`ರಂಗಭೂಮಿ ಮುಖೇನ ಶಿಕ್ಷಣ ಅಥವಾ ತರಬೇತಿ~ ಎನ್ನುವುದು ಆಧುನಿಕ ಶಿಕ್ಷಣದ ಒಂದು ಕ್ರಮ. ಇದು ಮಕ್ಕಳು, ಹಿರಿಯರು ಎನ್ನದೆ ಉದ್ಯೋಗಿಗಳು ಒಳಗೊಂಡಂತೆ ಎಲ್ಲರಿಗೂ ಹೆಚ್ಚಿನ ಉಪಯೋಗವಾಗಬಲ್ಲ ಮಾಧ್ಯಮ.

`ರಂಗಭೂಮಿ-ನಾಟಕ~ ಎನ್ನುವುದೇ ನಿರಂತರ ಕಲಿಯುವಿಕೆಯನ್ನು ಒತ್ತಾಯಿಸುವ ಒಂದು ಕಲಾ ಪ್ರಕಾರ. ಪ್ರತಿ ದಿನ ಹೊಸತನ್ನು ಕಲಿಯುವುದು ರಂಗಭೂಮಿಯ ಸಾಧ್ಯತೆಗೆ ಅನಿವಾರ್ಯವಾದದ್ದು. ನಾಟಕದ ಮುಖ್ಯ ಉದ್ದೇಶ ಮನರಂಜನೆಯಾದರೂ, ಈ ಮಾಧ್ಯಮ ಗಂಭೀರ ವಿಚಾರಗಳತ್ತ ಪ್ರೇಕ್ಷಕರ ಗಮನ ಸೆಳೆದು ಅವರನ್ನು ಚಿಂತನಾಶೀಲರನ್ನಾಗಿ ಮಾಡುವಲ್ಲಿ, ವ್ಯಕ್ತಿತ್ವ ವಿಕಸನದಲ್ಲಿ ಹಾಗೂ ಒಂದು ಸ್ವಸ್ಥ ಪರಿಸರ ಅಥವಾ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲೂ ಮಹತ್ವವಾದ ಪಾತ್ರ ನಿರ್ವಹಿಸುತ್ತಿದೆ. `ರಂಗಭೂಮಿಯು ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣ~ ಹೊಂದಿರುವ ಮಾಧ್ಯಮವಾಗಿದೆ.

ಮಹಾತ್ಮ ಗಾಂಧೀಜಿಯವರು `ಪಾಠ ಶಾಲೆ~, `ನಾಟಕ ಶಾಲೆ~ ಹಾಗೂ `ಗೋಶಾಲೆ~ಗಳ ಮಹತ್ವವನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಅರಿತವರಾಗಿದ್ದರು. `ಪಾಠಶಾಲೆ~ಯು ಓದು ಬರಹ ಕಲಿಸಿದರೆ `ನಾಟಕ ಶಾಲೆ~ಯು ಓದು ಬರಹವನ್ನು ನಾವು ಯಾವ ಉದ್ದೇಶಕ್ಕಾಗಿ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ, ಅಂತೆಯೇ `ಗೋಶಾಲೆ~ಯು ನಮಗೆ ಹಸುವಿನ ಹಾಗೆ ಪರಿಸರವನ್ನು ಸ್ವಚ್ಛವಾಗಿ ಇಡುವುದನ್ನು ಕಲಿಸಿಕೊಡುತ್ತದೆ. ಹೀಗಾಗಿ ಇಂದು ಓದಿನ ಉದ್ದೇಶ ಹೇಳಿ ಕೊಡುವ `ನಾಟಕ ಶಾಲೆ~ಗೆ ಎಲ್ಲಿಲ್ಲದ ಮಹತ್ವ.

`ನಾಟಕಗಳು~ ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿದೆ. ಉದಾಹರಣೆಗೆ: ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದಲ್ಲಿ, ಮನೋವಿಜ್ಞಾನ ಕ್ಷೇತ್ರದಲ್ಲಿ, ಆರೋಗ್ಯ, ನೈರ್ಮಲ್ಯ, ಸಹಬಾಳ್ವೆ, ಕೋಮು ಸೌಹಾರ್ದತೆ, ಕುಟುಂಬ ಯೋಜನೆ, ಹದಿಹರೆಯದ ಸಮಸ್ಯೆಗಳು, ಸಾಕ್ಷರತೆ, ವಯಸ್ಕರ ಶಿಕ್ಷಣ ಇತ್ಯಾದಿ ವಿಷಯಗಳನ್ನು ಒಳಗೊಂಡಂತೆ ಅರಿವು ಮೂಡಿಸುವಲ್ಲಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ರಂಗಭೂಮಿ ಪಾತ್ರ ಮಹತ್ವದ್ದಾಗಿದೆ.

