ಹುಬ್ಬಳ್ಳಿ: ರಾಜ್ಯದ ಕಾನೂನು ವಿಶ್ವವಿದ್ಯಾಲಯದಲ್ಲಿ ಇನ್ನು ಮುಂದೆ ಯಾವಾಗಲೂ ಖಾಸಗಿ ಮೋಡ (ಕ್ಲೌಡ್)ಗಳು ತೇಲಾಡಲಿದ್ದು, ಬೇಕೆಂದಾಗ, ಬೇಕಾದ ಕಾಲೇಜಿನಲ್ಲಿ ಜ್ಞಾನದ ಮಳೆಯನ್ನು ಸುರಿಸಲಿವೆ. ಈ ಉದ್ದೇಶಕ್ಕಾಗಿ ವಿವಿ ತಜ್ಞರು ಪುಣೆ ಅಟೊಮಿಕ್ ಲ್ಯಾಬ್ಸ್ ಸಂಸ್ಥೆಯೊಂದಿಗೆ ಶ್ರಮಿಸುತ್ತಿದ್ದಾರೆ.

ಕಾನೂನು ವಿಶ್ವವಿದ್ಯಾಲಯ ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅನುದಾನದಲ್ಲಿ ಪ್ರತಿ ಸೆಕೆಂಡಿಗೆ ಒಂದು ಜಿಬಿ ಸಾಮರ್ಥ್ಯದ ಇಂಟರ್ನೆಟ್ ಸಂಪರ್ಕವನ್ನು ಹೊಂದಿದೆ. ಬಿಎಸ್ಎನ್ಎಲ್ ಸಂಸ್ಥೆಯಿಂದ ಕೇಂದ್ರದ ಈ ಯೋಜನೆ ಅಡಿಯಲ್ಲಿ ಉಚಿತವಾಗಿ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಪ್ರತಿ ಸೆಕೆಂಡಿಗೆ 12 ಎಂ.ಬಿ ವೇಗದ ಸಂಪರ್ಕ ಹೊಂದುವಂತೆ ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ.

ಒಂದೊಮ್ಮೆ ಎಲ್ಲ ಕಡೆ ಈ ಸಂಪರ್ಕ ಸಾಧ್ಯವಾದಾಗ ಕಾನೂನು ವಿವಿ ತನ್ನಲ್ಲಿರುವ ಜ್ಞಾನದ `ಮೋಡ~ಗಳನ್ನು ಎಲ್ಲಿಗೆ ಬೇಕೆಂದರಲ್ಲಿ ಕಳುಹಿಸಿ `ಮಳೆ~ ಸುರಿಸಬಹುದಾಗಿದೆ. ಅಂದ ಹಾಗೆ, ಈ `ಮೋಡ~ಗಳು ಮುಂಗಾರಿನ ಮೋಡಗಳಂತೆ ಎಂದಿಗೂ ಕೈಕೊಡುವುದಿಲ್ಲ. `ಜ್ಞಾನ~ದ ಮಳೆ ಸುರಿಸದೆ ಮುಂದೆ ಹೋಗುವುದೂ ಇಲ್ಲ. ಈ ಮೋಡಗಳು ತೇಲಾಡುವಾಗ ಜ್ಞಾನ ಬರದ ಮಾತೇ ಇಲ್ಲ.

ಏನಿದು ಪ್ರೈವೇಟ್ ಕ್ಲೌಡ್?
ಕಂಪ್ಯೂಟರ್ನಲ್ಲಿ ಸಂಗ್ರಹಿಸಲಾದ ದೊಡ್ಡ ಪ್ರಮಾಣದ ಮಾಹಿತಿಯನ್ನು ಇಂಟರ್ನೆಟ್ ಸಂಪರ್ಕದ ಮೂಲಕ ಬೇಕಾದ ಕಡೆಗೆ ಕಳುಹಿಸುವ ವ್ಯವಸ್ಥೆಗೆ `ಇ~ ಭಾಷೆಯಲ್ಲಿ `ಕ್ಲೌಡ್~ ಎಂದೂ, ಕೇವಲ ಒಂದು ಸಂಸ್ಥೆಗಾಗಿ ಸಮರ್ಪಿತವಾದ ಇಂತಹ ವ್ಯವಸ್ಥೆ ಹೊಂದಿದರೆ ಅದಕ್ಕೆ `ಪ್ರೈವೇಟ್ ಕ್ಲೌಡ್~ ಎಂದೂ ಹೇಳಲಾಗುತ್ತದೆ. ಈ ವ್ಯವಸ್ಥೆಯನ್ನು ಸಂಜ್ಞೆಯಲ್ಲಿ ತೋರುವಾಗ ಮೋಡದಂತೆ ಚಿತ್ರಿಸುವುದರಿಂದ ಅದಕ್ಕೆ `ಕ್ಲೌಡ್~ ಎಂಬ ಹೆಸರು ಬಂದಿದೆ. ಕೆಎಸ್ಎಲ್ಯು ಅಂತಹ `ಖಾಸಗಿ ಮೋಡ~ದ ಒಡೆಯನಾಗಲು ಹೊರಟಿದೆ.

