ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಾವು ನಮ್ಮವರು’ ರಿಯಾಲಿಟಿ ಶೋ ಮುಕ್ತಾಯಗೊಂಡಿದೆ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೋಡಿ ನಂಬರ್ 1, ಮತ್ತು ಸೂಪರ್ ಕ್ವೀನ್ ನಂತಹ ಅನೇಕ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿತ್ತು.

ಸಂಬಂಧಗಳ ನಡುವಿನ ಪ್ರೀತಿ ಸಾರುವ 'ನಾವು ನಮ್ಮವರು' ಎನ್ನುವ ಹೊಸ ಕಾರ್ಯಕ್ರಮವನ್ನು ಪರಿಚಯಿಸಿತ್ತು. ಆಗಸ್ಟ್ 2ರಂದು ನಾವು ನಮ್ಮವರು ರಿಯಾಲಿಟಿ ಶೋ ಆರಂಭವಾಗಿತ್ತು. ಇದೀಗ ನಾವು ನಮ್ಮವರು ರಿಯಾಲಿಟಿ ಶೋ ಮುಕ್ತಾಯಗೊಂಡಿದ್ದು, ವೀಕ್ಷಕರಿಂದ ಪಡೆದ ವೋಟಿಂಗ್ ಆಧಾರದ ಮೇಲೆ ನಟ, ನಿರ್ದೇಶಕ ಸುಜಯ್ ಶಾಸ್ತ್ರಿ– ಸಿಂಚನಾ ದಂಪತಿ ವಿಜೇತರಾಗಿದ್ದಾರೆ. ಮೋಹನ್ ಕುಮಾರ್– ಪಲ್ಲವಿ ದಂಪತಿ ಮೊದಲ ರನ್ನರ್ ಅಪ್ ಆಗಿದ್ದು, ರಜತ್– ಅಕ್ಷಿತಾ ಮತ್ತು ರಾಘವೇಂದ್ರ– ಸುಷ್ಮಿತಾ ದಂಪತಿ ಎರಡನೇ ರನ್ನರ್ ಅಪ್ ಆಗಿದ್ದಾರೆ.
.ಬಿಗ್ಬಾಸ್ ಮಿಡ್ ಸೀಸನ್ ಫಿನಾಲೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟ್ವಿಸ್ಟ್: ಏನದು?.
ನಾವು ನಮ್ಮವರು ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಸುಜಯ್ ಶಾಸ್ತ್ರಿ ಹಾಗೂ ಸಿಂಚನಾ ದಂಪತಿಗೆ ವೈಟ್ ಗೋಲ್ಡ್ ವತಿಯಿಂದ ಬರೋಬ್ಬರಿ ₹10 ಲಕ್ಷ ನಗದು ಬಹುಮಾನ ಸಿಕ್ಕಿದೆ.

ಮೊದಲ ರನ್ನರ್ ಅಪ್ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಮೊದಲ ರನ್ನರ್ ಅಪ್ ಆಗಿರುವ ನೃತ್ಯ ಸಂಯೋಜಕ ಮೋಹನ್ ಕುಮಾರ್ ಹಾಗೂ ಪಲ್ಲವಿ ದಂಪತಿಗೆ ₹7 ಲಕ್ಷ ನಗದು ಬಹುಮಾನ ನೀಡಲಾಗಿದೆ.

ಎರಡನೇ ರನ್ನರ್ ಅಪ್ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ರಾಘವೇಂದ್ರ - ಸುಷ್ಮಿತಾ ದಂಪತಿ ಹಾಗೂ ರಜತ್ ಕಿಶನ್ - ಅಕ್ಷಿತಾ ದಂಪತಿ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಎರಡು ದಂಪತಿಗಳಿಗೆ ₹5 ಲಕ್ಷ ರೂಪಾಯಿ ಬಹುಮಾನ ಹಣ ಕೊಡಲಾಗಿದೆ.

ಯಾರೆಲ್ಲ ದಂಪತಿಗಳು ಭಾಗಿ?

ಕಲಾವಿದರಾದ ರಜತ್-ಅಕ್ಷತಾ, ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ, ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ.

ಇನ್ನು, ನಾವು ನಮ್ಮವರು ರಿಯಾಲಿಟಿ ಶೋನಲ್ಲಿ ನಿರಂಜನ್ ದೇಶಪಾಂಡೆ ಅವರು ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಗೋಲ್ಡನ್ ಕ್ವೀನ್ ಅಮೂಲ್ಯ, ನಟಿ ತಾರಾ ಅನುರಾಧ, ನಟ ಶರಣ್ ಅವರು ತೀರ್ಪುಗಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.