ಮಂಗಳವಾರ, ಜೂನ್ 15, 2021
27 °C

ಮಂಗಳ ಯಾನಕ್ಕೆ ಚೀನಾ ಸಮರ್ಥ: ವಿಜ್ಞಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌(ಪಿಟಿಐ): ‘ಮಂಗಳ ಗ್ರಹದ ಮೇಲೆ ಸಂಶೋಧನೆ ನಡೆಸಲು ಚೀನಾ ದೇಶಕ್ಕೆ ಸಾಮರ್ಥ್ಯ ಇದೆ. ಕೆಂಪು ಗ್ರಹಕ್ಕೆ ಉಪಗ್ರಹ ಕಳುಹಿಸುವ ಕುರಿತು ಸರ್ಕಾರ ನಿರ್ಧಾರ ತೆಗೆದು­ಕೊಳ್ಳಬೇಕಾಗಿದೆ’ ಎಂದು ಚೀನಾದ ಚಾಂಗ್‌–3 ಚಂದ್ರ­ಯಾನ ಯೋಜನೆ­ಯ ಹಿರಿಯ ವಿಜ್ಞಾನಿ ಹೇಳಿದ್ದಾರೆ.



‘ಮಂಗಳನ ಕಕ್ಷೆಗೆ ಉಪಗ್ರಹವನ್ನು ಕಳುಹಿಸುವುದು ಮತ್ತು ಗ್ರಹದ ಕುರಿತು ಸಂಶೋಧನೆ ನಡೆಸಲು ಚೀನಾಕ್ಕೆ ಸಾಮರ್ಥ್ಯ ಇದೆ. ಅಲ್ಲದೇ, ಕಳುಹಿಸಿದ ಉಪಗ್ರಹದೊಂದಿಗೆ ಸಂವಹನ ಏರ್ಪಡಿ­ಸುವುದು ಮತ್ತು ಅದರ ಮೇಲೆ ಹಿಡಿತ ಸಾಧಿಸುವುದರಲ್ಲಿ ಯಾವುದೇ ತಂತ್ರ­ಜ್ಞಾನ ಸಮಸ್ಯೆ ಇಲ್ಲ’ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.



ಉಪಗ್ರಹ ಕ್ಷಿಪಣಿಗಳ ಕ್ಷೇತ್ರದಲ್ಲಿ ಚೀನಾ ಅಸಾಧಾರಣ ಬೆಳವಣಿಗೆ ಕಂಡಿದೆ. ಚಾಂಗ್‌–3 ಚಂದ್ರಯಾನ ಯೋಜನೆ,  ಈ ಮುಂಚೆ ಕಾರ್ಯ­ನಿರ್ವ­ಹಿಸುತ್ತಿರುವ ಚಂದ್ರಯಾನ ಯೋ­ಜ­ನೆಯ ವಿಸ್ತೃತ ರೂಪ. ಕಳೆದ ವರ್ಷ ಡಿ. 14 ರಂದು ಚಂದ್ರನ ಅಂಗಳಕ್ಕೆ ಇಳಿದ ಯುಟು ರೋವರ್‌ ಕೆಲ ಸಮಸ್ಯೆ ಎದುರಿಸಿದ ನಂತರ ಹೊಸ ಯೋಜನೆಯನ್ನು ಸಿದ್ದಪಡಿಸಲಾಗಿದೆ.



.ಭಾರತ ಕಳೆದ ವರ್ಷ ನವೆಂಬರ್‌ನಲ್ಲಿ ಮಂಗಳಗ್ರಹಕ್ಕೆ ಉಪ್ರಗಹ ಕಳುಹಿಸಿದ್ದನ್ನು ಚೀನಾ ಆಸಕ್ತಿಯಿಂದ ವೀಕ್ಷಿಸಿತ್ತು. ಅದೇ ರೀತಿ ಮಂಗಳನ ಮೇಲೆ ಹೊಸ ಉಪ­ಗ್ರಹವನ್ನು ಕಳುಹಿಸಲು ಕಾತರವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.