ರೈತರಿಂದ ಈರುಳ್ಳಿ ಖರೀದಿ ಅಸಾಧ್ಯ

7

ರೈತರಿಂದ ಈರುಳ್ಳಿ ಖರೀದಿ ಅಸಾಧ್ಯ

Published:
Updated:

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆ. ಬೆಲೆ ಏರಿಕೆ ನಿಯಂತ್ರಿಸಲು ಉಳಿದ ಆಹಾರ ಪದಾರ್ಥಗಳಂತೆ ರೈತರಿಂದ ನೇರವಾಗಿ ಈರುಳ್ಳಿ ಖರೀದಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತು. ಅಲ್ಲದೆ, ಈರುಳ್ಳಿ  ರಫ್ತು ನಿಷೇಧ  ಹಿಂದಕ್ಕೆ ಪಡೆದ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಂಡಿತು.ಈರುಳ್ಳಿ ಮತ್ತಿತರ ತರಕಾರಿ ಕೊಳೆಯುವ ಪದಾರ್ಥ. ಬೆಲೆ ನಿಯಂತ್ರಿಸಲು ಇದನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ಕೆಲವು ಇತಿಮಿತಿಗಳಿವೆ ಎಂದು ಆಹಾರ ಖಾತೆ ಸಚಿವ ಶರದ್ ಪವಾರ್ ಲೋಕಸಭೆಗೆ ಮಂಗಳವಾರ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಡಾ.ರಘುವಂಶ ಪ್ರಸಾದ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಪವಾರ್, ಬೆಲೆ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ವಿವರಿಸಿದರು.ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಹಾಗೂ ರಾಜಸ್ತಾನಗಳಲ್ಲಿ ಈರುಳ್ಳಿ ಬೆಳೆ ಹಾಳಾಯಿತು. ಇದು  ಬೆಲೆ ಏರಲು ಕಾರಣವಾಯಿತು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry