ಶನಿವಾರ, ಜೂನ್ 19, 2021
23 °C

ರಾಯಚೂರು: 25 ಕೇಂದ್ರಗಳಲ್ಲಿ ಪಿಯು ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪದವಿ ಪೂರ್ವ ಶಿಕ್ಷಣ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ಇದೇ 15ರಂದು ಆರಂಭವಾಗುತ್ತಿದ್ದು, ಇದಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯು ಸಕಲ ಸಿದ್ಧತೆ ಮಾಡಿದೆ.ಜಿಲ್ಲೆಯ ಒಟ್ಟು 25 ಕಡೆ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 15,147 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 4,868 ವಿದ್ಯಾರ್ಥಿಗಳು, 4,036 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 8.904 ಈ ವರ್ಷದ (ರೆಗ್ಯುಲರ್) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮರು ಪರೀಕ್ಷೆ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು 6.243 ಜನರಿದ್ದು, ಒಟ್ಟು 15,147 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇ ಶಕ ಚಂದ್ರಶೇಖತ ತೊರವಿ `ಪ್ರಜಾವಾಣಿ~ಗೆ ತಿಳಿಸಿದರು.ಜಿಲ್ಲೆಯಲ್ಲಿ 6 ಸಾಮಾನ್ಯ, 16 ಸೂಕ್ಷ್ಮಹಾಗೂ3ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ರಾಯಚೂರು 5, ಲಿಂಗಸುಗೂರು -1 (ಸಾಮಾನ್ಯ ಪರೀಕ್ಷಾ ಕೇಂದ್ರಗಳು)  ರಾಯಚೂರು-5, ಸಿಂಧನೂರು-5, ಮಾನ್ವಿ- 3, ಲಿಂಗಸುಗೂರು-3 ( ಸೂಕ್ಷ್ಮ ಕೇಂದ್ರಗಳು),ಲಿಂಗಸುಗೂರು-1, ದೇವದುರ್ಗ-2 (ಅತೀ ಸೂಕ್ಷ್ಮ ಕೇಂದ್ರಗಳು) ಗುರುತಿಸಲಾಗಿದೆ ಎಂದು ಹೇಳಿದ್ದಾರೆ.ಪರೀಕ್ಷಾ ಕೇಂದ್ರಗಳು: ಜಿಲ್ಲೆಯಾದ್ಯಂತ ಒಟ್ಟು 25 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದರಲ್ಲಿ  ರಾಯಚೂರು ನಗರದಲ್ಲಿ-10, ದೇವದುರ್ಗ-2, ಲಿಂಗಸುಗೂರು-5, ಸಿಂಧನೂರು-5, ಮಾನ್ವಿ-3 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.ಪಿಯುಸಿ ಪರೀಕ್ಷೆ ಗುರುವಾರ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಕಡೆ ಗುರುತಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಆಸನ ವ್ಯವಸ್ಥೆ, ಪರೀಕ್ಷಾರ್ಥಿಯ ಆಸನ ಸಂಖ್ಯೆ ಬರೆಯುವುದು ಸೇರಿದಂತೆ ಹಲವು ರೀತಿಯ ಸಿದ್ಧತೆಯಲ್ಲಿ ಆಯಾ ಕಾಲೇಜಿನ ಸಿಬ್ಬಂದಿ, ಪರೀಕ್ಷಾ ಕೇಂದ್ರದ ಉಸ್ತುವಾರಿ ಅಧಿಕಾರಿಗಳು ಪರೀಕ್ಷಾ ಮುನ್ನಾ ದಿನವಾದ ಬುಧವಾರ ಕಂಡು ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.