ಗುರುವಾರ , ಜೂನ್ 17, 2021
22 °C

ರೂಟ್‌ ನಂ. 81ನ್ನು ಪುನಃ ಆರಂಭಿಸಿರಿ

ವಾ. ಮುರಳೀಧರ Updated:

ಅಕ್ಷರ ಗಾತ್ರ : | |

ಕೆಲವು ವರ್ಷಗಳ ಹಿಂದೆ ವಾರ್ಡ್ ಸಂಖ್ಯೆ 182 ಪದ್ಮನಾಭನಗರದಿಂದ ಶಿವಾಜಿನಗರಕ್ಕೆ ರೂಟ್‌ ನಂ. 81 ರಲ್ಲಿ ಪುಷ್ಪಕ್‌ ಬಸ್ಸೊಂದು ಸಂಚರಿಸುತ್ತಿತ್ತು. ಅದು ಅತ್ಯಂತ ಉಪಯುಕ್ತವೂ ಆಗಿತ್ತು. ಕೆ.ಆರ್‌. ರಸ್ತೆ, ಜೆ.ಸಿ. ರಸ್ತೆ, ಊರ್ವಶಿ ಟಾಕೀಸ್‌, ಶಾಂತಿನಗರ ಹಾಗೂ ರಿಚ್ಮಂಡ್‌ ಸರ್ಕಲ್‌ ಮಾರ್ಗವಾಗಿ ಅತಿ ಶೀಘ್ರವಾಗಿ ಶಿವಾಜಿನಗರ ಸೇರುತ್ತಿದ್ದ ರೂಟ್‌ ನಂ. 81ರ ಬಸ್ಸು ಇತ್ತೀಚೆಗೆ ನಿಂತುಹೋಗಿರುತ್ತದೆ.ಈಗ ಪದ್ಮನಾಭನಗರದಿಂದ 13ಬಿ ಹಾಗೂ 182 ಸಂಖ್ಯೆ ಬಸ್ಸುಗಳು ಶಿವಾಜಿನಗರಕ್ಕೆ ಇವೆ ಎನ್ನಲಾದರೂ ಕಛೇರಿ ಸಮಯಕ್ಕೆ ಅವು ಕಾಣಿಸುತ್ತಿಲ್ಲ. ಬನಶಂಕರಿ ಹಾಗೂ ಜಯನಗರಗಳನ್ನು ಸುತ್ತಿ ಅವು ಶಿವಾಜಿನಗರ ಸೇರಲು ಕನಿಷ್ಟ ಒಂದೂವರೆ ಗಂಟೆ ಬೇಕಾಗುತ್ತದೆ.ಈಗ ರಿಚ್ಮಂಡ್‌, ಶಾಂತಿನಗರ, ಶಿವಾಜಿನಗರದ ಕಡೆ ಹೋಗುವ ಪ್ರಯಾಣಿಕರು ಹಾಗೂ ಉದ್ಯೋಗಿಗಳು ಒಂದೇ ಮಾರ್ಕೆಟ್‌ ಅಥವಾ ಟೌನ್‌ಹಾಲ್‌ನಲ್ಲಿ ಇಳಿದು ಬೇರೆ ಬಸ್ಸು ಹಿಡಿಯಬೇಕಾಗಿದೆ. ಅಲ್ಲದೆ ಈ ಮಾರ್ಗದಲ್ಲಿ ವೃದ್ಧರೂ, ಅಂಗವಿಕಲರೂ ಹಾಗೂ ರೋಗಿಗಳೂ ದಿನನಿತ್ಯ ಸಂಚರಿಸುತ್ತ ತೊಂದರೆ ಅನುಭವಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಹಿಂದೆ ಇದ್ದಂತೆ  ರೂಟ್‌ ನಂ. 81ನ್ನು ಬೆಳಿಗ್ಗೆ 9.30ಕ್ಕೆ ಪದ್ಮನಾಭನಗರ ರೂಟ್‌ ನಂ. 15ಎ ನಿಲ್ದಾಣದಿಂದ ಶಿವಾಜಿನಗರಕ್ಕೆ ಪುನಃ ಆರಂಭಿಸಬೇಕೆಂದು ಪ್ರಾರ್ಥಿಸುತ್ತೇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.