ಉಡುಪಿ: `ಕೇಂದ್ರ ಸರ್ಕಾರ ಮಾಡಬೇಕಿದ್ದ ಬಹಳಷ್ಟು ಯೋಜನೆಗಳನ್ನು ತಾವು ಸಂಸದರಾಗಿದ್ದಾಗಲೇ ಮಾಡಿದ್ದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಬಿಜೆಪಿ ಮುಖಂಡರು ಹೇಳುವುದಾರೆ, ನಮ್ಮ ಬಳಿಗೆ ಬಿಜೆಪಿಯವರು ಕಡತ ಹಿಡಿದು ಬಂದು ಕೆಲಸ ಮಾಡಿಸಿಕೊಡಿ ಎಂದು ಹೇಳುವುದು ಯಾಕೆ?~ ಎಂದು ಕೇಂದ್ರ ಕೆಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಇಲ್ಲಿ ತಿರುಗೇಟು ನೀಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಪರವಾಗಿ ಹಲವೆಡೆ ಮತ ಪ್ರಚಾರ ಮಾಡಿ ಬಂದ ಬಳಿಕ ಗುರುವಾರ ನಗರದ ಖಾಸಗಿ ಹೋಟೆಲ್ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

`ಚಾರ್ಜ್ಶೀಟ್ ದಾಖಲಾದವರೂ ಮಂತ್ರಿ, ಶಾಸಕರಾಗಿಯೇ ಮುಂದುವರಿದಿದ್ದಾರೆ. ಪಕ್ಷದ ಮರ್ಯಾದೆಯನ್ನು ತೆಗೆದವರನ್ನು ಬಿಜೆಪಿ ಹೊರಹಾಕುತ್ತಿಲ್ಲ~ ಎಂದು ಕುಟುಕಿದರು.

`ಕುಡಿಯುವ ನೀರಿನ ಯೋಜನೆ, ವಿದ್ಯುತ್, ವಿವಿಧ ಅನುದಾನಗಳ ಬಳಕೆಯಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ. ತಪ್ಪು ಅಂಕಿ ಅಂಶಗಳನ್ನು ನೀಡಿ 20 ಅಂಶದ ಕೇಂದ್ರ ಸರ್ಕಾರದ ಯೋಜನೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಕೇಂದ್ರದಲ್ಲಿ ಜಾರಿಗೆ ತಂದ ಯೋಜನೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ~ ಎಂದು ಅವರು ಲೇವಡಿ ಮಾಡಿದರು.

`ಮಂಗಳೂರಿನಿಂದ ಕುಂದಾಪುರ. ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಕೇಂದ್ರ ಸರ್ಕಾರ ರೂ.674 ಕೋಟಿ ಮಂಜೂರುಮಾಡಿದ್ದು, ಕಾಮಗಾರಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿಯೂ ಬಿಜೆಪಿಯಿಂದ ಆಗಿದ್ದು ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ. ಕುಡಿಯುವ ನೀರಿನ ಯೋಜನೆ, ರೈಲ್ವೆ ಸೌಕರ್ಯ ಒದಗಿಸಿದ್ದು, ಭೂಮಸೂದೆ ಜಾರಿಗೆ ತಂದಿದ್ದು ಹಲವು ಯೋಜನೆ ತಂದಿದ್ದು ಕೇಂದ್ರ. ಯಾರೋ ಮಾಡಿದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಉದ್ಧಟತನ ಕಾಂಗ್ರೆಸ್ ಮುಖಂಡರಿಗಿಲ್ಲ. ಅಂತಹ ದುರ್ಬುದ್ಧಿ ಬಿಜೆಪಿ ಮುಖಂಡರಿಗೆ ಮಾತ್ರ~ ಎಂದು ಕಟುವಾಗಿ ಟೀಕಿಸಿದರು.

