ಲಂಡನ್ (ಎಪಿ): ಆತಿಥೇಯ ಇಂಗ್ಲೆಂಡ್ನ ಹೆಲೆನ್ ಗ್ಲೊವರ್ ಹಾಗೂ ಹೀತರ್ ಸ್ಟನಿಂಗ್ಸ್ ಜೋಡಿಯು ಒಲಿಂಪಿಕ್ ಕೂಟದ ರೋಯಿಂಗ್ ಸ್ಪರ್ಧೆಯ ಮಹಿಳೆಯರ `ಪೇರ್~ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದರು.

ರೋಯಿಂಗ್ನಲ್ಲಿ ಪದಕದ ನಿರೀಕ್ಷೆಯೊಂದಿಗೆ ಕಾಯ್ದಿದ್ದ ಇಂಗ್ಲೆಂಡ್ಗೆ ಗುರುವಾರ ನಿರಾಸೆಯಾಗಲಿಲ್ಲ. ಪದಕ ಪ್ರದಾನ ಕಾರ್ಯಕ್ರಮದಲ್ಲಿ `ಗಾಡ್ ಸೇವ್ ದ ಕ್ವೀನ್~ ಗೀತೆ ಮೊಳಗುವಂತಾಯಿತು.

ಅಮೆರಿಕಾ ಮಹಿಳೆಯರಿಗೆ `ಏಯ್ಟ~ ಚಿನ್ನ: ಮಹಿಳೆಯರ `ಏಯ್ಟ~ ಸ್ಪರ್ಧೆಯಲ್ಲಿ ಅಮೆರಿಕಾದವರು ಮತ್ತೊಮ್ಮೆ ಪ್ರಾಬಲ್ಯ ಮೆರೆದಿದ್ದಾರೆ.

ಬೀಜಿಂಗ್ನಲ್ಲಿ ಮಿಂಚಿದ್ದ ಅಮೆರಿಕಾದ ತಂಡವು ಪ್ರಬಲ ಪೈಪೋಟಿ ನೀಡಿದ ಕೆನಡಾವನ್ನು ಹಿಂದೆ ಹಾಕುವಲ್ಲಿ ಯಶಸ್ವಿಯಾಯಿತು. ಕೆನಡಾ ಹಾಗೂ ಹಾಲೆಂಡ್ನವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.

ಎರಿನೊ ಕಾಫರೊ, ಸುಸಾನ್ನಾ ಫ್ರಾನ್ಸಿಯಾ, ಇಥರ್ ಲಾಫ್ರೆನ್, ರಿಜೆಲ್ ಟೇಲರ್, ಮೆಗಾನ್ ಮಸ್ನಿಕಿ, ಲಾಗನ್ ಎಲೆನೊರ್, ಕರೊಲಿನ್ ಲಿಂಡ್ ಹಾಗೂ ಕ್ಯಾರಿನ್ ಡೇವಿಸ್ ಅವರನ್ನೊಳಗೊಂಡ ಅಮೆರಿಕಾ ತಂಡವು 6 ನಿಮಿಷ 10.59 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ಫೋರ್ನಲ್ಲಿ ದಕ್ಷಿಣ ಆಫ್ರಿಕಾ ಮಿಂಚು: ಪುರುಷರ ಲೈಟ್ವೇಟ್ ಫೋರ್ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದವರು ಚಿನ್ನದ ಹೊಳಪಿನಿಂದ ಹೊಳೆದಿದ್ದಾರೆ. ಜೇಮ್ಸ ಥಾಮ್ಸನ್, ಮ್ಯಾಥ್ಯೂ ಬ್ರಿಟೈನ್, ಜಾನ್ ಸ್ಮಿತ್ ಹಾಗೂ ಸಿಜ್ವೆ ನಲೊವ್ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾ ತಂಡವು 6 ನಿಮಿಷ 02.84 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಇಂಗ್ಲೆಂಡ್ ಹಾಗೂ ಡೆನ್ಮಾರ್ಕ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.