ಬೆಂಗಳೂರು: ವಾಹನಗಳಿಂದ ಗಿಜಿಗುಡುವ ರಸ್ತೆ, ಕಿವಿ ಚುಚ್ಚುವ ಹಾರ್ನ್ ಸದ್ದು, ಅದರ ನಡುವೆ ನಡೆದಾಡಲು ಅಸಮರ್ಪಕ ಪಾದಚಾರಿ ಮಾರ್ಗ.

ಇದು ನಗರದ ಕಸ್ತೂರ ಬಾ ರಸ್ತೆಯ ಚಿತ್ರಣ. ಪಾದಚಾರಿ ಮಾರ್ಗದ ದುರಸ್ತಿ ಕಾರ್ಯ ಕುಂಟುತ್ತಾ ಸಾಗಿರುವುದರಿಂದ ಸಾರ್ವಜನಿಕರಿಗೆ ಇಲ್ಲಿ ನಡೆದಾಡಲು ತೊಂದರೆಯಾಗುತ್ತಿದೆ. ಪಾದಚಾರಿ ಮಾರ್ಗದ ಅಂಚಿನ ಕಲ್ಲುಗಳನ್ನು ಕಿತ್ತು ರಸ್ತೆ ಬದಿಗೆ ಗುಡ್ಡೆ ಹಾಕಿರುವುದು ಮತ್ತು ನೆಲವನ್ನು ಅಗೆದು ಬಿಟ್ಟಿರುವುದರಿಂದ ಜನರು ಓಡಾಡಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ರಸ್ತೆಯ ಒಂದು ಬದಿ ಪಾದಚಾರಿ ಮಾರ್ಗದ ದುರಸ್ತಿ ಕಾರ್ಯ ಮುಗಿದಿದೆ. ಆದರೆ, ಒಂದು ಕಡೆಯಿಂದ ಕಾಮಗಾರಿ ಮುಗಿಸುತ್ತಿದ್ದರೆ, ಮತ್ತೊಂದು ಕಡೆಯಿಂದ ಪಾದಚಾರಿ ಮಾರ್ಗಕ್ಕೆ ಜೋಡಿಸಿರುವ ಕಲ್ಲುಗಳು ಹಾಗೂ ಮಧ್ಯೆ ಹಾಕಿರುವ ಸಿಮೆಂಟ್ ಕಿತ್ತು ಹೋಗುತ್ತಿದೆ.
ಮತ್ಸ್ಯಾಲಯ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ವಿಶ್ವೇಶ್ವರಯ್ಯ ವಿಜ್ಞಾನ ವಸ್ತು ಸಂಗ್ರಹಾಲಯದ ಮುಂದೆ ಪಾದಚಾರಿ ಮಾರ್ಗಕ್ಕೆ ಹಾಕಿರುವ ಸಿಮೆಂಟ್ ಕಿತ್ತು ಹೋಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಆಗಲೇ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ.

ಕುಂಟುತ್ತಲೇ ಸಾಗುತ್ತಿರುವ ಕಾಮಗಾರಿ: ಕಸ್ತೂರ ಬಾ ರಸ್ತೆಯ ಯುಬಿ ಸಿಟಿಯಿಂದ ಸುಂದರಂ ಮೋಟಾರ್ಸ್ವರೆಗೆ ಪಾದಚಾರಿ ಮಾರ್ಗದ ದುರಸ್ತಿ ಕಾರ್ಯಕ್ಕಾಗಿ ನೆಲವನ್ನು ಅಗೆಯಲಾಗಿದೆ. ಮಳೆ ಬಂದು ನೀರು ನಿಂತಿರುವುದರಿಂದ ಈ ಭಾಗದಲ್ಲಿ ಗುಂಡಿಗಳು ಬಿದ್ದಿವೆ. ಪಕ್ಕದಲ್ಲೇ ಇರುವ ಬಸ್ ನಿಲ್ದಾಣದ ಮುಂದೆ ನೆಲವನ್ನು ಅಗೆದಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಅರಿಯದೆ ಮುಂದೆ ಕಾಲಿಟ್ಟರೆ, ಬಿದ್ದು ಕಾಲು ಮುರಿದುಕೊಳ್ಳುವುದು ಖಚಿತ.

