ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ನಂತರ ಈಗ ವೀಳ್ಯದೆಲೆ ನಿಷೇಧ?

Last Updated 14 ಜೂನ್ 2014, 19:30 IST
ಅಕ್ಷರ ಗಾತ್ರ

ಲಂಡನ್‌(ಪಿಟಿಐ): ಮಾವಿನ ನಂತರ ಐರೋಪ್ಯ ರಾಷ್ಟ್ರಗಳ ಒಕ್ಕೂಟ ಈಗ ಭಾರತದ ವೀಳ್ಯದೆಲೆ ಆಮದಿಗೆ ನಿಷೇಧ ಹೇರುವ ಸಾಧ್ಯತೆ ಇದೆ.

ಭಾರತದಿಂದ ಆಮದಾಗುತ್ತಿರುವ ವೀಳ್ಯದೆಲೆಯಲ್ಲಿ ದೋಷವಿದೆ ಎಂದು ಸತತವಾಗಿ ವರದಿಯಾಗುತ್ತಿರುವು­ದಾಗಿ ಒಕ್ಕೂಟದ ಖಾದ್ಯ ಮತ್ತು ಪಶು ಆಹಾರ ತುರ್ತು ಸಚೇತ ವ್ಯವಸ್ಥೆ (ಆರ್‌ಎಎಸ್‌ಎಫ್‌ಎಫ್‌) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ವೀಳ್ಯದೆಲೆಯಲ್ಲಿ ‘ಸಾಲ್ಮೊನೆಲ್ಲ’ ಎಂಬ  ಬ್ಯಾಕ್ಟಿರಿಯಾಗಳಿರುವುದು ಈ ಆತಂಕಕ್ಕೆ ಕಾರಣ ಎನ್ನಲಾಗಿದೆ. ‘ಸಾಲ್ಮೊನೆಲ್ಲ’ದ ವಿಷದಿಂದ ಮನುಷ್ಯ­ರಲ್ಲಿ ಅತಿಸಾರ ಮತ್ತು ವಾಂತಿ ಉಂಟಾಗುತ್ತದೆ.

ಒಕ್ಕೂಟ ಈಗಾಗಲೆ ಬಾಂಗ್ಲಾದೇಶ­ದಿಂದ ಆಮದಾಗುತ್ತಿದ್ದ ವೀಳ್ಯದೆಲೆ ಮೇಲೆ ನಿಷೇಧ ಹೇರಿದ್ದು ಅದು 2014ರ ಜುಲೈ ಅಂತ್ಯದ ವರೆಗೆ ಜಾರಿ­ಯಲ್ಲಿರುವ ಸಾಧ್ಯತೆ ಇದೆ.  ಮರು ತಪಾಸಣೆ ಮಾಡಿದಾಗ ಭಾರತ ಮತ್ತು ಥಾಯ್ಲೆಂಡ್‌ನಿಂದ ಆಮದಾಗು­ತ್ತಿರುವ ವೀಳ್ಯದೆಲೆಯಲ್ಲಿ ‘ಸಾಲ್ಮೊ­ನೆಲ್ಲ’  ಇರುವುದನ್ನು ಇಂಗ್ಲೆಂಡಿನ ಆಹಾರ ಇಲಾಖೆ ಖಚಿತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT