ಬುಧವಾರ, ಜನವರಿ 22, 2020
16 °C

ರಿಚಾ ಅದೃಷ್ಟಕ್ಕೆ ಒಲಿದ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಆಕೆಯ ಅದೃಷ್ಟಕ್ಕೆ ನನ್ನ ಶ್ರಮ ಸೇರಿ ಶತಕ ಒಲಿದು ಬಂದಿದೆ. ಈ ಮೂಲಕ ನನ್ನ ಅನೇಕ ದಿನಗಳ ಕನಸು ನನಸಾಗಿದೆ. ಈ ಶತಕ ಆಕೆಗೆ ಸೇರಿದ್ದು...’ನಗರದಲ್ಲಿ ನಡೆಯುತ್ತಿರುವ ಪಂಜಾಬ್‌ ವಿರುದ್ಧದ ರಣಜಿ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಶತಕ ಗಳಿಸಿದ ಆರ್‌. ವಿನಯ್‌ ಕುಮಾರ್‌ ಆಡಿದ ಮಾತಿದು.ದೆಹಲಿ ಮೂಲದ ರಿಚಾ ಅವರನ್ನು ನವೆಂಬರ್‌ 30ರಂದು ಮದುವೆ ಯಾದ ಭಾರತ ತಂಡದ ವೇಗಿ ವಿನಯ್‌ ಕುಮಾರ್‌ ಕಳೆದ ಮೂರು ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪರ ಆಡಿರಲಿಲ್ಲ. ದಾಂಪತ್ಯಕ್ಕೆ ಕಾಲಿಟ್ಟ ನಂತರ ಅವರ ಮೊದಲ ಪಂದ್ಯಕ್ಕೆ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನ ವೇದಿಕೆಯಾಗಿತ್ತು.  ಸೋಮವಾರ ದಿನದಾಟ ಮುಗಿದ ನಂತರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು ಬ್ಯಾಟಿಂಗ್‌ನಲ್ಲಿ ಸಾಧನೆ ಮಾಡಲು ಐದು ವರ್ಷ ಗಳಿಂದ ಸತತ ಪ್ರಯತ್ನ ಮಾಡುತ್ತಿದ್ದೇನೆ. ಇಂದು ಇದಕ್ಕೆ ಫಲ ಸಿಕ್ಕಿದೆ. ಈ ಸಾಧನೆ ತುಂಬ ಖುಷಿ ತಂದಿದೆ ಎಂದು ಹೇಳಿದರು.‘ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾ ವಣೆಗಳಾಗಿದ್ದು ಇದರೊಂದಿಗೆ ಅನೇಕ ಅನಿವಾರ್ಯತೆಗಳು ಉಂಟಾಗಿವೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ಅರ್ಥಾತ್‌ ಬೌಲರ್‌ಗಳು ಬ್ಯಾಟಿಂಗ್‌ ಕಡೆಗೂ ಗಮನ ಕೊಡ ಬೇಕಾಗಿರು ವುದು ಇಂದಿನ ಅಗತ್ಯ. ಈ ಹಿನ್ನೆಲೆ ಯಲ್ಲಿ ಬ್ಯಾಟಿಂಗ್‌ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)