ಗುರುವಾರ , ಜೂನ್ 24, 2021
29 °C

ಮಿರರ್...ಮಿರರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಮೆಟ್ರೊ, ಮಾಲ್ಗುಡಿ ಡೇಸ್, ನನ್ನವಳ ಕಾಗದ... ಹೀಗೆ ಹಲವಾರು ಪ್ರಸಿದ್ಧ ನಾಟಕಗಳನ್ನು ನಿರ್ಮಿಸಿದ ನಗರದ ಖ್ಯಾತ ನಾಟಕ ತಂಡ ವಿಮುವ್ ಥಿಯೇಟರ್ ಇದೀಗ `ಮಿರರ್ ಮಿರರ್...~ ವಿನೂತನ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ.`ವಿಶ್ವ ರಂಗಭೂಮಿ ದಿನದ ಸಂದರ್ಭದಲ್ಲಿ ಪ್ರದರ್ಶನಗೊಳ್ಳಲಿರುವ ಇದು ಕನ್ನಡಿ ಮುಂದೆ ನಮ್ಮನ್ನು ನಾವು ನೋಡಿಕೊಳ್ಳುವಾಗ ನಮ್ಮಲ್ಲಿರುವ ಆಲೋಚನೆಗಳನ್ನು ಬಿಂಬಿಸುವ ನಾಟಕ. ಇನ್ನೊಂದರ್ಥದಲ್ಲಿ ಇದು ನಮ್ಮೆಲ್ಲರ ಕತೆ, ಒಬ್ಬ ಮನುಷ್ಯನನ್ನು ಸಮಾಜ ಅವನ ರೂಪದ ಮುಖಾಂತರ ಅಳೆಯುವುದು ಹೊಸತೇನಲ್ಲ.

 

ಹೀಗೆ ನಮ್ಮೆಲ್ಲರನ್ನು ಬಿಂಬಿಸುವ 5 ಪಾತ್ರಗಳು ಕನ್ನಡಿ ಮುಂದೆ ನಿಂತುಕೊಂಡು ಸಮಾಜದ ದೃಷ್ಟಿಯಲ್ಲಿ ಹಾಗೂ ತಮ್ಮದೇ ಒಳಮನಸ್ಸಿನ ಅನಿಸಿಕೆಗಳನ್ನು ಅಳೆದುಕೊಂಡಾಗ ಆಗುವ ಕಲಹಗಳನ್ನು ಹಾಸ್ಯಮಯವಾಗಿ ತೋರಿಸುವ ಪ್ರಯತ್ನ ನಮ್ಮ ನಾಟಕದ ಉದ್ದೇಶ~ ಎನ್ನುತ್ತಾರೆ ನಿರ್ದೇಶಕಿ ಜಿ.ಮಧುವಂತಿ.ಕಳೆದ 5 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮೂವ್ ಥಿಯೇಟರ್ ಇತ್ತೀಚೆಗೆ 50ನೇ ಪ್ರದರ್ಶನ ಪೂರ್ಣಗೊಳಿಸಿತ್ತು. ಆಸ್ಟ್ರೇಲಿಯನ್ ಆಧಾರಿತ ಥಿಯೇಟರ್ ಇತ್ತೀಚೆಗೆ ಮುಕ್ತಾಯವಾದ `ಶಾರ್ಟ್+ಸ್ವೀಟ್~ ಥಿಯೇಟರ್ ಫೆಸ್ಟಿವಲ್‌ನಲ್ಲಿ `ಅತ್ಯುತ್ತಮ ರಂಗಭೂಮಿ ಕಂಪೆನಿ~ ಎಂಬ ಪ್ರಶಸ್ತಿ ಪಡೆದಿತ್ತು. ಈ ಉತ್ಸವದಲ್ಲಿ ನಾಟಕದ ಒಂದು ಕತೆಯಾದ `ಟೇಮಿಂಗ್ ದಿ ಟೇಪ್~ ಶೀರ್ಷಿಕೆಯನ್ನು ವಿಮುವ್ ಪ್ರದರ್ಶಿಸಿದ್ದು ಅತ್ಯುತ್ತಮ ನಟರಾಗಿ ಬಿ. ಶ್ರೀಕಾಂತ್ ಹಾಗೂ ಅತ್ಯುತ್ತಮ ನಿರ್ದೇಶಕಿಯಾಗಿ ಮಧುವಂತಿ ನಾಮಾಂಕಿತಗೊಂಡಿದ್ದರು.ನಾಟಕ ಇದೇ ಶನಿವಾರ ಮಲ್ಲೇಶ್ವರಂ 14ನೇ ಕ್ರಾಸ್‌ನ ಸೇವಾಸದನದಲ್ಲಿ ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ಮುಖ್ಯಪಾತ್ರದಲ್ಲಿ ನಾಗಶ್ರೀ ಕಾರ್ಕೊನ್, ಡಾ.ಸೋಹನ್, ಕೀರ್ತಿ ನಟರಾಜನ್, ರಾಧಿಕಾ ನಾರಾಯಣ್, ರಂಗರಾಜ್ ಭಟ್ಟಾಚಾರ್ಯ, ಅನೂಪ್ ಶೆಣೈ, ರಂಜನ್ ಎಸ್, ಅಭಿರಾಮ್ ಮತ್ತು ಮಧುವಂತಿ ಕಾಣಿಸಿಕೊಳ್ಳಲಿದ್ದಾರೆ. ಅಭಿಷೇಕ್ ನಾರಾಯಣ್ ಸಂಗೀತ ನೀಡಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.