ಮಂಗಳವಾರ, ಮೇ 24, 2022
25 °C

ಮೇಘ-ಟ್ರಾಪಿಕ್ಸ್ ಉಪಗ್ರಹ ಉಡಾವಣೆಗೆ ದಿನಗಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನೈ (ಪಿಟಿಐ): ಭಾರತ ಹಾಗೂ ಫ್ರಾನ್ಸ್‌ನ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಹವಾಮಾನ ಕುರಿತು ಅಧ್ಯಯನ ಮಾಡುವ `ಮೇಘ-ಟ್ರಾಪಿಕ್ಸ್~ ಉಪಗ್ರಹ ಉಡಾವಣೆಗೆ ಎಲ್ಲ ಸಿದ್ಧತೆಗಳೂ ಅಂತಿಮ ಹಂತದಲ್ಲಿವೆ. ಶ್ರೀಹರಿಕೋಟದಿಂದ ಅ.12ರಂದು ಈ ಉಪಗ್ರಹ ಉಡಾವಣೆಯಾಗಲಿದೆ.ಮೇಘ-ಟ್ರಾಪಿಕ್ಸ್ ಜತೆಗೆ ಇತರ ಮೂರು ನ್ಯಾನೊ ಉಪಗ್ರಹಗಳನ್ನೂ ಇಸ್ರೋದ ಪಿಎಸ್‌ಎಲ್‌ವಿ -ಸಿ18 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲಾಗುತ್ತದೆ ಎಂದು ಇಸ್ರೊದ ವಕ್ತಾರ ಎಸ್.ಸತೀಶ್ ತಿಳಿಸಿದ್ದಾರೆ.ಉಷ್ಣವಲಯದ ಹವಾಮಾನ ಅಧ್ಯಯನಕ್ಕೆಂದೇ ಈ ಉಪಗ್ರಹವನ್ನು ಸಿದ್ಧಪಡಿಸಲಾಗಿದೆ. ಅ.10ರ ಸೋಮವಾರದಿಂದಲೇ ಇದಕ್ಕಾಗಿ ಕ್ಷಣಗಣನೆ ಆರಂಭವಾಗಲಿದೆ ಎಂದೂ ಅವರು ಹೇಳಿದರು.ಮೇಘಾ ಟ್ರಾಪಿಕ್ಸ್ ಒಟ್ಟು ಮೂರು ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ. ಎರಡನ್ನು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಸಿದ್ಧಪಡಿಸಿದೆ. ಇನ್ನೊಂದನ್ನು ಇಸ್ರೊ- ಫ್ರಾನ್ಸ್ ಜಂಟಿಯಾಗಿ ಸಿದ್ಧಪಡಿಸಿದೆ.ಫ್ರಾನ್ಸ್ ಸಹಭಾಗಿತ್ವದಲ್ಲಿ 80 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಘಾ ಟ್ರಾಪಿಕ್ ಅನ್ನು ಸಿದ್ಧಪಡಿಸಲಾಗಿದ್ದು, ತನ್ನ ಐದು ವರ್ಷಗಳ ಜೀವಿತಾವಧಿಯಲ್ಲಿ ಉಷ್ಣವಲಯದಲ್ಲಿ ಜಲ ಚಕ್ರದ ಕುರಿತು ಅಧ್ಯಯನ ಮಾಡಲಿದೆ. 

ಮೂರು ನ್ಯಾನೊ ಉಪಗ್ರಹಗಳು ಲುಕ್ಸೆಂಬರ್ಗ್, ಐಐಟಿ ಕಾನ್‌ಪುರ ಹಾಗೂ ಚೆನ್ನೈನ ಎಸ್.ಆರ್.ಎಂ ವಿಶ್ವವಿದ್ಯಾಲಯದ್ದಾಗಿವೆ.ಐಐಟಿ ಕಾನ್‌ಪುರ ಸಿದ್ಧಪಡಿಸಿದ `ಜುಗನು~ ಎಂಬ ಉಪಗ್ರಹವು ನೆರೆ, ಬರ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಯ ಬಗ್ಗೆ ಅಧ್ಯಯನ ಮಾಡಲಿದೆ.ಜುಗನುನಿಂದ ಮಾಹಿತಿಯನ್ನು ಐಐಟಿಯಲ್ಲಿ ಪಡೆದು ಸಂಸ್ಕರಿಸಿ, ವಿಶ್ಲೇಷಿಸಲಾಗುತ್ತದೆ. `ಜುಗನು~ ಕಳುಹಿಸುವ ಚಿತ್ರ ಮಾಹಿತಿಗಳನ್ನು ಸಂಶೋಧನೆಗೆ ಬಳಸಲಾಗುವುದು ಎಂದು ನ್ಯಾನೊ ಉಪಗ್ರಹ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಿಸಿರುವ ಎನ್.ಎಸ್.ವ್ಯಾಸ್ ತಿಳಿಸಿದ್ದಾರೆ.ಇಸ್ರೊ ಈ ವರ್ಷ ನಾಲ್ಕು ಉಪಗ್ರಹಗಳನ್ನು ಆಕಾಶಕ್ಕೆ ಉಡಾಯಿಸಲಿದೆ. ಇದರಲ್ಲಿ ಫ್ರೆಂಚ್ ಗಯಾನದಿಂದ ಹಾರಿ ಬಿಡುವ ಕಾರ್ಯಕ್ರಮವೂ ಸೇರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.