`ರಸ್ತೆಯ ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡಲು ಸರಿಯಾದ ಮಾರ್ಗವಿಲ್ಲ. ರಸ್ತೆಯ ಅಂಚಿನಲ್ಲಿ ನಡೆಯುತ್ತಿದ್ದರೂ ವಾಹನಗಳು ನಮ್ಮ ಮೇಲೆಯೇ ಬಂದಂತಾಗುತ್ತದೆ. ವಾಹನ ಸವಾರರಿಗೆ ಪಾದಚಾರಿಗಳ ಬಗ್ಗೆ ಪ್ರಜ್ಞೆಯೇ ಇಲ್ಲ. ಒಂದು ಬದಿಗೆ ಪಾದಚಾರಿ ಮಾರ್ಗದ ನಿರ್ಮಾಣವಾಗಿದೆ. ಇನ್ನೊಂದೆಡೆ ಹಲವು ತಿಂಗಳಿಂದ ಪಾದಚಾರಿಗಳ ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಲೇ ಇದೆ' ಎಂದು ಖಾಸಗಿ ಕಂಪೆನಿಯ ಉದ್ಯೋಗಿ ಶಿವರಾಂ ದೂರಿದರು.

`ಕಸ್ತೂರ ಬಾ ರಸ್ತೆಯಲ್ಲಿ ಪಾದಚಾರಿಗಳ ಮಾರ್ಗವಿದ್ದರೂ ಇರದಂತಹ ಪರಿಸ್ಥಿತಿ ಇದೆ. ಈ ರಸ್ತೆಯಲ್ಲಿ ಸದಾ ವಾಹನ ದಟ್ಟಣೆಯಿರುತ್ತದೆ. ಆದ್ದರಿಂದ, ಇಲ್ಲಿ ಸಾರ್ವಜನಿಕರಿಗೆ ಸಮರ್ಪಕ ಪಾದಚಾರಿ ಮಾರ್ಗದ ಅಗತ್ಯವಿದೆ. ನಿರ್ಲಕ್ಷ್ಯಕ್ಕೊಳಗಾಗಿರುವ ಈ ಪಾದಚಾರಿ ಮಾರ್ಗವನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕು' ಎಂಬುದು ಖಾಸಗಿ ಕಂಪೆನಿಯ ಉದ್ಯೋಗಿ ಪೂರ್ಣಿಮಾ ಅವರ ಒತ್ತಾಯ.

`ಈ ರಸ್ತೆಯಲ್ಲಿ ಪಾದಚಾರಿ ಮಾರ್ಗವಿಲ್ಲದೆ ಓಡಾಡುವುದು ಕಷ್ಟವಾಗಿದೆ. ಕಳೆದ ವಾರ ರಸ್ತೆಯ ಕೊನೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೂ ಹಿಂದಿನಿಂದ ಬಂದ ಬೈಕ್ ಸವಾರ ಗುದ್ದಿಸಿ ನಿಲ್ಲಿಸುವ ಸೌಜನ್ಯವನ್ನೂ ತೋರದೇ ಹೋಗಿಯೇ ಬಿಟ್ಟ. ಅಪಘಾತದಿಂದ ಕಾಲಿಗೆ ಪೆಟ್ಟಾಗಿದೆ. ಹೀಗೆ ನನ್ನಂತೆ ಎಷ್ಟೋ ಜನರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ. ಪಾದಚಾರಿ ಮಾರ್ಗವನ್ನು ಸರಿಪಡಿಸಲು ಇನ್ನೆಷ್ಟು ದಿನಗಳು ಬೇಕಾಗುತ್ತದೆಯೋ ಗೊತ್ತಿಲ್ಲ' ಎಂದು ಖಾಸಗಿ ಕಂಪೆನಿಯ ಉದ್ಯೋಗಿ ಅಭಿಷೇಕ್ ಅಸಮಾಧಾನ ವ್ಯಕ್ತಪಡಿಸಿದರು.

ಮೂರು ತಿಂಗಳಿನಲ್ಲಿ ಪೂರ್ಣ
ಕಸ್ತೂರ ಬಾ ರಸ್ತೆಯ ಪಾದಚಾರಿ ಮಾರ್ಗದ ನವೀಕರಣ ಕಾಮಗಾರಿಯನ್ನು 2010ರಲ್ಲಿ ಗುತ್ತಿಗೆಗೆ ನೀಡಲಾಗಿತ್ತು. ಆದರೆ, ಗುತ್ತಿಗೆದಾರರು ಒಂದು ವರ್ಷ ಕೆಲಸವನ್ನೇ ಆರಂಭಿಸಲಿಲ್ಲ. ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅವರಿಗೆ ನೀಡಿದ್ದ ಗುತ್ತಿಗೆಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆಗ, ಹೈಕೋರ್ಟ್ ಗುತ್ತಿಗೆದಾರರ ಅರ್ಜಿಯನ್ನು ವಜಾ ಮಾಡಿತು.

