ಸೋಮವಾರ, ಮೇ 17, 2021
25 °C

ಮದ್ಯ ಬಾಟಲಿಗೆ ಬೆಂಕಿ ಹಚ್ಚಿ ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೂಡಂಗಡಿಗಳ ಮೇಲೆ ದಾಳಿ ಮಾಡಿದ ಮಹಿಳೆಯರು ಮದ್ಯದ ಬಾಟಲ್‌ಗಳನ್ನು ಹೊರ ತಂದು ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಅಕ್ರಮ ಮದ್ಯ ಮಾರಾಟ ದಿಂದ ಬೇಸತ್ತ ಗ್ರಾಮದ ನೂರಾರು ಮಹಿಳೆಯರು ಮೆರವಣಿಗೆ ನಡೆಸಿ ತಹ ಶೀಲ್ದಾರ ಹಾಗೂ ಅಬಕಾರಿ ಅಧಿ ಕಾರಿಗಳ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನಾ ನಿರತ ಮಹಿಳೆಯರನ್ನು ಉದ್ದೇಶಿಸಿ ಮಂಜುನಾಥ ಪೂಜಾರ ಮಾತನಾಡಿ ಅಕ್ರಮ ಮದ್ಯ ಮಾರಾಟ ದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಬಾರ್ ಮಾಲೀಕ ರೊಂದಿಗೆ ಶಾಮೀಲಾಗಿರುವ ಅಧಿಕಾರಿ ಗಳು ಮದ್ಯ ಮಾರಾಟಕ್ಕೆ ಅಕ್ರಮವಾಗಿ ಅನುಮತಿ ನೀಡಿರುವುದರಿಂದ ಗ್ರಾಮ ಗಳಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.ಕುಡಿತದ ಚಟಕ್ಕೆ ಬಲಿಯಾಗಿರುವ ಯುವಕರಿಂದ ಬಡ ಕುಟುಂಬಗಳು ತುತ್ತು ಕೂಳಿಗೂ ಪರದಾಡುವಂತಾಗಿದೆ, ಕೂಡಲೆ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಆಗ್ರಹಿಸಿದರು. ತಾಲೂಕಿನ ಪ್ರತಿಯೊಂದು ಗ್ರಾಮದ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸ್ಥಳೀಯ ಶಾಸಕರು ಮಾತ್ರ ನಿರ್ಲಕ್ಷ್ಯ ಭಾವನೆ ಹೊಂದಿದ್ದಾರೆ ಎಂದು ಆರೋಪಿಸಿದರು.ಗ್ರಾ.ಪಂ. ಸದಸ್ಯೆಯರಾದ ಪುಟ್ಟವ್ವ ಓಲೇಕಾರ, ಲಕ್ಷ್ಮೀ ಅಳಲಗೇರಿ, ಹೊನ್ನಮ್ಮ ಮರಿಯಮ್ಮನವರ, ರೇಣುಕಾ ಬೆಳಕೇರಿ, ಶಾಂತವ್ವ ಕೆಂಚನ ಗೌಡ್ರ, ರತ್ನವ್ವ ಕಂಬಳಿ, ಕುಸುಮವ್ವ ಓಲೇಕಾರ, ಗಂಗವ್ವ ಕುರುಬರ, ಲಕ್ಷ್ಮವ್ವ ಅಳಲಗೇರಿ, ಬಸವರಾಜ ಕಾಕೋಳ, ಹೊನ್ನಪ್ಪ ಉದ್ದನಕೇರಿ, ಬೀರಪ್ಪ ಮರಿಯಮ್ಮನವರ, ಬೀರಪ್ಪ ಹಾದಿ ಮನಿ, ನಿಂಗರಾಜ ಹೊನ್ನಾ ಉನಾ ಯ್ಕರ, ಸಿದ್ಧಲಿಂಗಯ್ಯ ಹಿರೇಮಠ, ಉಚ್ಚಂಗೆಮ್ಮದೇವಿ, ರೇಣುಕಾದೇವಿ, ಗ್ವಾರಪ್ಪ-ಗೊರವಮ್ಮನವರ ಮಹಿಳಾ ಸಂಘಗಳ ಸದಸ್ಯೆಯರು ಪ್ರತಿ ಭಟನೆ ಯಲ್ಲಿ ಪಾಲ್ಗೊಂಡಿದ್ದರು. ಸಮಯಕ್ಕೆ ಸರಿಯಾಗಿ ಆಗಮಿಸಿದ ಪೊಲೀಸರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಮಾಲು ಸಮೇತ ವಶಕ್ಕೆ ತೆಗದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.