`ಶಿಕ್ಷಣಪಠ್ಯ~ವನ್ನು, ರಂಗಭೂಮಿಯ ಸಾಧನಗಳು ಮತ್ತು ತಂತ್ರಗಳನ್ನು ಬಳಸಿ ಬೋಧಿಸುವ ವಿಧಾನ ಇಂದು ಪ್ರಪಂಚದಾದ್ಯಂತ ಪ್ರಚಲಿತದಲ್ಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ರಂಗ ತಜ್ಞರು, ಭಾಷಾಶಾಸ್ತ್ರಜ್ಞರು, ಮನೋವಿಜ್ಞಾನಿಗಳು `ಕಲಿ-ನಲಿ, `ಆಟದೊಡನೆ ಪಾಠ~ ಮುಂತಾದ ಹಲವು ನೂತನ ವಿಧಾನಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಅಧ್ಯಯನ ನಡೆಸಿ ಶಿಕ್ಷಣ ಕ್ರಮದಲ್ಲಿ ಹೊಸತನವನ್ನು ತಂದಿದ್ದಾರೆ. ಕಲೆಗಳು, ರಂಗಭೂಮಿ, ಚಿತ್ರಕಲೆ, ಸಂಗೀತ ನೃತ್ಯ ಹಾಗೂ ರಂಗಾಟಗಳನ್ನು `ರಂಗಮುಖೇನ ಶಿಕ್ಷಣ~ ಎಂಬ ಪರಿಕಲ್ಪನೆಯಲ್ಲಿ ಅಳವಡಿಸುವ ಪ್ರಯತ್ನಗಳು ವ್ಯಾಪಕವಾಗಿವೆ.

`ಶಾಲೆ~ ಎಂದರೆ ಬರಿದೇ ಪುಸ್ತಕ ಓದುವ, ಪುಸ್ತಕದಲ್ಲಿ ಬರೆದಿರುವುದನ್ನು ಕಲಿಯುವ ಒಂದು ಕೇಂದ್ರವಲ್ಲ. ಅದು ಮಕ್ಕಳ ಮನಸ್ಸನ್ನು ವಿಕಸನಗೊಳಿಸುವ ಒಂದು ಕೇಂದ್ರವು ಹೌದು. ಶಾಲೆಯ ಓದಿನ ಜೊತೆಗೆ ಮನೆಪಾಠ, ಪರೀಕ್ಷೆ ಎಂದು ಒತ್ತಡಗಳಿಂದ ಮಗುವಿನ ಕ್ರಿಯಾತ್ಮಕತೆ ಮತ್ತು ಸಾಮರ್ಥ್ಯ ವ್ಯರ್ಥವಾಗುತ್ತಿದೆ. 1837ರಲ್ಲಿ ಬ್ರಿಟಿಷ್ ಅಧಿಕಾರಿ `ಮೆಕಾಲೆ~ ಜಾರಿಗೆ ತಂದ ಗುಮಾಸ್ತರನ್ನು ಉತ್ಪಾದಿಸುವ ಶಾಲಾ ವ್ಯವಸ್ಥೆಯಲ್ಲಿ ನಾವೆಲ್ಲರೂ ಇಂದಿಗೂ ಬಂಧಿಗಳಾಗಿದ್ದೇವೆ. ನಾಲ್ಕು ಗೋಡೆಗಳ ಕೋಣೆಯಲ್ಲಿ ನಾವು ಕಲಿತದ್ದು, ಹೇಳಿದಷ್ಟು ಕೇಳು- ಹೇಳಿದಷ್ಟು ಮಾಡು, ಸುಮ್ಮನಿರು... ಪಾಠ ಮಾಡುತ್ತಿದ್ದವರು ನಮ್ಮ ಧ್ವನಿಯನ್ನು ಕೇಳದೆ ಉಡುಗಿಸುತ್ತಿದ್ದರು.

