ಬೆಂಗಳೂರು: ‘ಲೋಕಾಯುಕ್ತಕ್ಕೆ ಭ್ರಷ್ಟರನ್ನು ಬಂಧಿಸುವ ಅಧಿಕಾರವನ್ನು ಸರ್ಕಾರ ನೀಡಬೇಕಿಲ್ಲ. ಆದರೆ ಅಂಥವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ನೀಡಬೇಕು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆಗ್ರಹಿಸಿದರು.ನಗರದಲ್ಲಿ ಭಾನುವಾರ ದಿ.ಲಂಕೇಶ್ ಅವರ 76ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಹಾಗೂ ವಿಚಾರಗೋಷ್ಠಿಯಲ್ಲಿ ‘ಕರ್ನಾಟಕದ ಬಿಕ್ಕಟ್ಟುಗಳು ಮತ್ತು ಪರಿಹಾರದ ದಾರಿಗಳು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಸರ್ಕಾರದ ಸಾಧನೆಗಳನ್ನು ತಿಳಿಸಲು ಆಡಳಿತಾರೂಢ ಬಿಜೆಪಿ ನಗರದ ವಿವಿಧ ಭಾಗಗಳಲ್ಲಿ ಹಾಗೂ ಬಸ್ಗಳಲ್ಲಿ ಅಳವಡಿಸಿರುವ ಬ್ಯಾನರ್, ವಿನೈಲ್ ಮತ್ತಿತರ ಪ್ರಚಾರ ಸಾಮಗ್ರಿ ಅಳವಡಿಸಿದ ಕ್ರಮವನ್ನು ಖಂಡಿಸಿದ ಅವರು, ‘ಸರ್ಕಾರದ ದುಡ್ಡಿನಲ್ಲಿ ತಮ್ಮ ಭಾವಚಿತ್ರವನ್ನು ಹಾಕಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಆ ‘ಸಾಧನೆ’ಗಳನ್ನು ಕೆದಕಿದರೆ ಅದರಲ್ಲಿ ಸುಳ್ಳಿನ ಅಂಶಗಳೇ ತುಂಬಿವೆ’ ಎಂದು ಟೀಕಿಸಿದರು.

‘2009ರ ಸೆಪ್ಟೆಂಬರ್ನಲ್ಲಿ ಮನೆ-ಮಾರು ಕಳೆದುಕೊಂಡ ರಾಯಚೂರು, ವಿಜಾಪುರ, ಗುಲ್ಬರ್ಗ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ವರ್ಷ ಕಳೆಯುತ್ತಾ ಬಂದರೂ ಇನ್ನೂ ಅವರು ತಗಡಿನ ಷೀಟ್ಗಳಲ್ಲೇ ಯಾತನಾದಾಯಕ ಜೀವನ ದೂಡುತ್ತಿದ್ದಾರೆ. ಇನ್ನು ಬೇಸಿಗೆ ಬರಲಿದ್ದು, ಅವರ ಬದುಕು ಇನ್ನಷ್ಟು ಸಂಕಷ್ಟಕ್ಕೊಳಗಾಗಲಿದೆ. ಈ ಬಗ್ಗೆ ಸರ್ಕಾರ ತಕ್ಕ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಸಮರ್ಥ ವಿರೋಧ ಪಕ್ಷ: ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಮಾತನಾಡಿ, ‘ಲಂಕೇಶ್ ಅವರು ತಮ್ಮ ಕಾಲದಲ್ಲಿ ಪತ್ರಿಕೆಯ ಮೂಲಕ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಿದರು. ಈಗ ವ್ಯಂಗ್ಯಚಿತ್ರಗಳ ಮೂಲಕ ‘ಪ್ರಜಾವಾಣಿ’ಯ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ಆ ಸ್ಥಾನ ತುಂಬಿದ್ದಾರೆ’ ಎಂದು ಪ್ರಶಂಸಿಸಿದರು.

ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ದ ರಾಜ್ಯ ಕಾರ್ಯದರ್ಶಿ ಡಾ.ಸಿದ್ಧನಗೌಡ ಪಾಟೀಲ್ ಮಾತನಾಡಿ, ‘ರಾಷ್ಟ್ರದಲ್ಲಿ ಎರಡೇ ಪಕ್ಷಗಳ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಬಲವಾದ ಪಿತೂರಿ ನಡೆಯುತ್ತಿದೆ. ಎಡಪಕ್ಷಗಳೂ ಸೇರಿದಂತೆ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡುವ, ಆ ಮೂಲಕ ಧಾರ್ಮಿಕ ಭಯೋತ್ಪಾದಕ (ಬಿಜೆಪಿ) ಮತ್ತು ಬಂಡವಾಳ ಭಯೋತ್ಪಾದಕ (ಕಾಂಗ್ರೆಸ್) ಪಕ್ಷಗಳು ಮಾತ್ರ ಅಸ್ತಿತ್ವದಲ್ಲಿರುವಂತೆ ಯೋಜನೆ ರೂಪಿಸಲಾಗುತ್ತಿದೆ’ ಎಂದರು.

‘ಕುವೆಂಪು ಅವರಿಗಿಂತ ಲಂಕೇಶ್ ಗದ್ಯ ಬರಹಗಳು ಹೆಚ್ಚು ಪ್ರಯೋಗಶೀಲವಾಗಿವೆ. ಇಂದು ಕೂಡ ನಮ್ಮ ಮಧ್ಯೆಯೇ ಬದುಕಿದ್ದಾರೆ ಎಂಬಷ್ಟು ನಮ್ಮನ್ನು ವಿಚಾರಗಳ ಮೂಲಕ ಆವರಿಸಿಕೊಂಡಿದ್ದಾರೆ’ ಎಂದರು.ಪಿ.ಲಂಕೇಶ್ ಅವರ ‘ಮರೆಯವ ಮುನ್ನ’ (ಸಂಗ್ರಹ 3) ಮತ್ತು ಗೌರಿ ಲಂಕೇಶ್ ಅವರ ‘ಕಂಡಹಾಗೆ’ (ಸಂಗ್ರಹ 2) ಸಂಪಾದಕೀಯ ಬರಹಗಳ ಸಂಕಲನವನ್ನು ಇಂದಿರಾ ಲಂಕೇಶ್ ಅವರು ಬಿಡುಗಡೆ ಮಾಡಿದರು.ಬಿಎಸ್ಪಿ ಮುಖಂಡ ಎನ್.ಮಹೇಶ್, ಜನಶಕ್ತಿ ಸಂಘಟನೆಯ ಸಂಚಾಲಕ ಡಾ.ಎಚ್.ವಿ.ವಾಸು ವೇದಿಕೆಯಲ್ಲಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.