ರತನ್ ಪಾಲ್ ಇನ್ನೈದು ದಿನ ಸಿಬಿಐ ವಶಕ್ಕೆ
ನವದೆಹಲಿ, (ಪಿಟಿಐ): ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಅಮಾನತುಗೊಂಡ ರಾಷ್ಟ್ರೀಯ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್ (ನಾಲ್ಕೊ) ಸಿಎಂಡಿ ಎ.ಕೆ. ಶ್ರೀವಾಸ್ತವ್ ಅವರ ದಲ್ಲಾಳಿ ರತನ್ಪಾಲ್ ಸಿಂಗ್ನನ್ನು ಇನ್ನೂ ಐದು ದಿನ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ನ್ಯಾಯಾಧೀಶ ಒ.ಪಿ. ಸೈನಿ, ಪಾಲ್ನನ್ನು ಹೆಚ್ಚಿನ ವಿಚಾರಣೆಗೆ ಐದು ದಿನ ಸಿಬಿಐ ವಶಕ್ಕೆ ಒಪ್ಪಿಸಿದರು. ಫೆ. 25 ರಂದು ಶ್ರೀವಾಸ್ತವ್ ಮತ್ತು ನಾಲ್ಕೊ ಸಿಬ್ಬಂದಿ ಬಿ.ಎಲ್. ಬಜಾಜ್ ಎಂಬುವವರನ್ನು ಬಂಧಿಸಿದ್ದ ಸಿಬಿಐ 2.13 ಕೋಟಿ ಮೌಲ್ಯದ10 ಕೆ.ಜಿ. ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.