ಜೊಹಾನ್ಸ್ಬರ್ಗ್ (ಪಿಟಿಐ): ಭಾರತೀಯ ಮೂಲದ ಸುರೂಪಿ ಶಸ್ತ್ರ ಚಿಕಿತ್ಸಾ ತಜ್ಞರೊಬ್ಬರು ದಕ್ಷಿಣ ಆಫ್ರಿಕದಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಚರ್ಮ ಕಸಿ ಮಾಡುವ ಮೂಲಕ ಹೆಣ್ಣು ಮಗುವೊಂದರ ಪ್ರಾಣ ಉಳಿಸಿದ್ದಾರೆ.

ಸುಟ್ಟ ಗಾಯಗಳಿಂದ ನರಳುತ್ತಿದ್ದ ಪಿಪ್ಪಿ ಕ್ರುಗರ್ ಎಂಬ ಮೂರು ವರ್ಷದ ಮಗುವಿಗೆ ಜೊಹಾನ್ಸ್ಬರ್ಗ್ನ ಆಸ್ಪತ್ರೆಯೊಂದರಲ್ಲಿ ಚರ್ಮದ ಕಸಿ ಮಾಡಲಾಗಿದೆ.

ಅಮೆರಿಕದ ಪ್ರಯೋಗಾಲಯದಲ್ಲಿ ಅದೇ ಮಗುವಿನ ಚರ್ಮದ ಕೋಶಗಳಿಂದ ಕೃತಕವಾಗಿ ಸೃಷ್ಟಿಸಿದ ಚರ್ಮವನ್ನೇ ಕಸಿ ಶಸ್ತ್ರಚಿಕಿತ್ಸೆಗೆ ಬಳಸಲಾಗಿದೆ.

ಭಾರತೀಯ ಮೂಲದ ವೈದ್ಯ ರಿದ್ವಾನ್ ಮಿಯಾ ನೇತೃತ್ವದ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಆಫ್ರಿಕದ ರಾಷ್ಟ್ರವೊಂದರಲ್ಲಿ ಯಶಸ್ವಿಯಾಗಿ ಚರ್ಮದ ಕಸಿ ಮಾಡುತ್ತಿರುವುದು ಇದೇ ಮೊದಲ ಬಾರಿ. ಈ ಸಾಧನೆಗಾಗಿ ಮಿಯಾ ರಾಷ್ಟ್ರದಾದ್ಯಂತ `ಹೀರೋ~ ಆಗಿ ಹೊರಹೊಮ್ಮಿದ್ದಾರೆ.

ಮಗುವಿನ ದೇಹಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಸುತ್ತಲಾಗಿದ್ದ ಬ್ಯಾಂಡೇಜನ್ನು ಒಂದು ವಾರದ ನಂತರ ಸೋಮವಾರ ತೆಗೆಯಲಾಗಿದೆ. ಮಗುವನ್ನು ಕೂಲಂಕಷವಾಗಿ ಪರೀಕ್ಷೆಗೆ ಒಳಪಡಿಸಿದ ನಂತರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಮಿಯಾ ಘೋಷಿಸಿದರು.

ಹೊಸ ವರ್ಷದ ಸಂಭ್ರಮಾಚರಣೆಯಂದು ಮಗುವಿನ ತಂದೆಯ ಕೈಯಲ್ಲಿದ್ದ ದಹನಕಾರಿ ದ್ರವದ ಬಾಟಲಿ ಒಡೆದ ಪರಿಣಾಮ ಮಗುವಿನ ದೇಹಪೂರ್ತಿ ತೀವ್ರ ಸುಟ್ಟ ಗಾಯಗಳಾಗಿದ್ದವು. ಮಗು ಜೀವಂತವಾಗಿ ಉಳಿಯುವ ಸಾಧ್ಯತೆ ಶೇ 10ರಷ್ಟು ಮಾತ್ರ ಎಂದು ಆರಂಭದಲ್ಲಿ ವೈದ್ಯರು ಹೇಳಿದ್ದರು. ಆದರೆ ಮಗುವಿನ ಚರ್ಮದ ಕೋಶಗಳಿಂದಲೇ ಹೊಸ ಚರ್ಮವನ್ನು ಸೃಷ್ಟಿಸುವ ಸಾಧ್ಯತೆಯ ಬಗ್ಗೆ ಬಾಸ್ಟನ್ ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸಿದ್ದ ಮಗುವಿನ ತಾಯಿ, ಈ ಮಾರ್ಗೋಪಾಯದ ಕುರಿತು ವೈದ್ಯರೊಂದಿಗೆ ಚರ್ಚಿಸಿದ್ದರು.

ಈ ಶಸ್ತ್ರಚಿಕಿತ್ಸೆಯಲ್ಲಿ ಶೇ 90ರಷ್ಟು ಚರ್ಮವನ್ನು ಪಿಪ್ಪಿಯ ದೇಹದಿಂದಲೇ ತೆಗೆಯಲಾಗಿದೆ ಎಂಬುದನ್ನು ಮಿಯಾ ದೃಢಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.