ನವದೆಹಲಿ: ರೈಲ್ವೆ ಯಾತ್ರಿಕರು ಸ್ಲೀಪರ್ ದರ್ಜೆಯಲ್ಲಿ ಗುರುತಿನ ಪತ್ರದೊಂದಿಗೆ ಪ್ರಯಾಣಿಸುವುದನ್ನು ಶೀಘ್ರದಲ್ಲೇ ಕಡ್ಡಾಯಗೊಳಿಸಲಾಗುವುದು.

ದಲ್ಲಾಳಿಗಳು ಮತ್ತು ಇತರರಿಗೆ ಟಿಕೆಟ್ ಮಾರಾಟ ಮಾಡುವುದು ಮತ್ತು ಹಸ್ತಾಂತರಿಸುವುದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಸ್ಲೀಪರ್ ದರ್ಜೆಯಲ್ಲಿ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸುವವರು ಯಾವುದಾದರೂ ಒಂದು ಗುರುತಿನ ಕಾರ್ಡ್ನೊಂದಿಗೆ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಶೀಘ್ರವೇ ಪ್ರಕಟಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹವಾನಿಯಂತ್ರಣ ವ್ಯವಸ್ಥೆ ಇರುವ ದರ್ಜೆಗೆ, ತತ್ಕಾಲ್ ಮತ್ತು ಇ-ಟಿಕೆಟ್ ಮೂಲಕ ಟಿಕೆಟ್ ಕಾಯ್ದಿರಿಸುವವರು ಕೂಡ ಕಡ್ಡಾಯವಾಗಿ ಗುರುತಿನ ಕಾರ್ಡ್ನೊಂದಿಗೆ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಿ ರೈಲ್ವೆಯು ಫೆಬ್ರುವರಿಯಲ್ಲಿ ಆದೇಶ ಹೊರಡಿಸಿತ್ತು.

ಈ ಬಗ್ಗೆ ಶೀಘ್ರವೇ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗುವುದು. ಸಂದೇಶವನ್ನು ರೈಲ್ವೆ ಟಿಕೆಟ್ನ ಹಿಂಬದಿಯಲ್ಲಿ ಮುದ್ರಿಸಿ ಜನರಲ್ಲಿ ತಿಳಿವಳಿಕೆ ಮೂಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಮತದಾರರ ಗುರುತಿನ ಪತ್ರ, ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಆಧಾರ್ ಕಾರ್ಡ್, ಬ್ಯಾಂಕ್ ಅಥವಾ ಕೇಂದ್ರ, ರಾಜ್ಯ ಸರ್ಕಾರ ನೀಡಿರುವ ಕ್ರಮ ಸಂಖ್ಯೆ ಹೊಂದಿರುವ ಗುರುತಿನ ಪತ್ರ, ಮಾನ್ಯತೆ ಪಡೆದ ಶಾಲಾ ಕಾಲೇಜುಗಳು ನೀಡುವ ಗುರುತು ಪತ್ರ, ಕ್ರೆಡಿಟ್ ಕಾರ್ಡ್ ಸೇರಿದಂತೆ ಯಾವುದಾದರೂ ಒಂದು ಗುರುತು ಪತ್ರದೊಂದಿಗೆ ಸಂಚರಿಸಬಹುದು. ಗುರುತಿನ ಪತ್ರ ಇರದೇ ಸಂಚರಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.