ್ರವಾರ ಬೆಳಿಗ್ಗೆ ಬೆಂಕಿಯನ್ನು ನಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.