ಸೋಮವಾರ, ಮೇ 17, 2021
23 °C

ಮಾವು ರಫ್ತು 80 ಸಾವಿರ ಟನ್‌ಗೆ: ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಿಂದ 80 ಸಾವಿರ ಟನ್‌ಗಳಷ್ಟು ಮಾವಿನ ಹಣ್ಣು ವಿದೇಶಗಳಿಗೆ ರಫ್ತಾಗುವ ಸಾಧ್ಯತೆ ಇದೆ ಎಂದು ಕೃಷಿ ಮತ್ತು ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಅಂದಾಜು ಮಾಡಿದೆ.ಹಣ್ಣುಗಳ ರಾಜ ಮಾವಿನ ಹಣ್ಣು ಉತ್ಪಾದನೆಯಲ್ಲಿ ಅಗ್ರಪಟ್ಟದಲ್ಲಿಯೇ ಇರುವ ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮಾವು ಬೆಳೆ ಸ್ಥಿರವಾಗಿದ್ದು, ವಾರ್ಷಿಕ 15 ಲಕ್ಷ ಟನ್ ಇಳುವರಿ ಬರುತ್ತಿದೆ. ಆದರೆ, ಗುಣಮಟ್ಟದ ಕಾರಣ ಕಳೆದ ಹಣಕಾಸು ವರ್ಷದಲ್ಲಿ 46,500 ಟನ್‌ಗಳಷ್ಟು ಮಾತ್ರವೇ ಮಾವಿನ ಹಣ್ಣು ರಫ್ತು ಮಾಡಲಾಗಿತ್ತು.`ರಫ್ತಿಗೆ ಯೋಗ್ಯವಾದಂತಹ ಗುಣಮಟ್ಟದ ಮಾವಿನ ಹಣ್ಣಿನ ಕೊರತೆ ಇದ್ದುದರಿಂದ ರಫ್ತು ಪ್ರಮಾಣ ಗಮನಾರ್ಹವಾಗಿ ಕುಸಿದಿತ್ತು. ಆದರೆ, ಈ ವರ್ಷ ಮಾವಿನ ಹಣ್ಣಿನ ಉತ್ಪಾದನೆ ಉತ್ತಮವಾಗಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ `ಕೇಸರ್~ ಮತ್ತು `ಅಲ್ಫೋನ್ಸಾ~ ತಳಿಯ ಹಣ್ಣುಗಳ ರಫ್ತು ಪ್ರಾರಂಭವಾಗಿದೆ~ ಎಂದು `ಎಪಿಇಡಿಎ~ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ದೇಶ ಭಾರತ. ಪ್ರತಿ ವರ್ಷ ಮಾರ್ಚ್ ಮೂರನೆಯ ವಾರದಿಂದ ಮೇ ಅಂತ್ಯದವರೆಗೆ ದೇಶದಿಂದ ಅಮೆರಿಕ, ಇಂಗ್ಲೆಂಡ್, ಬಾಂಗ್ಲಾದೇಶ, ನೇಪಾಳ, ಮಧ್ಯಪ್ರಾಚ್ಯ ಮತ್ತಿತರ ದೇಶಗಳಿಗೆ ಮಾವಿನ ಹಣ್ಣು ರಫ್ತಾಗುತ್ತಿದೆ. ಅಲ್ಲದೆ, ಕೆಲವು ವರ್ತಕರು ಎರಡು ವರ್ಷಗಳಿಂದ ಆಸ್ಟ್ರೇಲಿಯಾಕ್ಕೂ ಮಾವು ರಫ್ತು ಮಾಡುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.