ಶನಿವಾರ, ಜೂನ್ 19, 2021
24 °C

ಯೋಗದಿಂದ ಚೇತನ ಶಕ್ತಿ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಇಲ್ಲಿಯ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಯೋಗ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಮಹಿಳೆಯರು ಮಕ್ಕಳು ಸೇರಿ ನೂರಾರು ಜನ ಪಾಲ್ಗೊಂಡರು.ಗಣಪತರಾವ ಖೂಬಾ ಅವರು ಕ್ಯಾನ್ಸರ್, ಬೊಜ್ಜುತನ, ಮಧುಮೇಹ, ರಕ್ತದೊತ್ತಡ ಮುಂತಾದ ರೋಗಗಳಿಂದ ದೂರ ಇರಲು ಯೋಗ ಅಗತ್ಯ ಎಂದರು. ಅನುಲೋಮ, ವಿಲೋಮ, ಕಪಾಲಭಾತಿ, ಪ್ರಾಣಾಯಮದಂತಹ ಆಸನಗಳ ಬಗ್ಗೆ ಮಾಹಿತಿ ನೀಡಿದರು.ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಸತ್ಯವಾನ ಪಾಟೀಲ, ವಿಷರಹಿತ ಆಹಾರ ಬೆಳೆಸುವಂತೆ ರೈತರಿಗೆ ಸಲಹೆ ನೀಡಿದರು. ಉತ್ತಮ ಆರೋಗ್ಯ ಕಾಪಾಡಲು ಯೋಗದ ಜತೆಗೆ ಪೌಷ್ಠಿಕ ಆಹಾರ ಬೇಕು ಎಂದು ಹೇಳಿದರು.ಸರ್ಕಲ್ ಇನ್ಸ್‌ಪೆಕ್ಟರ್ ವಿನೋದ ಕುಮಾರ ಮಾತನಾಡಿ ಹಿರಿಯರು, ಮಕ್ಕಳು ನಸುಕಿನಲ್ಲಿ ಎದ್ದು ಯೋಗ ಮಾಡಬೇಕು. ಇದರಿಂದ ಅವಯವಗಳಲ್ಲಿ ಶಕ್ತಿ, ಚೈತನ್ಯ ಬರುತ್ತದೆ. ದೇಹಕ್ಕೆ ಆಹಾರ ಎಷ್ಟು ಅವಶ್ಯಕತೆವೋ ಯೋಗ ಅಷ್ಟೇ ಮುಖ್ಯ ಎಂದರು.  ಡಾ.ವಿಶ್ವನಾಥ ಖೋಬಾ ಯೋಗದ ವಿವಿಧ ಪ್ರಕಾರಗಳು ಮಾಡಿ ತೋರಿಸಿದರು.ಎನ್.ಡಿ. ರಾಮತೇರೆ, ವಿಶ್ವನಾಥ ಬುಟ್ಟೆ, ಡಾ. ವೈಜಿನಾಥ ಬುಟ್ಟೆ, ಚಂದ್ರಪ್ಪಾ ತಂಬಾಕೆ, ಶಿವರಾಜ ಅಲ್ಮಜೆ, ರಾಜಕುಮಾರ ಖರಾಬೆ, ಶಿವಲೀಲಾ ಸ್ವಾಮಿ, ಜಯಂತಿಮಾಲಾ ಪತಗೆ, ಡಾ. ಫಯಾಜ್ ಅಲಿ, ಕಲ್ಯಾಣರಾವ ದೇಶಮುಖ, ಡಾ. ಕಲ್ಲಪ್ಪಾ ಉಪ್ಪೆ, ಡಾ. ಸುಭಾಷ ಮೀಸೆ, ಇಂದಿರಾ ಕಾನ್ವೆಂಟ್ ಸೇರಿದಂತೆ ವಿವಿಧ ಶಾಲೆ ಶಿಕ್ಷಕರು ಮಕ್ಕಳು ಶಿಬಿರದ ಲಾಭ ಪಡೆದುಕೊಂಡರು. ಗುರನಾಥ ವಟಗೆ ಸ್ವಾಗತಿಸಿದರು. ರಮೇಶ ಹೂಗಾರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.