ಬುಧವಾರ, ಮೇ 25, 2022
31 °C

ರಾಣಿ ಶುಗರ್ಸ್‌ನಿಂದ ಉತ್ತಮ ದರ್ಜೆ ಸಕ್ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ಎಂ. ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬುಧವಾರ ಭೇಟಿ ನೀಡಿದ್ದ ವಿದೇಶಿಗರು, ಗಂಧಕರಹಿತ ಸಕ್ಕರೆ ಉತ್ಪಾದನೆಯಲ್ಲಿ ಕೈಗೊಳ್ಳಲಾಗಿರುವ ವ್ಯವಸ್ಥೆ ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಖಾನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ. ಬಿ. ಇನಾಮದಾರ ಜೊತೆ ಔಪಚಾರಿಕವಾಗಿ ಚರ್ಚೆ ಮಾಡಿದ ದೆಹಲಿಯ ಪ್ಯೂರ್ ಲೈಫ್ ರಫ್ತು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ ಮಾಥೂರ್, ಯುನೈಟೆಡ್ ಕಿಂಗ್‌ಡಮ್‌ದ ಸೆಸಿಲ್ ಡೆವಿಡ್ ಹಾಗೂ  ನೇದರ್‌ಲ್ಯಾಂಡ್‌ದ ಆರ್ಟ್ ಜೋನ್‌ಜೋನಕರ್ ಅವರು, ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ ವ್ಯವಸ್ಥೆಗಳು ಹಾಗೂ ಅಲ್ಲಿ ಕೈಗೊಂಡಿರುವ ಸ್ವಚ್ಛತೆಯನ್ನು ಹೊಗಳಿದರು.‘ಕಳೆದ ಬಾರಿ ಗಂಧಕ ರಹಿತ ಸಕ್ಕರೆ ಉತ್ಪಾದನೆ ಘಟಕಕ್ಕೆ ಭೇಟಿ ನೀಡಿದಾಗ ಹಲವು ಸಲಹೆಗಳನ್ನು ನೀಡಿದ್ದೆವು. ಸಕ್ಕರೆ ಬೀಳುವಲ್ಲಿ ಕಸಕಡ್ಡಿ ಇರದಂತೆ ನೋಡಿಕೊಳ್ಳುವುದು. ಅಲ್ಲಿನ ಪರಿಸರ ಸ್ವಚ್ಛತೆ ಕಾಪಾಡುವುದು. ಕೈಗವಚ ಹಾಕಿಕೊಂಡು ಸಕ್ಕರೆ ಪ್ಯಾಕ್ ಮಾಡುವುದು. ನೌಕರರ ಸುರಕ್ಷತೆ ಬಗ್ಗೆ ಕಾರ್ಖಾನೆಯರಿಗೆ ನೀಡಲಾಗಿದ್ದ ಸಲಹೆಗಳನ್ನು ಜಾರಿಗೆ ತಂದಿದ್ದು ಸಂತೋಷ ತಂದಿದೆ’ ಎಂದು ಮುಖ್ಯ ರಾಸಾಯನಿಕ ತಜ್ಞ ಸಿ. ಬಿ. ಪಾಟೀಲ ಎದುರು ಹೇಳಿದರು.‘ಈ ಮೊದಲು ಮಿಲ್ಲ ಒಳಗಡೆ ಜೇನುಗೂಡು ಕಟ್ಟಿದ್ದವು. ಧೂಳು ಆವರಿಸಿರುತ್ತಿತ್ತು. ಜೇಡು ಬಲೆ ಕಟ್ಟಿದ್ದವು. ಈಗೆಲ್ಲ ಅವು ಮಾಯ ವಾಗಿವೆ. ಒಳ್ಳೆಯ  ವಾತಾವರಣ ಮಧ್ಯೆ ಉತ್ತಮ ದರ್ಜೆಯ ಸಕ್ಕರೆ ಉತ್ಪಾದನೆ ಮಾಡುತ್ತಿದೆ. ಇಂತಹ  ಸಕ್ಕರೆ ರಫ್ತಿಗೆ ಹೆಚ್ಚು ಅವಕಾಶವಿ ರುತ್ತದೆ’ ಎಂದೂ ಅವರು ವಿವರಿಸಿದರು. ರಾಣಿ ಶುಗರ್ಸ್‌ ಉಪಾಧ್ಯಕ್ಷ ರಾಜೇಂದ್ರ ಅಂಕಲಗಿ, ವ್ಯವಸ್ಥಾಪಕ ನಿರ್ದೇಶಕ ಎಂ. ಡಿ. ಮಲ್ಲೂರ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.6ನೇ ವೇತನ ಆಯೋಗ ಜಾರಿಗೆ ಒತ್ತಾಯ

ಚನ್ನಮ್ಮನ ಕಿತ್ತೂರು: ‘ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರಿ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೆ ತರುವಂತೆ’ ಕರ್ನಾಟಕ ರಾಜ್ಯ ಸರಕಾರಿ ನೌಕರರ ಬೈಲಹೊಂಗಲ ತಾಲ್ಲೂಕು ಘಟಕ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.ಈ ಬಗ್ಗೆ ಬುಧವಾರ ಇಲ್ಲಿಯ ಉಪ ತಹಸೀಲ್ದಾರ ಅಶೋಕ ಗುರಾನಿ ಅವರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದ ಸಂಘಟನೆ ಸದಸ್ಯರು, ‘ರಾಜ್ಯ ಸರಕಾರಿ ನೌಕರರ ವೇತನ ಭತ್ಯೆಗಳನ್ನು ಕಾಲ, ಕಾಲಕ್ಕೆ ಸರಿಯಾಗಿ ಪರಿಷ್ಕರಿಸುತ್ತ ಬಂದಿದೆ.ರಾಷ್ಟ್ರಾದ್ಯಂತ ಬಹುತೇಕ ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಮಾದರಿಯಲ್ಲಿ ತನ್ನ ನೌಕರರಿಗೆ ಆರ್ಥಿಕ ಸವಲತ್ತುಗಳನ್ನು ಕಲ್ಪಿಸಿ, ವೇತನ ಹಾಗೂ ಭತ್ಯೆಗಳನ್ನು ನೀಡಿವೆ.ಕಾರಣ ರಾಜ್ಯ ಸರಕಾರವು ಕೇಂದ್ರದ ಮಾದರಿಯಲ್ಲೇ ವೇತನ ಪರಿಷ್ಕರಣೆ ಮಾಡಬೇಕು’ ಎಂದು ನೌಕರರ ಸಂಘದ ಉಪಾಧ್ಯಕ್ಷ ಜಿ.ಸಿ. ಕೆರಿಮಠ, ಸಂಘಟನಾ ಕಾರ್ಯದರ್ಶಿ ಎಂ.ಎಸ್. ಉಡಕೇರಿ, ನಿರ್ದೇಶಕ ಎಂ.ಎಫ್. ಜಕಾತಿ, ಡಾ. ಸೀತಾರಾಮ್, ವಿ.ಎಸ್. ನಂದಿಹಳ್ಳಿ, ಐ.ಜಿ. ಚನ್ನಣ್ಣವರ, ಎಫ್.ಎಸ್. ಪಾಟೀಲ, ಸಿ.ಎಲ್. ಗಂಗನಾಯ್ಕ, ಎಸ್.ಎ. ನದಾಫ್ ಹಾಗೂ ಇತರರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.