ಶುಕ್ರವಾರ, ಮೇ 7, 2021
19 °C

ಮಹಿಳಾ ವಿವಿಯಲ್ಲಿ ಹೊಸ ಕೋರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: `ಮಹಿಳಾ ವಿಶ್ವವಿದ್ಯಾಲ ಯದಲ್ಲಿ ಈಗಿರುವ 22 ವಿಭಾಗಗಳ ಜೊತೆಗೆ ಫ್ಯಾಶನ್ ಡಿಸೈನಿಂಗ್, ಟೂರಿಸಂ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್‌ನಂತಹ ಕೆಲವು ಉಪಯುಕ್ತ ಕೋರ್ಸುಗಳನ್ನು ಪ್ರಾರಂಭಿಸಲಾಗುವುದು~ ಎಂದು ರಾಜ್ಯ ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ್  ಹೇಳಿದರು.ಸ್ಥಳೀಯ ಕ.ರಾ.ಬೆಲ್ಲದ ಮಹಾ ವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗಗಳಲ್ಲಿ ಮಂಗಳ ವಾರ ಸಂಜೆ ಏರ್ಪಡಿಸಿದ್ದ ಅಭಿನಂದನೆ ಮತ್ತು ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಪ್ರಸ್ತುತ ಶೇ.8ರಷ್ಟು ವಿದ್ಯಾರ್ಥಿ ಗಳು ಮಾತ್ರ ಉನ್ನತ ವ್ಯಾಸಂಗ ಪೂರೈಸುತ್ತಿದ್ದು, ಶೇ.92ರಷ್ಟು ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಉನ್ನತ ವ್ಯಾಸಂಗವನ್ನು ಮೊಟುಕು ಗೊಳಿಸುತ್ತಿರುವುದು ತುಂಬಾ ಅನಾ ರೋಗ್ಯ ಕರವಾದ ಬೆಳವಣಿಗೆಯಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು.`ವಿವಿಧ ಪರೀಕ್ಷೆಗಳಲ್ಲಿ ಪಠ್ಯ ಪುಸ್ತಕ ಆಧಾರಿತ ಅಂಕಗಳನ್ನು ಗಳಿಸುವಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದು, ಇಂಗ್ಲಿಷ್ ಕಮ್ಯುನಿಕೇಶನ್‌ನಲ್ಲಿ ತುಂಬಾ ಹಿಂದಿರುವುದು ಅವರ ಏಳ್ಗೆಗೆಗೆ ತೀವ್ರ ತೊಡಕಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು~ ಎಂದು ಅವರು ಸಲಹೆ ನೀಡಿದರು.`ರಾಜ್ಯದ ಏಕೈಕ ಮಹಿಳಾ ವಿವಿ ಯಲ್ಲಿ ಈಗಿರುವ ವಿವಿಧ ವಿಭಾಗಗಳ ಜೊತೆಗೆ ಕನ್ನಡದ ಶೇಷ್ಠ ವಚನಕಾರ್ತಿ ಅಕ್ಕಮಹಾದೇವಿಯ ಅಧ್ಯಯನ ಪೀಠ ಸ್ಥಾಪಿಸಬೇಕು~ ಎಂದು ಸಮಾರಂಭದ ಸಾನಿಧ್ಯ ವಹಿಸಿದ್ದ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.`ಮಹಿಳಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಅಕ್ಕಮಹಾದೇವಿ ಅಧ್ಯಯನ ಪೀಠ ಸ್ಥಾಪಿಸಿದರೆ ಅನ್ನದಾ ನೀಶ್ವರರ ಹೆಸರಿನಲ್ಲಿ ಪ್ರತಿವರ್ಷ ಚಿನ್ನದ ಪದಕ ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.

ಕಾಲೇಜು ಮೇಲ್ವಿಚಾರಣಾ ಸಮೀತಿ ಅಧ್ಯಕ್ಷ ಆರ್.ಬಿ.ಡಂಬಳಮಠ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಉಪಾ ಧ್ಯಕ್ಷ ಕಾಂತರಾಜ ಹಿರೇಮಠ ಮಾತ ನಾಡಿದರು. ಜ.ಅ.ವಿದ್ಯಾ ಸಮಿತಿಯ ಗೌರವ ಕಾರ್ಯದರ್ಶಿ ಎ.ಕೆ.ಬೆಲ್ಲದ,  ಆರ್.ಎಲ್.ಪೊಲೀಸ್ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಸಂಗಪ್ಪ ಗದ್ದಿ ವೇದಿಕೆಯ ಮೇಲೆ ಹಾಜರಿದ್ದರು. ಪಿಎಚ್‌ಡಿ ಪದವಿ ಪಡೆದ ಮಕ್ಕಳ ಸಾಹಿತಿ ನಿಂಗು ಸೊಲಗಿ, ಜಿ.ಎನ್.ಜಿಡ್ರಿ, ಆರ್.ಎಚ್.ಜಂಗಣವಾರಿ ಹಾಗೂ ಕವಿವಿಯಿಂದ ಎರಡು ಚಿನ್ನದ ಪದಕ ಪಡೆದ ಬಿ.ಜಿ.ನಾಡಗೌಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಪ್ರಾಚಾರ್ಯ ಎಸ್.ಬಿ.ಕರಿಭರಮಗೌಡರ ಸರ್ವರನ್ನು ಸ್ವಾಗತಿಸಿದರು. ಡಾ.ಎಂ.ಬಿ.ಬೆಳವಟಗಿ ಮಠ ಕಾರ್ಯಕ್ರಮ ನಿರೂಪಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.