ರಾಮನಗರ: ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿರುವ ಬಜೆಟ್ ರೈತ, ಕಾರ್ಮಿಕ ಹಾಗೂ ಜನ ಸಾಮಾನ್ಯರ ವಿರೋಧಿ ಎಂದು ರಾಜ್ಯ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಟೀಕಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಶ್ರೀಮಂತರ ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ ಎಂದು ದೂರಿದರು.

ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ 31ಕ್ಕೆ ಏರಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಇದರಿಂದ ರಾಜ್ಯ ಮತ್ತು ದೇಶದಲ್ಲಿ ರೇಷ್ಮೆ ಕೃಷಿಕರ ಸ್ಥಿತಿ ಚಿಂತಾಜನಕವಾಗಲಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಕೇಂದ್ರದ ಗಮನ ಸೆಳೆಯಲು ಏಪ್ರಿಲ್ನಲ್ಲಿ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ರೂಪಿಸಲಾಗುವುದು. ಈ ಸಂಬಂಧ ಇದೇ 26ರಂದು ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿದರವನ್ನು ಶೇ 9.5ರಿಂದ ಶೇ 8.25ಕ್ಕೆ ಇಳಿಸಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಅವರು ಕಿಡಿಕಾರಿದರು. ಸಂಘದ ಜಿಲ್ಲಾ ಸಂಚಾಲಕ ಎಂ.ಶ್ರೀನಿವಾಸ್, ರಾಜ್ಯ ಸಮಿತಿ ಸದಸ್ಯೆ ವನಜಾ ಉಪಸ್ಥಿತರಿದ್ದರು.

ನಿರಾಶಾದಾಯಕ: ಕೃಷಿ ಕ್ಷೇತ್ರಕ್ಕೆ ಶೇ.18 ರಷ್ಟು ಅನುದಾನ ಹೆಚ್ಚಿಸಲಾಗಿದೆ. ದೇಶದ ಅನ್ನದಾತರಾದ ರೈತರಿಗೆ ಇದರಿಂದ ಪ್ರಯೋಜನ ಸಿಗುತ್ತದೆ. ಆದರೂ ದೇಶದಲ್ಲಿ ಶೇ.55 ರಷ್ಟಿರುವ ಕೃಷಿಕ ಸಮೂದಾಯಕ್ಕೆ ಈ ಅನುದಾನ ಕಡಿಮೆಯೆ. ಅದನ್ನು ಶೇ.50ಕ್ಕೆ ಅಧಿಕಗೊಳಿಸಿದ್ದರೆ ಒಳ್ಳೆಯದಾಗುತ್ತಿತ್ತು.

ದೇಶದ ರಕ್ಷಣೆಗೆ ರೂ 1.95 ಲಕ್ಷ ಕೋಟಿ ಮೀಸಲಿಟ್ಟಿರುವ ಸರ್ಕಾರ ಅನ್ನದಾತರ ಅಭ್ಯುದಯಕ್ಕೆ ಆದ್ಯತೆ ನೀಡಿಲ್ಲ. ಅನ್ನದಾತರನ್ನು ದೇಶದ ಆಹಾರ ಭದ್ರತಾ ಪಡೆ ಎಂದು ಪರಿಗಣಿಸಿ ಮಾಸಿಕ ಗೌರವ ಧನ ನೀಡುವ ಯೋಜನೆ ರೂಪಿಸಬೇಕಿತ್ತು. ವ್ಯವಸಾಯದಿಂದ ವಿಮುಖರಾಗುತ್ತಿರುವ ರೈತರು ಮರಳಿ ಕೃಷಿಗೆ ಬರುತ್ತಿದ್ದರು ಎಂದು ಅರ್ಥಶಾಸ್ತ್ರ ಉಪನ್ಯಾಸಕ ಜಿ.ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಕ್ಕೆ 50 ಕೋಟಿ ಅನುದಾನ. ಗುಲ್ಬರ್ಗದಲ್ಲಿ ಪಾಳಿ ಭಾಷೆ ಸಂಶೋಧನಾ ಕೇಂದ್ರ ಸ್ಥಾಪನೆಗೆ 10 ಕೋಟಿ ಹಣ ಬಿಡುಗಡೆಗೆ ಸಮ್ಮತಿಸಿರುವುದು ರಾಜ್ಯಕ್ಕೆ ನೀಡಿರುವ ಎರಡು ಅದ್ಬುತ ಕೊಡುಗೆಗಳಾಗಿವೆ. ಶಿಕ್ಷಣ, ಆರೋಗ್ಯ, ಸಿನಿಮಾ ಇನ್ನಿತರೆ 17 ಪ್ರಮುಖ ಕ್ಷೇತ್ರಗಳಿಗೆ ಸೇವಾ ತೆರಿಗೆಯಿಂದ ವಿನಾಯಿತಿ ನೀಡಿರುವುದು ಅತ್ಯುತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದಾಯ ಮಿತಿ ಇನ್ನಷ್ಟು ಹೆಚ್ಚಿಸಬೇಕಿತ್ತು: ಆದಾಯ ತೆರಿಗೆ ಮಿತಿಯನ್ನು ರೂ 1.80 ಲಕ್ಷದಿಂದ ರೂ 2 ಲಕ್ಷಕ್ಕೆ ಏರಿಸಲಾಗಿದೆ. ಆದರೆ ಇದನ್ನು ಮೂರು ಲಕ್ಷಕ್ಕೆ ಏರಿಸಿದ್ದರೆ ದೇಶದ ಬಹುತೇಕ ನಾಗರಿಕರಿಗೆ ಸಂತಸವಾಗುತ್ತಿತ್ತು. ಸೇವಾ ತೆರಿಗೆ ಮತ್ತು ಅಬಕಾರಿ ತೆರಿಗೆಯನ್ನು ಹೆಚ್ಚಿಸಿರುವುದು ಸಾಮಾನ್ಯ ನಾಗರಿಕರ ಮೇಲೆ ಬರೆ ಎಳೆದಂತಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಶಿವನಂಜಯ್ಯ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.