ಸೋಮವಾರ, ಜನವರಿ 20, 2020
25 °C
ಮಿನುಗುಮಿಂಚು

ಮರಳಿನ ಮ್ಯಾರಥಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಳಿನ ಮ್ಯಾರಥಾನ್ (ಮ್ಯಾರಥಾನ್ ಡೆಸ್ ಸೇಬಲ್ಸ್) ಮೊರಾಕ್ಕೋದ ಸಹಾರಾ ಮರುಭೂಮಿಯಲ್ಲಿ ಪ್ರತಿ ವರ್ಷ ನಡೆಯುತ್ತದೆ. ವಿಶ್ವದ ಅತಿ ಕಷ್ಟಕರವಾದ ನಡಿಗೆಯ ಸ್ಪರ್ಧೆ ಇದು. ಆರು ಸಾಮಾನ್ಯ ಮ್ಯಾರಥಾನ್‌ಗಳಿಗೆ ಇದು ಸರಿಸಮಾನವಾದದ್ದು.ಈ ಸ್ಪರ್ಧೆಯಲ್ಲಿ ಭಾಗವಹಿಸಲು ಒಂದು ವರ್ಷ ಮುಂಚಿತವಾಗಿಯೇ ನೋಂದಾಯಿಸಬೇಕು. ಅಲ್ಲದೆ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಬೇಕು.

ಫ್ರಾನ್ಸ್‌ನ ಪ್ಯಾಟ್ರಿಕ್‌ ಬಾವರ್‌ 1986ರಲ್ಲಿ ಈ ಸ್ಪರ್ಧೆಯನ್ನು ಪ್ರಾರಂಭಿಸಿದರು. ಅವರು 1984ರಲ್ಲಿ 12 ದಿನಗಳಲ್ಲಿ ಮರುಭೂಮಿಯ 350 ಕಿ.ಮೀ. ದೂರವನ್ನು ಕ್ರಮಿಸಿದ್ದರು. ತಮ್ಮ ನಡಿಗೆಯ ಅನುಭವವನ್ನು ಇಡೀ ಜಗತ್ತಿಗೆ ಹಂಚಬೇಕು ಎಂಬ ಉದ್ದೇಶದಿಂದ ಅವರು ಮ್ಯಾರಥಾನ್‌ ಪ್ರಾರಂಭಿಸಿದರು.ವೃತ್ತಿಪರ ಹಾಗೂ ಹವ್ಯಾಸಿ ಅಥ್ಲೀಟ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅವರು ತಂಡಗಳಲ್ಲಿ ಅಥವಾ ವೈಯಕ್ತಿಕವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಮರಳಿನ ಮ್ಯಾರಥಾನ್ ಸ್ಪರ್ಧೆಯನ್ನು ಆರು ಹಂತಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ 80 ಕಿ.ಮೀ.ನಷ್ಟು ದೂರ ಹಗಲೂ ರಾತ್ರಿ ನಿರಂತರವಾಗಿ ನಡೆಯುವುದು ಅತಿ ಕಷ್ಟದ ಹಂತ. 32 ಕಿ.ಮೀ.ನಷ್ಟು ಮರಳಿನ ಗುಡ್ಡೆಗಳನ್ನು ಹಾದು ಹೋಗಬೇಕಾದದ್ದು ಇನ್ನೊಂದು ಕಷ್ಟಕರ ಗುರಿ. ನಿಗದಿತ ಅವಧಿಯೊಳಗೇ ಗುರಿ ತಲುಪುವ ಸವಾಲು ಎದುರಲ್ಲಿ ಇರುತ್ತದೆ. ಇಲ್ಲವಾದಲ್ಲಿ ಮುಂದಿನ ಹಂತಕ್ಕೆ ಅರ್ಹತೆ ಸಿಗುವುದಿಲ್ಲ.1994ರಲ್ಲಿ ಇಟಲಿಯ ಒಲಿಂಪಿಕ್‌ ಪೆಂಟಥ್ಲಾನ್‌ ಚಾಂಪಿಯನ್‌ ಮೌರೊ ಪ್ರಾಸ್ಫೆರಿ ಮರಳಿನ ಸುಂಟರಗಾಳಿ ಎದ್ದು ಸ್ಪರ್ಧೆಯ ನಡುವೆಯೇ ನಾಪತ್ತೆಯಾದರು. ಅವರು ಒಂಬತ್ತು ದಿನಗಳ ನಂತರ ಅಲ್ಜೀರಿಯಾದಲ್ಲಿ ಪತ್ತೆಯಾದರು. ಬಾವಲಿಗಳನ್ನು ತಿಂದು, ಕಾಯಿಸಿದ ಮೂತ್ರ ಕುಡಿದು ಅವರು ಅಷ್ಟು ದಿನ ಬದುಕಿದ್ದರು. ಮೊರೊಕ್ಕೋದಾ ಲಾಹ್ಸೆನ್‌ ಅಹನ್ಸಲ್‌ ಹತ್ತು ಸಲ ಈ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ಪ್ರತಿಕ್ರಿಯಿಸಿ (+)