ನಂತರ, 2011ರಲ್ಲಿ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಯಿತು. ಕಾಮಗಾರಿಯ ಒಟ್ಟು ವೆಚ್ಚ ರೂ.2.65 ಕೋಟಿಯಾಗಿದೆ. ಪಾದಚಾರಿ ಮಾರ್ಗದ ದುರಸ್ತಿ ಕಾರ್ಯ ಇನ್ನೂ ಅಂತಿಮವಾಗಿಲ್ಲ. ಪಾದಚಾರಿ ಮಾರ್ಗದ ಲೇಯರ್ ಕೆಲಸ ಹಾಗೂ ಪಾಯಿಂಟಿಂಗ್ ಮಾಡುವುದು ಬಾಕಿಯಿದೆ. ಯುಬಿ ಸಿಟಿ ಕಡೆಯ ಪಾದಚಾರಿ ಮಾರ್ಗದ ಕಾಮಗಾರಿಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು.
- ಸೋಮಶೇಖರ್, ಮುಖ್ಯ ಎಂಜಿನಿಯರ್. ರಸ್ತೆ ಮತ್ತು ಮೂಲ ಸೌಕರ್ಯ ವಿಭಾಗ, ಬಿಬಿಎಂಪಿ

ವಿಶ್ವೇಶ್ವರಯ್ಯ ವಿಜ್ಞಾನ ವಸ್ತು ಸಂಗ್ರಹಾಲಯ, ವೆಂಕಟಪ್ಪ ಆರ್ಟ್ ಗ್ಯಾಲರಿ, ಕಬ್ಬನ್ ಉದ್ಯಾನ ನೋಡಲೆಂದು ಬೆಂಗಳೂರಿಗೆ ಬಂದೆವು. ಬೆಂಗಳೂರು ಸಾಕಷ್ಟು ಅಭಿವೃದ್ಧಿಯಾಗಿದೆ ಎಂದುಕೊಂಡಿದ್ದ ನಮಗೆ ಇಲ್ಲಿನ ವ್ಯವಸ್ಥೆ ನೋಡಿ ಬೇಸರವಾಯಿತು. ಪ್ರಮುಖ ಪ್ರವಾಸಿ ಸ್ಥಳಗಳಿರುವ ಈ ರಸ್ತೆಯಲ್ಲೇ ಪಾದಚಾರಿ ಮಾರ್ಗ ಸರಿಯಿಲ್ಲ. ಪ್ರವಾಸಕ್ಕೆ ಬಂದ ನಾವು ಮಕ್ಕಳನ್ನು ಕರೆದುಕೊಂಡು ಈ ರಸ್ತೆಯಲ್ಲೆ ಓಡಾಡುವುದು ಕಷ್ಟವಾಯಿತು.
-ನಿರ್ಮಲಾ, ದಾವಣಗೆರೆಯಿಂದ ಬಂದಿದ್ದ ಪ್ರವಾಸಿ

ಬಸ್ ನಿಲ್ದಾಣದ ಮುಂದೆಯೇ ನೆಲವನ್ನು ಅಗೆದಿರುವುದರಿಂದ ಇಲ್ಲಿ ಜಾಗ ಇಕ್ಕಟ್ಟಾಗಿದೆ. ಬಸ್ ನಿಲ್ಲಲು ಕೂಡ ಸ್ಥಳವಿಲ್ಲ. ಈಗ ಮಳೆಯಾಗುತ್ತಿರುವುದರಿಂದ ನೀರು ಕೂಡ ನಿಲ್ಲುತ್ತಿದೆ. ಇದರಿಂದ ಪಾದಚಾರಿಗಳಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರ ತೊಂದರೆಯನ್ನು ಕೇಳುವವರು ಯಾರು ಇಲ್ಲ.
- ಪ್ರಕಾಶ್, ಖಾಸಗಿ ಕಂಪೆನಿ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.