ನಮ್ಮ ಶಿಕ್ಷಣ ಪದ್ಧತಿಯು ಕಲಿಯುವಿಕೆಯಲ್ಲಿ ಕಬ್ಬಿಣದ ಕಡಲೆ. ಬೇಸರ ತರಿಸುತ್ತದೆ, ನಿದ್ದೆ ಬರಿಸುತ್ತದೆ ಎಂಬ ಭ್ರಮೆಯನ್ನು ಹೋಗಲಾಡಿಸಿ, ಆಡುತ್ತಾ, ಹಾಡುತ್ತಾ, ನಲಿಯುತ್ತಾ ಕಲಿಯುವಿಕೆಯನ್ನು ಹಗುರಗೊಳಿಸುವ ನಿಟ್ಟಿನಲ್ಲಿ `ರಂಗಭೂಮಿ ಬಳಕೆ~ ಒಂದು ಬಹು ಉಪಯೋಗಿ ಸಾಧನವಾಗಿದೆ.

`ಜ್ಞಾನ~ವೇ ಅಥವಾ `ಜಗತ್ಗ್ರಾಮ ನೀಡುವ ಮಾಹಿತಿಯೇ ನಮ್ಮ ಶಕ್ತಿ~ ಎಂದು ನಾವು ನಂಬುತ್ತಿರುವ ದಿನಗಳು ಇವು. ಹೀಗಾಗಿ ನಮ್ಮ ಶೈಕ್ಷಣಿಕ ಪದ್ಧತಿಯಲ್ಲಿ ಜ್ಞಾನಕ್ಕೆ ಹೆಚ್ಚಿನ ಸ್ಥಾನ. ಎಲ್ಲರಿಗೂ `ಜ್ಞಾನವೇ ದೊಡ್ಡ ಶಕ್ತಿ~. ಅದನ್ನೇ ಮಕ್ಕಳಿಗೂ ಹೇಳಿಕೊಡುತ್ತಿದ್ದೇವೆ.

ಆದರೆ ಸಂಪಾದಿಸಿದ ಜ್ಞಾನ ಚಟುವಟಿಕೆಯ ರೂಪತಾಳಿ ಒಂದು ಶಕ್ತಿಯಾಗಿ ಉಪಯುಕ್ತವಾಗಬೇಕು. ಇಂದು ಅಪಾರ ಪ್ರಮಾಣದಲ್ಲಿ ಶಾಲೆಯಲ್ಲಿ ದೊರಕುತ್ತಿರುವ ಈ `ಮಾಹಿತಿ ಜ್ಞಾನ~ವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ತಿಳಿಯದಿದ್ದರೆ ಯಾವುದೇ ಮಗು ಹೇಗೆ ತಾನೆ ಸಮರ್ಥವಾಗಿ ಬೆಳೆದೀತು?

ಬೆಳೆಯುತ್ತಿರುವ ಮಗುವೊಂದು ಕುಟುಂಬ ಪರಿಸರದಿಂದ ಹೊಸಲು ದಾಟಿ ಶಾಲೆಯ ಮೆಟ್ಟಿಲು ಹತ್ತುತ್ತಿದ್ದಂತೆಯೇ, ತಾನು ಈವರೆಗೂ ಆನಂದದಿಂದ ಆಡಿಕೊಂಡಿದ್ದ ಆಟಗಳನ್ನು ಮೊಟಕುಗೊಳಿಸಿ, ಶಾಲೆಯಲ್ಲಿ ಒಂದು ಶಿಸ್ತಿಗೆ ಒಳಪಟ್ಟು ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. `ಶಿಸ್ತು~ ಮಗುವಿನ ಮನಸ್ಸು, ಮೈಯನ್ನು ಕಟ್ಟಿಹಾಕುತ್ತದೆ. ಕಲಿಯಲೇಬೇಕಾದ ಶಿಕ್ಷಣ ಭಾರವೆನಿಸತೊಡಗುತ್ತದೆ.

ಆಟ ಮಗುವಿಗೆ ಮುಕ್ತತೆ, ಆನಂದವನ್ನು ನೀಡುವ ಮತ್ತು ಆ ಮೂಲಕ ಹಲವು ವಸ್ತು ವಿಷಯಗಳನ್ನು ತನಗರಿವಿಲ್ಲದಂತೆಯೇ ಕಲಿಸಲು ಒಂದು ಮಾಧ್ಯಮ ಎಂಬುದನ್ನು ಸುಮಾರು 1950ಕ್ಕೂ ಮೊದಲೇ ಪಾಶ್ಚಾತ್ಯ ಶಿಕ್ಷಣ ತಜ್ಞರು ಮನಗಂಡಿದ್ದಾರೆ. ನಾಟಕವೇ ಒಂದು ಆಟವಾದುದರಿಂದ ರಂಗಭೂಮಿಯೇ ಹಲವು ಹತ್ತು ಸಾಧನ ಮತ್ತು ಅವುಗಳನ್ನು ಕಲಿಯುವುದಕ್ಕೆ ಸಾಧ್ಯ ಎಂದು ತೋರಿಸಿ ಕೊಟ್ಟಿದೆ.

