ಶಾಲಾ ಶಿಕ್ಷಕನಾಗಿದ್ದರೆ ಸಾಕು ತಾನು ಮಕ್ಕಳ ಸಾಹಿತಿಯೇ ಎಂದು ಅನೇಕರು ಭಾವಿಸಿದಂತಿದೆ. ಇನ್ನು ಕೆಲವರು ಅಂತ್ಯ ಪ್ರಾಸ ಕೂಡಿಸಿದರೆ ಸಾಕು ಮಕ್ಕಳ ಕವಿತೆಯಾಗಿ ಬಿಡುತ್ತದೆ ಅಂದುಕೊಂಡಿದ್ದಾರೆ. ಅವೆರಡೂ ಅಲ್ಲದೆಯೂ ಗದ್ಯಾತ್ಮಕವಾಗಿಯೇ ಬರೆದು ಪುಸ್ತಕ ಪ್ರಕಟಿಸಿಯೂ ಬಿಟ್ಟಿದ್ದಾರೆ ಮತ್ತೆ ಕೆಲವರು, ಇದು ಸದ್ಯದ ಮಕ್ಕಳ ಸಾಹಿತ್ಯದ ದುರಂತಗಳಲ್ಲೊಂದು. ದಪ್ಪ ಅಕ್ಷರಗಳಲ್ಲಿ ಮುದ್ರಿಸಿದರೆ, ಸಣ್ಣದೊಂದು ಚಿತ್ರ ಸೇರಿಸಿಬಿಟ್ಟರೆ ಕವಿತೆಗಳಾಗಿಬಿಡುವಂತಿದ್ದರೆ ‘ಎಲ್ಲರೂ ಮಕ್ಕಳ ಕವಿಗಳೇ ಹೌದು’ ಎನ್ನಬೇಕಾಗುತ್ತದೆ!

ಭಾಷಾರೂಪ ತಳೆಯುವ ಮುನ್ನ ಭಾವವೇ ಮಕ್ಕಳದಾಗಿರಬೇಕಾಗುತ್ತದೆ; ಬಚ್ಚಿಟ್ಟುಕೊಂಡಿದ್ದ ರೋಚಕ ಭಾವ ಥಟ್ಟನೆ ಹೊರಹೊಮ್ಮುವಾಗ ತಂತಾನೇ ಭಾಷೆಯನ್ನು ಸೆರೆ ಹಿಡಿದುಬಿಡುತ್ತದೆ! ಆ ಪದಗಳೆಲ್ಲ ಮಕ್ಕಳವೇ. ಲಯಗಳೆಲ್ಲ ಅವರ ಕುಣಿತ ಭಣಿತಗಳೇ. ಸಾಲುಗಳ ಸಹಜವಾದ ಓಟ ಅವರ ಖುಷಿಯ ಓಟವೇ ಆಗಿಬಿಟ್ಟಿರುತ್ತದೆ. ಇದು ಮಕ್ಕಳ ಪದ್ಯಗಳ ಹಿಂದಿರುವ, ಇರಬೇಕಾದ ಮೋಡಿ! ಅದೊಂದು ಅಚ್ಚರಿಯ ಕಲ್ಪನೆಯ ಜಗತ್ತು. ಅದಕ್ಕೆ ಕಾಲದೇಶಾದಿಗಳ ಹಂಗಿಲ್ಲ; ಸ್ಥಳದ ಮಿತಿಯಿಲ್ಲ. ಬಯಲಾಗುವ ಬೆರಗೇ ಎಲ್ಲ!

