ಶುಕ್ರವಾರ, ಮೇ 7, 2021
20 °C

ಯೋಜನಾ ಮುಖ್ಯಸ್ಥೆಗೆ ಹೆಮ್ಮೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಹರಿಕೋಟಾ (ಐಎಎನ್‌ಎಸ್): ` `ಸುಮಧುರ ಭಾವನೆಗಳು ಮೈಮನವನ್ನು ತುಂಬಿವೆ. ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ~

- ರಾಷ್ಟ್ರದ ಮೊತ್ತಮೊದಲ ಸ್ವದೇಶಿ ನಿರ್ಮಿತ ರಿಸ್ಯಾಟ್-1 ಯಶಸ್ವಿಯಾಗಿ ಕಕ್ಷೆ ಸೇರಿದ ನಂತರ, ಯೋಜನೆಯ ನಿರ್ದೇಶಕಿ 52 ವಯಸ್ಸಿನ ಮಹಿಳಾ ವಿಜ್ಞಾನಿ ಎನ್.ವಳರ್‌ಮತಿ ಅವರು ಆಡಿದ ಮಾತುಗಳಿವು.

ರಿಸ್ಯಾಟ್-1 ಉಪಗ್ರಹ ತಯಾರಿ, ಉಡಾವಣೆ ಮತ್ತು ಕಾರ್ಯನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಳರ್‌ಮತಿ ಅವರದ್ದೇ.

ಮೂಲತಃ ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ವಳರ್‌ಮತಿ ಅವರು ತಮ್ಮ ಆರಂಭಿಕ ಶಿಕ್ಷಣ ಪೂರೈಸಿದ್ದ ಆ ಜಿಲ್ಲೆಯಲ್ಲೇ.

ಇಸ್ರೊದ ಉಪಗ್ರಹ ಯೋಜನೆಯೊಂದರ ನಿರ್ದೇಶಕ ಹೊಣೆ ನಿಭಾಯಿಸಿದ ಎರಡನೇ ಮಹಿಳೆ ಇವರು. ಇದಕ್ಕೆ ಮುನ್ನ ಟಿ.ಕೆ.ಅನುರಾಧಾ ಅವರು ಜಿಸ್ಯಾಟ್-12 ಸಂವಹನ ಉಪಗ್ರಹ ಯೋಜನೆಯ ಮುಖ್ಯಸ್ಥರಾಗಿದ್ದರು.

ವಳರ್‌ಮತಿ ಅವರು ವೃತ್ತಿ ಆರಂಭಿಸಿದ್ದು 1984ರಲ್ಲಿ, ಬೆಂಗಳೂರಿನ ಇಸ್ರೊ ಉಪಗ್ರಹ ಕೇಂದ್ರಕ್ಕೆ ಸೇರುವ ಮೂಲಕ. ಈ ಮುಂಚೆ ಅವರು ಇನ್ಸಾಟ್ 2ಎ, ಐಆರ್‌ಎಸ್ ಐಸಿ, ಐಆರ್‌ಎಸ್ ಐಡಿ, ಟಿಇಎಸ್ ಮತ್ತು ರಿಸ್ಯಾಟ್ ಉಪಗ್ರಹ ಯೋಜನೆಗಳಲ್ಲಿ ಭಾಗಿಯಾಗಿದ್ದರು.

ವಳರ್‌ಮತಿ ಅವರ ಪತಿ ಜಿ.ವಾಸುದೇವನ್ ಬ್ಯಾಂಕ್ ಸೇವೆಯಲ್ಲಿದ್ದಾರೆ. ದಂಪತಿಗೆ ಮಗ, ಮಗಳು ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.