ಮಂಗಳವಾರ, ಮಾರ್ಚ್ 9, 2021
23 °C

ಮಿನುಗು ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿನುಗು ಮಿಂಚು

ದೆವ್ವಗಳ ಸರೋವರ

ಮಿಜೋರಾಮ್‌ನ ಪಲಾಕ್‌ ಸರೋವರದತ್ತ ಸ್ಥಳೀಯರು ಸುಳಿಯುವುದಿಲ್ಲ. ಸ್ಥಳೀಯರ ನಂಬಿಕೆಯಂತೆ ಅದರಲ್ಲಿ ದೆವ್ವಗಳಿವೆ. ಹಳ್ಳಿಯೊಂದು ಮುಳುಗಡೆಯಾಗಿ ಆ ಸರೋವರವು ರೂಪುತಳೆದಿರುವುದರಿಂದ ಜನ ಹಾಗೆ ಭಾವಿಸಿದ್ದಾರೆ.

ತೆರೆಸಾ ಬನ್‌

ಅಕ್ಟೋಬರ್‌ 1996ರಲ್ಲಿ ಅಮೆರಿಕದ ಬೆಲ್ಮಾಂಟ್‌ ಬಳಿಯ ಬೊಂಗೊ ಜಾವಾ ಕಾಫಿ ಹೌಸ್‌ನಲ್ಲಿ ಗ್ರಾಹಕನೊಬ್ಬ ಸಿನಾಮೊನ್‌ ಬನ್‌ ತಿನ್ನಲು ಮುಂದಾದ. ಆ ಬನ್‌ ಅವನ ಕಣ್ಣಿಗೆ ಮದರ್‌ ತೆರೆಸಾ ಅವರಂತೆ ಕಂಡಿತು. ತಕ್ಷಣ ಅವನು ಅದನ್ನು ತಿನ್ನದೆ, ಅಲ್ಲಿನ ವ್ಯವಸ್ಥಾಪಕರಿಗೆ ಅದು ಮದರ್‌ ತೆರೆಸಾ ಅವರ ಚಹರೆಯನ್ನು ನೆನಪಿಸುವಂತಿದೆ ಎಂದು ತೋರಿಸಿದ. ಆ ಬನ್ನನ್ನು ವ್ಯವಸ್ಥಾಪಕರು ಪ್ರದರ್ಶನಕ್ಕೆ ಇಟ್ಟರು. ಮುಂದೆ ಆ ಬನ್‌ನ ಚಿತ್ರಗಳನ್ನು ಒಳಗೊಂಡ ಟಿ–ಶರ್ಟ್‌ಗಳು, ಪ್ಲೇಯರ್‌ ಕಾರ್ಡ್‌ಗಳು, ವಿಡಿಯೊ ಟೇಪ್‌ಗಳು ಮಾರುಕಟ್ಟೆಗೆ ಬಂದವು.

ಪಾನಮತ್ತ ಆನೆಗಳು

ಅಸ್ಸಾಂ ಹಾಗೂ ಮೇಘಾಲಯದ ಕಾಡಾನೆಗಳು ಸ್ಥಳೀಯರು ಅಕ್ಕಿಯಿಂದ ಬಿಯರ್‌ ತಯಾರಿಸಲು ಆರಂಭಿಸಿದಾಗ, ಅವನ್ನು ಕುಡಿಯುವ ಚಟಕ್ಕೆ ಬಿದ್ದವು. ಹುದುಗಲು ಬಿಟ್ಟ ಬಿಯರ್‌ಗಳ ಮಡಿಕೆಗಳಿಗೆ ಅವು ಲಗ್ಗೆಇಟ್ಟವು. ಅವನ್ನು ಕುಡಿದ ಮತ್ತಿನಲ್ಲಿ ಸ್ಥಳೀಯರಿಗೆ ತೊಂದರೆ ಉಂಟುಮಾಡಲು ಆರಂಭಿಸಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.