ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆಯು, ಅಮೆರಿಕದ ಕರೆನ್ಸಿ ಡಾಲರ್ ಎದುರು ಸಾರ್ವಕಾಲಿಕ ದಾಖಲೆ ಕುಸಿತ ಕಂಡಿರುವುದು ಕಳವಳಕಾರಿ ಆರ್ಥಿಕ ವಿದ್ಯಮಾನವಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಡಾಲರ್ವೊಂದಕ್ಕೆ ರೂಪಾಯಿ ವಿನಿಮಯ ದರವು 44 ರಿಂದ 58.98ರವರೆಗೆ ಕುಸಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸಾಲಪತ್ರಗಳನ್ನು (ಷೇರು) ಗರಿಷ್ಠ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದೇ ಸದ್ಯದ ಬಿಕ್ಕಟ್ಟಿಗೆ ಪ್ರಮುಖ ಕಾರಣ. ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಕರೆನ್ಸಿ ಎದುರು ಡಾಲರ್ ಮೌಲ್ಯ ಹೆಚ್ಚಳಗೊಳ್ಳುತ್ತಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್, ಆರ್ಥಿಕ ಉತ್ತೇಜನ ಕ್ರಮಗಳನ್ನು ಕೈಬಿಡುವ ಇಂಗಿತ ವ್ಯಕ್ತಪಡಿಸಿರುವುದರಿಂದ ವಿದೇಶಗಳಲ್ಲಿನ ಹೂಡಿಕೆದಾರರೂ ಡಾಲರ್ ಖರೀದಿಗೆ ಮುಗಿಬಿದ್ದಿದ್ದಾರೆ. ಹೂಡಿಕೆದಾರರ ಪಾಲಿಗೆ ಡಾಲರ್, ಈಗ ಮತ್ತೆ `ಸುರಕ್ಷಿತ ಸ್ವರ್ಗ'ವಾಗಿ ಪರಿಣಮಿಸಿದೆ. ಡಾಲರ್ನ ಪೂರೈಕೆಗಿಂತ ಬೇಡಿಕೆ ಹೆಚ್ಚಿರುವುದು ರೂಪಾಯಿ ಅಪಮೌಲ್ಯಗೊಳ್ಳಲು ಕಾರಣವಾಗಿದೆ. ರೂಪಾಯಿ ಮೌಲ್ಯ ಕುಸಿತದಿಂದ ಸರ್ಕಾರದ ಸಾಲ ಮರುಪಾವತಿ ಸಾಮರ್ಥ್ಯ ಕಡಿಮೆಯಾಗಲಿದೆ. ಉದ್ದಿಮೆ ಸಂಸ್ಥೆಗಳ ಪಾಲಿಗೆ ಆಮದು ಸರಕು ಮತ್ತು ಸಾಲಗಳೂ ತುಟ್ಟಿಯಾಗಲಿವೆ. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ವಿದೇಶ ಪ್ರವಾಸ ದುಬಾರಿಯಾಗಿ ಪರಿಣಮಿಸಲಿದೆ. ಸರಕು, ಸೇವೆಗಳ ಆಮದು, ರಫ್ತಿಗಿಂತ ಹೆಚ್ಚಾಗಿ ದೇಶದ ಚಾಲ್ತಿ ಖಾತೆ ಕೊರತೆ ಇನ್ನಷ್ಟು ಹೆಚ್ಚಲಿದೆ. ಈ ಕೊರತೆ ತುಂಬಿಕೊಳ್ಳಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಹೆಚ್ಚಾಗಿ ನೆಚ್ಚಿಕೊಂಡಿರುವುದೂ ಬಿಕ್ಕಟ್ಟಿನ ಮೂಲವಾಗಿದೆ. ಈ ಇಕ್ಕಟ್ಟಿನ ಪರಿಸ್ಥಿತಿ ದೂರ ಮಾಡಲು ಸರ್ಕಾರ ಡಾಲರ್ ಪೂರೈಕೆಯ ಅಡೆತಡೆಗಳನ್ನು ತುರ್ತಾಗಿ ದೂರ ಮಾಡಬೇಕಾಗಿದೆ.

ಏಷ್ಯಾದ ಮೂರನೆ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿರುವ ರಾಷ್ಟ್ರದಲ್ಲಿ, 2003ರಿಂದೀಚೆಗೆ ಕುಂಠಿತ ರೀತಿಯಲ್ಲಿಯೇ ಸಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಈ ಬೆಳವಣಿಗೆಯು ಇನ್ನಷ್ಟು ಕಂಟಕವಾಗಿ ಪರಿಣಮಿಸಲಿದೆ. ಸವೆಯುತ್ತಿರುವ ರೂಪಾಯಿ ಮೌಲ್ಯ ತಡೆಯಲು, ವಿತ್ತೀಯ ಕೊರತೆ ತಗ್ಗಿಸಲು ಇನ್ನಷ್ಟು ಕಠಿಣ ಕ್ರಮ, ಚಿನ್ನದ ಆಮದಿಗೆ ಕಡಿವಾಣ ಹಾಕುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ.

ಆಮದು ತುಟ್ಟಿಯಾಗುವುದರಿಂದ ಹಣದುಬ್ಬರವೂ ಏರಿಕೆಯಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಧ್ಯಂತರ ತ್ರೈಮಾಸಿಕ ಪರಾಮರ್ಶೆಯಲ್ಲಿ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆಗಳು ದೂರವಾಗಿರುವುದು ತಕ್ಷಣ ದುಷ್ಪರಿಣಾಮ ಬೀರಲಿದೆ. ದುರ್ಬಲ ರೂಪಾಯಿ, ದೇಶಿ ಅರ್ಥ ವ್ಯವಸ್ಥೆ ಮೇಲೆ ಹಲವಾರು ಬಗೆಯಲ್ಲಿ ಪರಿಣಾಮ ಬೀರಲಿದೆ. ಒಂದೆಡೆ ಹಣದುಬ್ಬರ ಏರಲಿದ್ದರೆ, ಇನ್ನೊಂದೆಡೆ ಸಾಗರೋತ್ತರ ಸಾಲಗಳ ಮರುಪಾವತಿ ಹೊರೆಯಾಗಿ ಪರಿಣಮಿಸಲಿದೆ. ಈ ಪ್ರತಿಕೂಲತೆಗಳ ಎದುರು, ರಫ್ತಿನಿಂದ ದೊರೆಯುವ ಲಾಭ ಗೌಣವಾಗಲಿದೆ. ಸರ್ಕಾರ ಕೈಗೊಂಡ ಕೆಲ ಕ್ರಮಗಳಿಂದ ರೂಪಾಯಿ ಬೆಲೆ ಕೆಲ ಮಟ್ಟಿಗೆ ಚೇತರಿಸಿಕೊಂಡಿದ್ದರೂ, ಈ ಕ್ರಮಗಳು ಸಾಲುವುದಿಲ್ಲ. ಕೇಂದ್ರ ಸರ್ಕಾರ, ಆರ್ಬಿಐ ಮತ್ತು ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ರೂಪಾಯಿ ಮೌಲ್ಯ ಕುಸಿತ ತಡೆಗೆ ಜಂಟಿಯಾಗಿ ಕ್ರಮ ಕೈಗೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.