ಶನಿವಾರ, ಮಾರ್ಚ್ 6, 2021
19 °C

ಮಹಾರಾಷ್ಟ್ರ, ಗುಜರಾತ್‌ನಲ್ಲಿ ಲಘು ಭೂಕಂಪನ:ಹಾನಿಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ, ಗುಜರಾತ್‌ನಲ್ಲಿ ಲಘು ಭೂಕಂಪನ:ಹಾನಿಯಿಲ್ಲ

ಅಹಮದಾಬಾದ್/ಪುಣೆ/ಮುಂಬೈ (ಪಿಟಿಐ): ನಾಲ್ಕು ದಿನಗಳ ಹಿಂದೆ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪನ ಹುಟ್ಟಿಸಿದ್ದ ಆತಂಕದ ಅಲೆಗಳು ಸ್ಮೃತಿಪಟಲದಿಂದ ಮರೆಯಾಗುವ ಮುನ್ನವೇ ಗುಜರಾತ್‌ನ ಕಛ್ ಹಾಗೂ ಪಶ್ಚಿಮ ಮಹಾರಾಷ್ಟ್ರದ ಕೆಲವೆಡೆ ಶನಿವಾರ ಲಘು ಭೂಕಂಪನ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 4.1 ಮತ್ತು 4.9ರ ತೀವ್ರತೆಯ ಕಂಪನಗಳು ಗುಜರಾತ್ ಹಾಗೂ ಮಹಾರಾಷ್ಟ್ರವನ್ನು ನಡುಗಿಸಿವೆ.ಬೆಳಿಗ್ಗೆ 8.53ರ ಸಮಯದಲ್ಲಿ ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ಕಂಪನ ಸಂಭವಿಸಿತು. ಈ ಕಂಪನದ ಕೇಂದ್ರಬಿಂದು ಕಛ್ ಜಿಲ್ಲೆಯ ವಮ್ಕಾ ತಾಲ್ಲೂಕಿನಲ್ಲಿದ್ದು, ತೀವ್ರತೆ 4.1ರಷ್ಟಿತ್ತು. ಕಛ್‌ನಲ್ಲಿ 2.9ರ ತೀವ್ರತೆಯ ಮರುಕಂಪನವೂ ಸಂಭವಿಸಿತು. ಸೌರಾಷ್ಟ್ರದ ಕೆಲ ಭಾಗಗಳಲ್ಲೂ ಕಂಪನದ ಅನುಭವವಾಯಿತು. ಕಛ್ ಪ್ರದೇಶ ಎರಡು ಭೂಫಲಕಗಳು ಸೇರುವ ರೇಖೆಯ ಮೇಲಿದ್ದು, ಭೂಮಿಯೊಳಗೆ ಸದಾ ಜ್ವಾಲಾಮುಖಿ ಚಟುವಟಿಕೆ ನಡೆಯುತ್ತಿರುತ್ತದೆ ಎಂದು ಭೂಕಂಪನ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. 
ಕಛ್‌ನಲ್ಲಿ ಭೂಮಿ ನಡುಗಿದ ಎರಡು ಗಂಟೆಗಳ ನಂತರ 10.50ಕ್ಕೆ ಮುಂಬೈ ಸೇರಿದಂತೆ ಪಶ್ಚಿಮ ಮಹಾರಾಷ್ಟ್ರ, ಕೊಂಕಣ ಪ್ರದೇಶ, ಥಾಣೆ, ರಾಯಗಡ, ರತ್ನಗಿರಿ, ಸಿಂಧದುರ್ಗ, ಸತಾರ, ಪುಣೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಯಿತು. 

 

ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ರಷ್ಟಿದ್ದು, ಭೂಕಂಪನದ ಕೇಂದ್ರಬಿಂದು ಕೊಯ್ನಾ ಜಲಾಶಯದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಸತಾರ ಜಿಲ್ಲೆಯ ಗೊಷತ್‌ವಾಡಿ ಗ್ರಾಮದಲ್ಲಿತ್ತು ಎಂದು ಪುಣೆಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಕೊಯ್ನಾ ಜಲಾಶಯಕ್ಕೆ ಯಾವುದೇ ಹಾನಿಯಾಗಿಲ್ಲ.ಅದಾದ ಒಂದು ಗಂಟೆಯ ನಂತರ ಪಶ್ಚಿಮ ಮಹಾರಾಷ್ಟ್ರದಲ್ಲಿ 4.4ರ ತೀವ್ರತೆಯ ಮರುಕಂಪನ ಸಂಭವಿಸಿತು. ಈ ಕಂಪನಗಳಿಂದ ಕಛ್ ಹಾಗೂ ಮಹಾರಾಷ್ಟ್ರಗಳಲ್ಲಿ ಆಸ್ತಿಪಾಸ್ತಿ ಅಥವಾ ಜೀವಹಾನಿಯಾದ ವರದಿಯಾಗಿಲ್ಲ.

ಮುಂಬೈನಲ್ಲಿ ಭೂಕಂಪನದ ಅನುಭವವಾದವರಲ್ಲಿ ಚಿತ್ರನಟ ಅಮಿತಾಬ್ ಬಚ್ಚನ್ ಸಹ ಸೇರಿದ್ದರು. `ಮುಂಬೈನಲ್ಲಿ ಭೂಕಂಪನ..! ಇದು ನಿಮಗೆ ಅನುಭವವಾಯಿತೆ.. ನನಗಾ ಯಿತು...ಬಾಗಿಲು, ಕಟ್ಟಡಗಳು ಕೆಲ ಸಮಯ ಅಲುಗಾಡಿದವು~ ಎಂದು ಅವರು ಕೆಲ ಕ್ಷಣಗಳಲ್ಲೇ ಟ್ವಿಟರ್‌ನಲ್ಲಿ ಬರೆದರು.ತಾರಾಪುರ  ಸುರಕ್ಷಿತ

ನವದೆಹಲಿ (ಪಿಟಿಐ):
ಮಹಾರಾಷ್ಟ್ರದಲ್ಲಿ ಶನಿವಾರ ಸಂಭವಿಸಿದ ಭೂಕಂಪನಗಳಿಂದ ಆ ರಾಜ್ಯದಲ್ಲಿರುವ ಪರಮಾಣು ಸ್ಥಾವರಗಳಿಗೆ ಧಕ್ಕೆಯಾಗಿಲ್ಲ ಎಂದು ಪರಮಾಣು ವಿದ್ಯುತ್ ನಿಗಮದ (ಎನ್‌ಪಿಸಿಐಎಲ್) ನಿರ್ದೇಶಕ ಎಸ್. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.