ಮಗುವಿನ ಮನಸ್ಸು ಬಹಳ ಮಿದುವಾದುದು. ಅದರ ಭಾವ ಅತ್ಯಂತ ಸಹಜವಾದುದು. ಅದರ ಆಟ ಮುಕ್ತವಾದುದು. ನೋಟವಂತೂ ಹದ್ದಿನ ಕಣ್ಣನ್ನೂ ಮೀರಿದ್ದು. ಅದರ ಆಲೋಚನೆಯ ಸಮೀಪಕ್ಕೆ ಹೋಗಲೂ ಹಿರಿಯರಿಗೆ ಸಾಧ್ಯವಾಗದು. ಅದೊಂದು ಮಾಯಕ ಜಗತ್ತು; ಮಾಂತ್ರಿಕಲೋಕ; ನಿಗೂಢ ಪ್ರಪಂಚ. ಇದನ್ನು ಬಲ್ಲವನು, ಆ ಲೋಕಕ್ಕೆ ಹೋಗಬಲ್ಲವನು. ಅದನ್ನು ಭೇದಿಸಬಲ್ಲವನು ಮಾತ್ರ ಅವರಿಗೆ ಬರೆಯಲು ಯೋಗ್ಯ. ಇಲ್ಲವಾದಲ್ಲಿ ವ್ಯರ್ಥ ಸರ್ಕಸ್ಸಾದೀತು ಅವನ ಬರವಣಿಗೆ!
ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸುವ ಪ್ರಾಧ್ಯಾಪಕರಲ್ಲಿ ಕೆಲವರು ಮಕ್ಕಳಿಗೆ ಬರೆಯುತ್ತಿದ್ದಾರೆ.

ಅವರ ಹಲವು ರಚನೆಗಳು ಮಕ್ಕಳ ಮನಸ್ಸನ್ನು ಮೀಟುತ್ತಿವೆ. ಆದರೆ ಮತ್ತೆ ಕೆಲವು ಕ್ಲಿಷ್ಟ ಪದಗಳಿಂದ ಕೂಡಿದ್ದು ಉದ್ದುದ್ದ ಹರಿದು ಮಕ್ಕಳಲ್ಲಿ ಗೊಂದಲವನ್ನು ಸೃಷ್ಟಿಸುತ್ತಿವೆ! ಕೆಲವರು ಪ್ರಸಿದ್ಧಿಗಾಗಿ ಆತುರಾತುರವಾಗಿ ಪದ್ಯಗಳನ್ನು ಹೆಣೆಯುತ್ತಿರುವುದು, ಪ್ರಶಸ್ತಿಗಳ ಮೇಲೆ ಕಣ್ಣಿಟ್ಟು ಹೊಸೆಯುತ್ತಿರುವುದು ವಿಷಾದನೀಯ. ಹಿರಿಯರ ಕವಿಗಳಿಗಿಂತಲೂ ಕಿರಿಯರ ಕವಿಗಳು ತುಂಬ ಎಚ್ಚರಿಕೆಯಿಂದ ಬರೆಯಬೇಕು; ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು. ಅಲ್ಲಿ ಹಿರಿಯರ ಮನಸ್ಸಿನ ಪಾರುಪತ್ಯಕ್ಕೆ ಅವಕಾಶ ಕೂಡದು. ಎಳೆಯರ ಹೃದಯವನ್ನು ಕಳಕಳಿಯಿಂದ ಹೊಕ್ಕು ಲವಲವಿಕೆಯ ಪದಗಳು ಹೊಮ್ಮಿ ಬರಬೇಕು. ಅಂಥವರ ರಚನೆ ಹಾಳೆಯ ಹಾದಿಯಲ್ಲಿ ತಂತಾನೆ ಸರಾಗ ಓಡುತ್ತದೆ; ಸಹಜತೆಯ ಭಾವ ಜಲದಲ್ಲಿ ಮಿಂದೇಳುತ್ತದೆ; ತನಿಯಾಗಿ ಬನಿಯಾಗಿ ರೂಪು ತಳೆಯುತ್ತದೆ; ಲಯಗಳನ್ನು ಹುಡುಕಿಕೊಳ್ಳುತ್ತದೆ; ತಿರುವು ಮುರಿವುಗಳನ್ನು ತಾನೇ ತಡಕಿ ತಡಕಿ ಮುನ್ನಡೆಯುತ್ತದೆ.

ವಸ್ತು ಬಹಳ ಅಪರೂಪದ್ದಾಗಿರಬೇಕು; ಅಚ್ಚರಿ ಮೂಡಿಸಬೇಕು; ಆನಂದ ಉಕ್ಕಿಸಬೇಕು. ವಾಸ್ತವಕ್ಕಿಂತ ಅದ್ಭುತ ರಮ್ಯತೆಯೇ ಹೆಚ್ಚಿದ್ದರೂ ನಡೆದೀತು. ಓದುವಷ್ಟೂ ಹೊತ್ತು ಅವರ ಮನಸ್ಸನ್ನು ಸೆರೆ ಹಿಡಿಯಬಲ್ಲ ಸಾಮರ್ಥ್ಯ ಅಗತ್ಯ. ಕುತೂಹಲ ಕೆರಳಿಸುತ್ತ, ತಿಳಿವಳಿಕೆ ಹೆಚ್ಚಿಸುತ್ತ, ಖುಷಿಯ ಹೊಳೆಯನ್ನು ಹರಿಸುವ ರಚನೆಗೇ ಆದ್ಯತೆ ಮಗು ಅಂಥಾದ್ದನ್ನು ಮಾತ್ರ ಓದತೊಡಗುತ್ತದೆ ಇಲ್ಲವಾದಲ್ಲಿ ಪುಸ್ತಕವನ್ನು ಕೆಳಗಿಟ್ಟುಬಿಡುತ್ತದೆ!