ಸ್ವಂತಕ್ಕೊಂದು `ಮೋಡ~ವನ್ನು ಸೃಷ್ಟಿಸಿಕೊಳ್ಳುವವರೆಗೆ ಈ ಸಂಸ್ಥೆ ಸಾರ್ವಜನಿಕ `ಮೋಡ~ವನ್ನೇ ಆಶ್ರಯಿಸಲಿದೆ. ಅಂದರೆ ಪಬ್ಲಿಕ್ ಕ್ಲೌಡ್ ಮೊರೆ ಹೋಗಲಿದೆ. ವಿವಿಯ ಕೇಂದ್ರ ಕಚೇರಿಯಾದ ಹುಬ್ಬಳ್ಳಿ ಮಾತ್ರವಲ್ಲದೆ ಪ್ರಾದೇಶಿಕ ಕಚೇರಿಗಳಾದ ಬೆಂಗಳೂರು ಮತ್ತು ಗುಲ್ಬರ್ಗದಲ್ಲಿ ಸರ್ವರ್ಗಳನ್ನು ಅಳವಡಿಸಲಾಗುತ್ತದೆ. ಇವುಗಳ ಅಡಿಯಲ್ಲಿ ಎಲ್ಲ 92 ಕಾಲೇಜುಗಳನ್ನು ಸಂಪರ್ಕಕ್ಕೆ ತರಲಾಗುತ್ತದೆ. ಯೋಜನೆ ಅನುಷ್ಠಾನದ ಮೊದಲ ಹಂತವಾಗಿ ಎಲ್ಲ ಕಾನೂನು ಕಾಲೇಜುಗಳಿಗೆ ಹಾಜರಿ, ವರ್ಗದ ರೂಪು-ರೇಷೆ, ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳು, ಜ್ಞಾನದ ಭಂಡಾರ ಇವೇ ಮೊದಲಾದ ಸಂಗತಿಗಳಿಗೆ ಸಂಬಂಧಿಸಿದಂತೆ ಟೆಂಪ್ಲೇಟ್ಗಳನ್ನು ಕಳುಹಿಸಲಿದೆ.

ಒಂದೊಮ್ಮೆ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದಾಗ ಉಪನ್ಯಾಸಕರು ವಿದ್ಯಾರ್ಥಿಗಳ ಹಾಜರಿಯನ್ನೂ `ಕ್ಲೌಡ್~ ಸಹಾಯದಿಂದಲೇ ಹಾಕಬೇಕು. ಅದನ್ನು ಪ್ರಧಾನ ಕಚೇರಿಗೆ ಅದೇ ಹೊತ್ತು ತರುತ್ತದೆ. ಇದರಿಂದ ವ್ಯಕ್ತಿಗಳ ಮಧ್ಯಸ್ಥಿಕೆ ಸಾಕಷ್ಟು ಪ್ರಮಾಣದಲ್ಲಿ ತಗ್ಗಲಿದೆ ಎಂದು ತಜ್ಞರು ಹೇಳುತ್ತಾರೆ.

`ಕಾನೂನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಿಯೇ ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಹಾಜರಿಯಲ್ಲಿ ಸಾಕಷ್ಟು ತಪ್ಪು ಮಾಹಿತಿ ನುಸುಳಿರುತ್ತದೆ. ಅದಕ್ಕೆ ತಡೆಹಾಕುವ ಉದ್ದೇಶದಿಂದಲೇ ಈ ವ್ಯವಸ್ಥೆ ರೂಪಿಸಲಾಗುತ್ತಿದೆ~ ಎನ್ನುತ್ತಾರೆ ವಿವಿ ಕುಲಪತಿ ಪ್ರೊ. ಜೆ.ಎಸ್. ಪಾಟೀಲ.

ಹೊಸ ವ್ಯವಸ್ಥೆಯಿಂದ ಹಾಜರಿ ಹಾಕುವ ವೇಳೆಯಲ್ಲಿ ಉಳಿತಾಯ ಆಗುವುದಲ್ಲದೆ, ಅದನ್ನು ವಿವಿಗೆ ಕಳುಹಿಸುವವರೆಗೆ ನಾಲ್ಕು ಹಂತಗಳು ಕಡಿತಗೊಳ್ಳಲಿವೆ. ಸುಳ್ಳು ಹೇಳಲು ಯಾರಿಗೂ ಆಸ್ಪದವೂ ಇಲ್ಲದಂತಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ತರಗತಿ ಪಾಠ, ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳು, ವಿಶೇಷ ಉಪನ್ಯಾಸಗಳು, ಪರೀಕ್ಷೆಗಳು, ಇ-ಅಣುಕು ಕೋರ್ಟ್ ನಿರ್ವಹಣೆ, ಸುತ್ತೋಲೆ, ನೋಟಿಸ್ ಮೆಮೊಗಳ ಬಟಾವಡೆ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಾಹಿತಿ ನಿರ್ವಹಣೆ, ಕುಲಪತಿಗಳ ಜೊತೆ ಸಭೆ ಹಾಗೂ ಸಿಂಡಿಕೇಟ್ ಸಭೆಗಳ ನಿರ್ವಹಣೆಗೂ ಮೋಡಗಳು ನೆರವಾಗಲಿವೆ ಎನ್ನುತ್ತಾರೆ ಪಾಟೀಲ.

ಕಾನೂನು ಮಾಹಿತಿ, ಕಾರ್ಯಾಗಾರ, ವೃತ್ತಿಪರರ ಜಾಲ ನಿರ್ವಹಣೆ ಕೂಡ ಸುಲಭ ಸಾಧ್ಯವಾಗಲಿದೆ ಎಂದೆನ್ನುವ ಅವರು, ಕ್ಲೌಡ್ ಎಂಜಿನ್ಗಳು, ಎಲಾಸ್ಟಿಕ್ ಸ್ಟೋರ್ ರೂಮ್ಗಳು, ಸ್ಟ್ರೀಮಿಂಗ್ ಲೇಯರ್ಗಳು, ಕ್ಲೌಡ್ ಆರ್ಕೆಸ್ಟ್ರಾಗಳ ಅಗತ್ಯವಿದ್ದು, ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.