ಹಾವೇರಿ: ಭ್ರಷ್ಟಾಚಾರ ನಿಯಂತ್ರಣ ಮಾಡುವುದಾಗಿ ಯಾರಾದರೂ ಹೇಳಿದರೆ, ಅವರನ್ನು ಮೊದಲು ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು. ಏಕೆಂದರೆ, ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ರೈತ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ರೈತ ಸಂಘದಿಂದ ಸೋಮವಾರ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ 20 ವರ್ಷಕ್ಕೊಮ್ಮೆ ನೋಟುಗಳ ಸಮಗ್ರ ಬದಲಾವಣೆ ಮಾಡಬೇಕು ಮತ್ತು ಅಕ್ರಮ ಆಸ್ತಿ ಪತ್ತೆಯಾದ ತಕ್ಷಣವೇ ಆ ವ್ಯಕ್ತಿಗಳು ಯಾವುದೇ ಹುದ್ದೆಯಲ್ಲಿದ್ದರೂ ಅವರನ್ನು ಕೆಳಗಿಳಿಸಿ ಪತ್ತೆಯಾದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ ಅಭಿಪ್ರಾಯಪಟ್ಟರು.

ರಾಜ್ಯದ ಬಜೆಟ್ 1.17 ಲಕ್ಷ ಕೋಟಿ ರೂಪಾಯಿ ದಾಟಿದೆ. ಆದರಲ್ಲಿ 71 ಸಾವಿರ ಕೋಟಿ ರೂಪಾಯಿ ಅಧಿಕಾರಿ ಹಾಗೂ ಸರ್ಕಾರಿ ನೌಕರರ ಸಂಬಳಕ್ಕೆ ಹೋಗಲಿದೆ. ಉಳಿದಿದ್ದರಲ್ಲಿ ಅಭಿವೃದ್ಧಿ ಮಾಡಬೇಕಿದೆ ಎಂದ ಅವರು, ಲಕ್ಷ ಕೋಟಿ ರೂಪಾಯಿ ಬಜೆಟೆಎ ಇದ್ದರೂ ಎಲ್ಲರಿಗೂ ಅನ್ನ ನೀಡುವ ರೈತರು ನೆಮ್ಮದಿಯಿಂದ ಮೂರು ಹೊತ್ತು ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಕೋಟಿಗಟ್ಟಲೇ ಲೂಟಿ ಹೊಡೆಯುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಏನು ಮಾಡದ ಸ್ಥಿತಿಯಲ್ಲಿ ಜನರಿದ್ದಾರೆ ಎಂದು ಹೇಳಿದರು.

ಪ್ರತಿ ತಿಂಗಳು ಮುಗಿಯುತ್ತಿದ್ದಂತೆ ಸರ್ಕಾರಿ ನೌಕರರ, ಶಾಸಕರ ಸಂಬಳ ಬ್ಯಾಂಕ್ಗೆ ಜಮೆಯಾಗುತ್ತದೆ. ಅದೇ ನಮ್ಮ ಬಡ ರೈತರ, ಮಹಿಳೆಯರ ನೀಡುವ ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನದಂತಹ ಮಾಸಾಶನಗಳು ಆರು ತಿಂಗಳಾದರೂ ಬರುವುದಿಲ್ಲ. ಈ ರಾಜಕಾರಣಿಗಳಿಗೆ, ಅಧಿಕಾರ ನಡೆಸುವ ಅಧಿಕಾರಿಗಳಿಗೆ ಬಡವರ ಹಾಗೂ ದೀನ ದಲಿತ ಬಗ್ಗೆ ಕಾಳಜಿ ಇಲ್ಲದಿರುವುದು ಇದಕ್ಕೆ ಕಾರಣ ಎಂದರು.