ಹಲಗೆ, ಬಳಪ, ಪುಸ್ತಕ, ಶಾಲೆ, ಅಮ್ಮ, ಅಪ್ಪ, ಬಣ್ಣ, ಬುಗುರಿ, ಪ್ರಾಣಿ ಪಕ್ಷಿ, ದೆವ್ವ, ದೇವರು ಇವೆಲ್ಲ ಅದೇ ಹಳೆಯ ಅವತಾರದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತುಗಳಾಗಿದ್ದು ದೀಪದ ಸುತ್ತ ಪತಂಗ ಸುತ್ತುವಂತೆ ಗಿರಕಿ ಹೊಡೆದು ಸಾಯುತ್ತಿವೆ! ಕಾಲಕ್ಕೆ ತಕ್ಕಂತೆ ರಚನೆಗಳು ಮೂಡುವುದು ಮುಖ್ಯವಾಗುತ್ತದೆ. ಇವತ್ತಿನ ತಂತ್ರಜ್ಞಾನ; ಗಣಕ ಜ್ಞಾನ, ವಿಜ್ಞಾನ ವಿಚಾರಗಳೂ ಸೂಕ್ಷ್ಮವಾಗಿ ತಳಕು ಹಾಕಿಕೊಳ್ಳಬೇಕು. ನಾವೀನ್ಯವನ್ನು ಪಡೆದು ಹೊಸ ಹೊಸ ನೋಟಗಳಾಗಬೇಕು. ಓದಿದ ಕೂಡಲೇ ಮಗುವಿನ ಮುಖದಲ್ಲಿ ಮಂದಹಾಸ, ಮನಸ್ಸಿನಲ್ಲಿ ಉಲ್ಲಾಸ, ದೇಹಕ್ಕೆ ಉತ್ಸಾಹ ಮೂಡಿಸುವ ರಚನೆಗಳೇ ನಿಜವಾದ ಮಕ್ಕಳ ಸಾಹಿತ್ಯ ಎನ್ನಿಸಿಕೊಳ್ಳಬಲ್ಲವು.

ಮಕ್ಕಳನ್ನು ಬಹಳ ಮಂದಿ ಸಾಮಾನ್ಯ ಮಟ್ಟದಲ್ಲಿ ಅಂದಾಜಿಸುತ್ತಾರೆ. ಆ ಕಾಲ ಹೋಗಿದೆ. ಹೊಸ ಕಾಲ, ಹೊಸ ನೀರು ಬಂದಿದೆ. ನಾವು ಈಗ ಮಕ್ಕಳನ್ನು ಇಡಿಯಾಗಿ ಬೇರೆಯದೇ ರೀತಿಯಲ್ಲಿ ನೋಡಬೇಕಾಗಿದೆ. ಬೇರೆ ಬಗೆಯ ರಚನೆಗಳನ್ನೇ ಅವರಿಗೆ ಕಾಣಿಕೆಯಾಗಿ ನೀಡಬೇಕಿದೆ. ಅವರ ವಯೋಮಾನ, ಆಲೋಚನೆ, ಆಸಕ್ತಿಗಳಿಗೆ ಅನುಗುಣವಾಗಿ ಬರೆದಲ್ಲಿ ಅವರು ಪ್ರೀತಿಯಿಂದ ಅಪ್ಪಿಕೊಂಡಾರು. ಆ ಸಾಹಿತ್ಯವನ್ನು ಜೋಪಾನವಾಗಿ ತಮ್ಮ ಕಪಾಟಿನಲ್ಲಿ ಜೋಡಿಸಿಕೊಂಡಾರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.