`ರಾಜ್ಯದ ಬಜೆಟ್ ನಿರ್ವಹಣೆಯಲ್ಲಿ ಸರ್ಕಾರ ಮೂರು ವರ್ಷವೂ ಸೋತಿದೆ. 15ರಿಂದ 25 ಸಾವಿರ ಕೋಟಿಯಷ್ಟು ಬಜೆಟ್ ಹಣವನ್ನು ಖರ್ಚು ಮಾಡುತ್ತಿಲ್ಲ. ಅದನ್ನು ಕೊರತೆ ಎಂದು ತೋರಿಸುವ ಬದಲು ಬಜೆಟ್ನಲ್ಲಿ ಖರ್ಚಾಗದ ಅನುದಾನ ಎಂದು ತೋರಿಸುವ ಮೂಲಕ ಬಿಜೆಪಿ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದೆ. ಬಂಡವಾಳ ಹೂಡಿಕೆಯಲ್ಲೂ ತೂತು ಬಿದ್ದಿದೆ. ಅನುತ್ಪಾದಕ ವ್ಯವಹಾರಕ್ಕೆ ಹಣ ಖರ್ಚು ಮಾಡುತ್ತಿದ್ದಾರೆ~ ಎಂದು ದೂರಿದರು.

`ಸ್ವಾತಂತ್ರ್ಯ ಹೋರಾಟಗಾರರಿಗೆ ತಾಮ್ರಪತ್ರ ನೀಡುವ ಸಂಪ್ರದಾಯವಿತ್ತು. ಆದರೆ ಹಗರಣಗಳ ಮೂಲಕ ಜೈಲಿಗೆ ಹೋಗಿ ಬಂದಿರುವ ಬಿಜೆಪಿ ಮುಖಂಡರಿಗೆ ಯಾವ ಪತ್ರ ಕೊಡ ಬೇಕೋ ಎಂದು ತಿಳಿಯುತ್ತಿಲ್ಲ~ ಎಂದು ಮೊಯಿಲಿ ಲೇವಡಿ ಮಾಡಿದರು.

`ಬಿಜೆಪಿ ಸರ್ಕಾರಕ್ಕೆ ಸಾಧನೆಯ ಬಗ್ಗೆ ಯೋಚನೆಯಿಲ್ಲ. ಕೇವಲ ಜಾತಿ ತಾರತಮ್ಯ ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲ. ಆಡಳಿತ ನಡೆಸುವಲ್ಲಿ ವಿಫಲವಾದ ಬಿಜೆಪಿ ಪ್ರತಿ ಹೆಜ್ಜೆ ಯಲ್ಲಿಯೂ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ. ತಾವು ಮಾಡಿದ ಅಭಿ ವೃದ್ಧಿ ಏನು ಎನ್ನುವುದನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ~ ಎಂದರು.

ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಎನ್ನುವ ಬಜರಂಗದಳ ದಳದ ಭೂತವನ್ನು ಓಡಿಸಿ~ ಎಂದು ಇತ್ತೀಚೆಗೆ ಹೇಳಿಕೆ ನೀಡ್ದ್ದಿದು ತಪ್ಪಾಗಿದೆ ಎಂದ ವೀರಪ್ಪ ಮೊಯಿಲಿ, `ಭೂತ ಎಂದರೆ ಕರಾವಳಿ ಯಲ್ಲಿ ಗೌರವವಿದೆ. ಶೂದ್ರ ರಾದ ನಮಗೆ ಭೂತವೇ ದೇವರು. ಹೀಗಾಗಿ ಸುನಿಲ್ನನ್ನು ಅಂತಹ ಪವಿತ್ರ ಭೂತಕ್ಕೆ ಹೋಲಿಸಿದ್ದು ತಪ್ಪು. ಸುನಿಲ್ ಕುಮಾರ್ ಭೂತವಲ್ಲ, ಬೇರೇಯೇ....~ ಎಂದು ಇಲ್ಲಿ ಪ್ರತಿಕ್ರಿಯಿಸಿದರು. ಮಾಜಿ ಸಚಿವ ಎ.ಕೃಷ್ಣಪ್ಪ, ಮಾಜಿ ಶಾಸಕ ಕೃಷ್ಣಪ್ಪ, ಕಾರ್ಯದರ್ಶಿ ಎ.ಜಿ.ಬಾವಾ ಹಾಗೂ ವೆಂಕಟೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.