ದೇಶಕ್ಕೆ ಆಹಾರ ನೀಡುವುದರ ಜತೆಗೆ ಶೇ 70 ರಷ್ಟು ಉದ್ಯೋಗ ಸೃಷ್ಟಿಗೆ ನೇರ ಕಾರಣ ರೈತರಾಗಿದ್ದಾರೆ. ಸಣ್ಣ ಪುಟ್ಟ ವ್ಯಾಪಾರ ಹಾಗೂ ಉದ್ಯೋಗ ಮಾಡುವ ನೌಕರರ ವೇತನ ಹೆಚ್ಚಳಕ್ಕೆ ಆಯೋಗ ರಚನೆ ಮಾಡಿರುವ ಸರ್ಕಾರ, ರೈತರ ಭದ್ರತೆಗಾಗಿ ಯಾವುದಾದರೂ ಆಯೋಗ ರಚನೆಯಾಗಿದೆಯೇ ಎಂದು ಪ್ರಶ್ನಿಸಿದ ಅವರು, ಜಾತಿ, ಹಣಬಲದಿಂದ ಆಯ್ಕೆಯಾಗಿ ಜನರ ಹಣದಲ್ಲಿ ಐದು ವರ್ಷಗಳ ಕಾಲ ಮಜಾ ಮಾಡುವುದೇ ಪ್ರಜಾಪ್ರಭುತ್ವವಾಗಿರುವುದು ದುರಂತದ ಸಂಗತಿ ಎಂದರು.

ರಾಜ್ಯದಲ್ಲಿ 26 ಲಕ್ಷ ರೈತರು ಪಂಪ್ಸೆಟ್ ಬಳಸುತ್ತಿದ್ದಾರೆ. ಪ್ರತಿವರ್ಷ ಪಂಪ್ಸೆಟ್ಗಳ ಬಳಕೆಗೆ ಅವಶ್ಯಕವಿರುವ ವಿದ್ಯುತ್ನ್ನು ಸರ್ಕಾರ ನೀಡದೇ ಶೇ 30ರಷ್ಟು ಬೆಳೆಹಾನಿ ಅನುಭವಿಸಿದ್ದೇವೆ. ಆದರೂ ಸಹ ಪ್ರತಿವರ್ಷ ರಾಜ್ಯದ 6ಕೋಟಿ ಜನರಿಗೆ ಆಹಾರ ನೀಡಿದ್ದೆೀವೆ. ಸರ್ಕಾರಕ್ಕೆ ತೆರಿಗೆ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ಆದಾಯ ನೀಡಿದ್ದೇವೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದೇವೆ. ನಮ್ಮ ಕೊಡುಗೆಯನ್ನು ಯಾವ ಆರ್ಥಿಕ ತಜ್ಞರಾಗಲಿ, ಯಾವ ಸರ್ಕಾರಗಳಾಗಲಿ ಗಮನಿಸಿವೆ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಶಾಸಕರಾಗಿ ಆಯ್ಕೆಯಾದ ಕೆ.ಎಸ್. ಪುಟ್ಟಣಯ್ಯ ಅವರನ್ನು ಜಿಲ್ಲಾ ರೈತ ಸಂಘದಿಂದ ಸನ್ಮಾನಿಸಲಾಯಿತು.
ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸೋಮುಗುದ್ದು ರಂಗಸ್ವಾಮಿ, ಕಾರ್ಯಾಧ್ಯಕ್ಷ ಬಿ.ಸಿ. ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ರೈತ ಮುಖಂಡರಾದ ಆವರಗೇರಿ ರುದ್ರಮುನಿ, ಜಿ.ಎ. ಹಿರೇಮಠ, ರವಿಕುಮಾರ ಬನ್ನೂರ, ಲಕ್ಷ್ಮಿಕಾಂತ ಹುಲಗೂರ ಇತರರು ವೇದಿಕೆಯಲ್ಲಿದ್ದರು. ಸಾವಿರಾರು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ನಗರದ ಸಿದ್ಧಪ್ಪ ಹೊಸಮನಿ ವೃತ್ತದಲ್ಲಿರುವ ಗೋಲಿಬಾರ್ನಲ್ಲಿ ಮೃತಪಟ್ಟ ರೈತರ ವೀರಗಲ್ಲಿನ ಎದುರು ಒಂದು ನಿಮಿಷ ಮೌನ ಆಚರಿಸಿ ನಂತರ ರೈತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.