ಆಧುನಿಕ ರಂಗಭೂಮಿಯ ಎಷ್ಟೋ ತಂತ್ರಗಳನ್ನು ಶಿಕ್ಷಣದಲ್ಲಿ ಸಮರ್ಥವಾಗಿ ಬಳಸಬಹುದು. `ರಂಗಭೂಮಿ~ ಮಾತನಾಡುವುದು ನಮ್ಮ ಸಮಾಜದ ಬಗ್ಗೆ, ನಮ್ಮ ಬದುಕಿನ ಬಗ್ಗೆ. ಹೀಗಾಗಿ ಅದನ್ನು `ಬದುಕಿನ ಪ್ರತಿಬಿಂಬ~ ಎಂದು ಕರೆಯುತ್ತಾರೆ. ರಂಗಭೂಮಿಯ ವೇದಿಕೆಯ ಮೇಲೆ ಪ್ರಸ್ತಾಪವಾಗದ ವಿಷಯಗಳೇ ಇಲ್ಲ. ಇಲ್ಲಿ ತಮ್ಮದೇ ಬದುಕನ್ನು ರಂಗದ ಮೇಲೆ ನೋಡುವುದರ ಮೂಲಕ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತಮ್ಮದೇ ಧೋರಣೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕನಾದವನಿಗೆ ರಂಗಭೂಮಿಯ ಬಗೆಗಿನ ಪರಿಚಯದ ಅಗತ್ಯ ಇದೆ.

ಯಾವುದೇ ಮಗು ಒಬ್ಬಂಟಿಯಾಗಿ ಕಲಿಯುವುದಕ್ಕಿಂತ ಗುಂಪಿನಲ್ಲಿ ಕಲಿಯಲು ಹೆಚ್ಚು ಇಷ್ಟಪಡುತ್ತದೆ ಹಾಗೂ ಅನುಕರಣೆ ಮಾಡಲು ಬಯಸುತ್ತದೆ. ಉದಾಹರಣೆಗೆ ಮಕ್ಕಳು ಸಾಮಾನ್ಯವಾಗಿ ಆಡುವ ಎಲ್ಲಾ ಆಟಗಳನ್ನು ಗಮನಿಸಬಹುದು. ಈ ಆಟಗಳಲ್ಲಿ ಮಗು ತಾನು ಕಂಡ, ಇಷ್ಟಪಟ್ಟ ವ್ಯಕ್ತಿ ತಾನೇ ಆಗಿ ತನ್ನ ಅನುಭವದ ಪರಿಧಿಯನ್ನು ತನಗೆ ತಿಳಿಯದಂತೆ ಕ್ರಿಯಾತ್ಮಕವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಅಲ್ಲದೆ ರಂಗಭೂಮಿಯಲ್ಲಿ ನಟನೊಬ್ಬನನ್ನು ಸಜ್ಜುಗೊಳಿಸಲು ಹಲವಾರು ರಂಗಾಟಗಳನ್ನು ರೂಪಿಸಲಾಗಿದೆ. ಅವುಗಳನ್ನೇ ಶಿಕ್ಷಣದಲ್ಲಿ ತರಬಹುದಾಗಿದೆ.

