ಶುಕ್ರವಾರ, ಏಪ್ರಿಲ್ 23, 2021
22 °C

ಭೀಮರಾಯನಗುಡಿ 500 ಮನೆ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಭೀಮರಾಯನಗುಡಿ ಅಧಿಸೂಚಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ 2011-12ನೇ ಸಾಲಿನ 500 ಮನೆಗಳ ಮಂಜೂರಾತಿ ಮಾಡಿರುವುದನ್ನು ಮುಂದಿನ ತನಿಖೆಯಾಗುವವರೆಗೆ ತಡೆಹಿಡಿಯಬೇಕೆಂದು ಅಧಿಸೂಚಿತ ಪ್ರದೇಶದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರರು ಆಗಿರುವ ಎಂ.ರಾಚಪ್ಪನವರು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಕೋರಿದ್ದಾರೆ.ಭೀಮರಾಯನಗುಡಿ ಅಧಿಸೂಚಿತ ಪ್ರದೇಶದ ಮುಖ್ಯಾಧಿಕಾರಿಯವರು 500 ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ಮಂಜೂರು ಮಾಡಲಾಗಿದೆ. ಫಲಾನುಭವಿಗಳ ಹೋತಪೇಟ ಗ್ರಾಮ ಯಾದಿ ಸಂಖ್ಯೆ 377ರಿಂದ 500ವರೆಗೆ ಕ್ರಮ ಸಂಖ್ಯೆ 1ರಿಂದ 124 ಫಲಾನುಭವಿಗಳು ಭೀಮರಾಯನಗುಡಿ ವ್ಯಾಪ್ತಿಗೆ ಬರುವುದಿಲ್ಲ. 124 ಫಲಾನುಭವಿಗಳ ಯಾದಿ ರದ್ದುಪಡಿಸಬೇಕೆಂದು ಕಳೆದ 18ರಂದು ಬರೆದ ಪತ್ರದಲ್ಲಿ ಆಡಳಿತಾಧಿಕಾರಿಯವರು ತಿಳಿಸಿದ್ದಾರೆ.ಅಲ್ಲದೆ ಇನ್ನೂಳಿದ ಅನರ್ಹ ಫಲಾನುಭವಿಗಳನ್ನು ತನಿಖೆ ಮಾಡಿ ನಂತರ ಪುನಃ ತಮಗೆ ಪತ್ರ ಬರೆಯಲಾಗುವುದು. ತನಿಖೆಯಾಗುವವರೆಗೆ ತಡೆಹಿಡಿಯಬೇಕೆಂದು ಪತ್ರದಲ್ಲಿ ಕೋರಿದ್ದಾರೆ.ಎತ್ತಂಗಡಿ: ಮನೆ ಅಕ್ರಮದ ಬಗ್ಗೆ ರಾಜಕೀಯ ಸಂಘರ್ಷಕ್ಕೆ ಇಳಿದಾಗ ಅಲ್ಲದೆ ಸ್ಥಳೀಯ ರಾಜಕೀಯ ಮುಖಂಡರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಓ) ಮೇಲೆ ಒತ್ತಡ ಹಾಕಿ ಮನೆ ಹಂಚಿಕೆಯ ಪ್ರಥಮ ಕಂತು 10,000ರೂಪಾಯಿ ಚೆಕ್‌ನ್ನು ಫಲಾನುಭವಿಗಳಿಗೆ ವಿತರಿಸುವಂತೆ  ಹೇಳಿದರೂ ಅದಕ್ಕೆ ಜಗ್ಗದ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಓ ರಾಜೇಂದ್ರಕುಮಾರ ಅವರನ್ನು ಎತ್ತಂಗಡಿ ಮಾಡಿ ಅವರ ಸ್ಥಾನಕ್ಕೆ  ಧೂಳಪ್ಪ ಪಿಡಿಓ ಅವರನ್ನು ವರ್ಗಾವಣೆ ಮಾಡಲಾಗಿದೆ ತಿಳಿದು ಬಂದಿದೆ. ಅಲ್ಲದೆ ಚೆಕ್‌ಗಳನ್ನು ವಿತರಿಸುವಂತೆ ಒತ್ತಡ ಕೂಡಾ ಹಾಕುವುದು ಗುಟ್ಟಾಗಿ ಉಳಿದಿಲ್ಲ.73 ಲಕ್ಷ: ಫಲಾನುಭವಿಗಳಿಗೆ ತಲಾ 10,000ರೂಪಾಯಿ ಚೆಕ್ ವಿತರಿಸುವ ಸಲುವಾಗಿ ಎಸ್‌ಬಿಐ ಗೋಗಿ ಗ್ರಾಮದ ಬ್ಯಾಂಕಿನಲ್ಲಿ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ 73 ಲಕ್ಷ ಹಣ ಜಮಾ ಆಗಿತ್ತು. ಖೊಟ್ಟಿ ಫಲಾನುಭವಿಗಳ ಅಕ್ರಮದ ವಾಸನೆಯನ್ನು ಬೆನ್ನು ಹತ್ತಿದ ಬಿಜೆಪಿ ರಾಜಕೀಯ ಮುಖಂಡರು ತಮ್ಮ ಪ್ರಭಾವ ಬಳಿಸಿಕೊಂಡು ಹಣ ಬಿಡುಗಡೆಗೊಳಿಸದಂತೆ ಬ್ರೇಕ್ ಹಾಕಿದರು ಎಂದು ಹೇಳಲಾಗುತ್ತಿದೆ.ರದ್ದುಪಡಿಸಿ:

ಸಾಕಷ್ಟು ಗೊಂದಲ ಹಾಗೂ ಅಕ್ರಮದಿಂದ ಕೂಡಿದ 500 ಮನೆಗಳ ಅಕ್ರಮವು ಅಧಿಕವಾಗಿದೆ. ಸ್ವತಃ ಆಡಳಿತಾಧಿಕಾರಿಯುವರು ತಪ್ಪು ಒಪ್ಪಿಕೊಂಡು ಈಗಾಗಲೇ 127 ಮನೆ ರದ್ದತಿಗೆ ಸೂಚಿಸಿರುವಾಗ ಉಳಿದ ಖೊಟ್ಟಿ ಫಲಾನುಭವಿಗಳು ಪಟ್ಟಿಯಲ್ಲಿ ಇದ್ದಾರೆ ನಿಜವಾದ ಫಲಾನುಭವಿಗಳನ್ನು ಪಾರದರ್ಶಕ ನಿಯಮದ ಅಡಿಯಲ್ಲಿ ಪುನಃ ಹೊಸಪಟ್ಟಿಯನ್ನು ತಯಾರಿಸಿ ಮನೆ ಹಂಚಿಕೆ ಮಾಡಬೇಕೆಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.