ಮಂಗಳವಾರ, ಮೇ 11, 2021
27 °C

ಭಾವೈಕ್ಯ ಪ್ರತಿಬಿಂಬಿಸಿದ ಕೇರಳ ಸಮಾಜದ ಓಣಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಪಟ್ಟಣದ ಕನ್ನಿಕಾ ಸಭಾಂಗಣದಲ್ಲಿ  ಕೇರಳ ಸಮಾಜದಿಂದ `ಓಣಂ~ ಅನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತುಮಲೆಯಾಳಿ ಭಾಷಿಕರು ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೆ ಎಲ್ಲರೂ ಒಟ್ಟಾಗಿ ಆಚರಿಸುವ ಮೂಲಕ  ಭಾವೈಕ್ಯ ಪ್ರದರ್ಶಿಸಿದರು. ಪರಸ್ಪರ `ಓಣಂ~ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಉದ್ಘಾಟಿಸಿ ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದನ್ ಅಧ್ಯಕ್ಷತೆ ವಹಿಸಿದ್ದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಶ್ರೀನಿವಾಸ್, ಸಮಾಜದ ಉಪಾಧ್ಯಕ್ಷ ಪಿ.ಟಿ.ಸುಧೀಶ್  ಕುಮಾರ್, ಕಾರ್ಯದರ್ಶಿ ಎಂ.ಆರ್.ಬಾಲಕೃಷ್ಣನ್, ಕೆ.ಕೆ.ಭಾಸ್ಕರನ್, ಪಿ.ಕೆ.ವಿಜಯನ್, ಕೆ.ಬಿ.ಬಾಬು, ಸುಶೀಲಾ, ಎಂ.ಎಸ್.ಶಾಂತಿ,  ಎಂ. ಆರ್.ಕಣ್ಣನ್ ಇತರರು ಇದ್ದರು.ವಿ.ಪಿ.ಪ್ರಕಾಶ್, ಮಾಥ್ಯೂ, ಪಾರ್ವತಿ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರು  ಸಾಂಪ್ರದಾಯಿಕ ಸೀರೆ ಧರಿಸಿ  ರಚಿಸಿದ `ಪುಷ್ಪ ರಂಗವಲ್ಲಿ~ ಆಕರ್ಷಕವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.