ತರಗತಿಗಳಲ್ಲಿ ಮಕ್ಕಳು, ಕೈಗಾರಿಕೆಗಳಲ್ಲಿ ಅಥವಾ ಕಚೇರಿಗಳಲ್ಲಿನ ಉದ್ಯೋಗಿಗಳು ತಮ್ಮ ಮಾನವ ಸಂಪನ್ಮೂಲ ಕೇಂದ್ರಗಳಲ್ಲಿ ಶಿಕ್ಷಕನ ಮಾರ್ಗದರ್ಶನದಲ್ಲಿ ಆಟಗಳನ್ನು ಆಡುತ್ತಾ ತಮ್ಮಲ್ಲಿ ಹಿಂಜರಿಕೆ, ಸಂಕೋಚ, ಭಯ, ಕೀಳರಿಮೆಗಳನ್ನು ಕಡಿಮೆ ಮಾಡಿಕೊಳ್ಳುತ್ತಾ, ಕಲ್ಪನಾ ಚಾತುರ್ಯ, ಉಚ್ಚಾರ ಸ್ಪಷ್ಟತೆ, ಧ್ವನಿ ಏರಿಳಿತ, ಗ್ರಹಣ ಶಕ್ತಿ, ಗಮನಿಸುವಿಕೆ, ಧೈರ್ಯ, ಸಂವಹನ, ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬಹುದು. ಅಲ್ಲದೆ ವಿಷಯಗಳ ವಿಸ್ತರಣೆಗಳ ಮೂಲಕ ಶಿಕ್ಷಣ ಪಠ್ಯವನ್ನೇ ಕಲಿಯಲು ಸಾಧ್ಯವಿದೆ. ಹೀಗೆ ಅನೌಪಚಾರಿಕ ವ್ಯವಸ್ಥೆಯ ಮೂಲಕವೇ ಔಪಚಾರಿಕ ಶಿಕ್ಷಣವನ್ನು ಗ್ರಹಿಸಬಹುದು. ಈ ಮೂಲಕ ತಮ್ಮನ್ನೇ ತಾವು ಕಂಡುಕೊಳ್ಳಬಹುದಾಗಿದೆ.

`ಶಿಕ್ಷಣದಲ್ಲಿ ರಂಗಭೂಮಿ~ಯ ಸಾಧನ ಮತ್ತು ತಂತ್ರಗಳನ್ನು ಅಳವಡಿಸುವುದರಿಂದ ಮಕ್ಕಳು ಅಲ್ಲದೆ ಹಿರಿಯರ ಸರ್ವತೋಮುಖ ವಿಕಾಸ ಸಾಧ್ಯವಾಗಿ, ಶಿಕ್ಷಣದ ಅಥವಾ ಕಲಿಕೆಯ ಭಾರ ಹಗುರವಾಗಿ ಕಾಣುವಂತೆ ಮಾಡಬಹುದಾಗಿದೆ.

ಶಿಕ್ಷಣ ಕ್ರಮದಲ್ಲಿ ರಂಗಭೂಮಿಯ ತಂತ್ರಗಳನ್ನು ಅಳವಡಿಸುವ ಆಲೋಚನೆಯನ್ನು ಇಂದು ವಿಶ್ವದಾದ್ಯಂತ ಎಲ್ಲ ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ. ನಮ್ಮ ಸರ್ಕಾರವು ಇತ್ತ ಗಮನ ಹರಿಸಿ ಶಿಕ್ಷಣದಲ್ಲಿ ರಂಗಭೂಮಿಯನ್ನು ಒಂದು ಪಠ್ಯಕ್ರಮವಾಗಿ ಅಳವಡಿಸಿಕೊಳ್ಳುವುದು ಸೂಕ್ತ.

ಇದು ಶಾಲೆಗೆ ಮಾತ್ರ ಸೀಮಿತವಾಗದೆ ಯಾವುದೇ ಕಚೇರಿ, ಸಂಸ್ಥೆಗಳಲ್ಲಿನ ಉದ್ಯೋಗಿಗಳಿಗಾಗಿ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳ ತರಬೇತಿಗಳಲ್ಲಿ ರಂಗಭೂಮಿಯ ಮೂಲಕ ಕಲಿಕೆ ಅಳವಡಿಸಿಕೊಳ್ಳುವುದರಿಂದ ರಂಜನೆಯೊಂದಿಗೆ ಕಲಿಕೆ ಸಾಧ್ಯ. ಇಂಥ ಕಲಿಕೆಯಿಂದಾಗಿ, ಒಬ್ಬ ನೌಕರ ಅಥವಾ ಅಧಿಕಾರಿ ತನ್ನ ಮನಸ್ಸಿನಲ್ಲಿರುವ ವಿಷಯವನ್ನು ಸ್ಪಷ್ಟವಾಗಿ, ಆತ್ಮವಿಶ್ವಾಸದೊಂದಿಗೆ ತನ್ನ ಅಧಿಕಾರಿ ಅಥವಾ ಸಭೆಗೆ ಸ್ಪಷ್ಟಪಡಿಸುವ ಸಾಮರ್ಥ್ಯ ಹೊಂದುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.