ಮಂಗಳವಾರ, ಮೇ 17, 2022
23 °C

ರೈಲ್ವೆ ಬಜೆಟ್: ಪ್ರಯಾಣದರಲ್ಲಿ ಹೆಚ್ಚಳವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ, (ಪಿಟಿಐ): ಪ್ರಸಕ್ತ 2011-12ರ ರೈಲ್ವೆ ಬಜೆಟ್ ನಲ್ಲಿ  ರೈಲು  ಪ್ರಯಾಣಿಕರ ಟಿಕೇಟ್ ದರ ಏರಿಸಿಲ್ಲ, ಸರಕು ಸಾಗಣೆಯ ವೆಚ್ಚದಲ್ಲೂ ಹೆಚ್ಚಳವಾಗಿಲ್ಲ. ಆದರೆ ಮುಂಗಡ ಬುಕ್ಕಿಂಗ್ ನಲ್ಲಿ ಸ್ವಲ್ಪ ಹೆಚ್ಚಳ ಮಾಡಲಾಗಿದೆ, ಹವಾನಿಯಂತ್ರಿತ ಬೋಗಿಗಳ ಪ್ರಯಾಣದ ಮುಂಗಡ ಟಿಕೇಟ್ ಮೇಲೆ 10 ರೂಪಾಯಿ, ಮುಂಗಡ ಸ್ಲೀಪರ್ ಟಿಕೇಟ್ ಗೆ 5 ರೂ ಹೆಚ್ಚಿಸಲಾಗಿದೆ.

 

ಹೊಸ 56 ಎಕ್ಷಪ್ರೆಸ್ ರೈಲು ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಹೊಸ ರೈಲುಗಳು: ಈ ಸಾಲಿನ ರೈಲ್ವೆ ಬಜೆಟ್ ನಲ್ಲಿ 9 ದುರಂತೊ,  ಮುಂಬೈಯಲ್ಲಿ 47 ಹೆಚ್ಚುವರಿ ಉಪನಗರ ರೈಲು ಆರಂಭಿಸಲು, ಕೋಲ್ಕತ್ತದಲ್ಲಿ  50 ಹೊಸ ಉಪನಗರ ರೈಲುಗಳನ್ನು ಮತ್ತು 

ಇದರಲ್ಲಿ ಸ್ವಾಮಿ ವಿವೇಕಾನಂದರು ಮತ್ತು ರವೀಂದ್ರನಾಥ್ ಠಾಗೋರ್ ರ ಸ್ಮರಣೆಯಲ್ಲಿ ತಲಾ ನಾಲ್ಕು ನಾಲ್ಕು ರೈಲುಗಳನ್ನು ಆರಂಭಿಸಲಾಗುತ್ತಿದೆ. ಆ ರೈಲುಗಳಿಗೆ ವಿವೇಕ್ ಎಕ್ಸಪ್ರೆಸ್ ಮತ್ತು  ರವಿಗುರು ಎಕ್ಸಪ್ರೆಸ್ ಎಂದು ಹೆಸರಿಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.