ಕಾರ್ಗಲ್ (ಶಿವಮೊಗ್ಗ ಜಿಲ್ಲೆ): ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ, 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ 1,816.5 ಅಡಿ ನೀರು ಸಂಗ್ರಹವಾಗಿದ್ದು, ಗುರುವಾರ 10,000 ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು.

ಜಲಾಶಯದ ಮೂರು ರೇಡಿಯಲ್ ಗೇಟ್ಗಳನ್ನು ಎರಡು ಮುಕ್ಕಾಲು ಅಡಿ ಎತ್ತರಕ್ಕೆ ಎತ್ತಿ ನೀರು ಬಿಡಲಾಗಿದೆ. ಒಳಹರಿವನ್ನು ಅವಲಂಬಿಸಿ ಹೆಚ್ಚಿನ ಗೇಟುಗಳನ್ನು ತೆರೆದು ನೀರು ಹೊರಬಿಡಲಾಗುತ್ತದೆ. ಅಣೆಕಟ್ಟೆ ತುಂಬಲು ಇನ್ನು ಮೂರು ಅಡಿ ಬಾಕಿ ಇದ್ದರೂ ಸುಕ್ಷತಾ ದೃಷ್ಟಿಯಿಂದ ಈಗಲೇ ಬಿಡಲಾಗಿದೆ ಎಂದು ಕೆ.ಪಿ.ಸಿ ಕಾಮಗಾರಿ ವಿಭಾಗದ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದ್ದಾರೆ.

ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಬೆಳಿಗ್ಗೆ ದಿಢೀರನೆ 90,000 ಕ್ಯೂಸೆಕ್ ನೀರು ಹರಿದು ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದ ವ್ಯಾಪ್ತಿ ಎರಡು ಸಾವಿರ ಚದರ ಕಿ.ಮೀ. ಇದೆ. ಅಣೆಕಟ್ಟೆಯಲ್ಲಿ ಈಗ ಇನ್ನೂರು ಚದರ ಕಿ.ಮೀ. ಭೌಗೋಳಿಕ ವ್ಯಾಪ್ತಿಯಲ್ಲಿ 156 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ಇದರಿಂದ ಪ್ರತಿ ದಿನ 7 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಲಿಂಗನಮಕ್ಕಿ ಅಣೆಕಟ್ಟೆಯಿಂದ ಹೊರಬರುತ್ತಿರುವ ನೀರು ಭಾರಿ ಪ್ರವಾಹವಾಗಿ ಕಾರ್ಗಲ್ ಚೈನಾಗೇಟ್ ಮೂಲಕ ಹರಿದು ಜೋಗ ಜಲಪಾತದಲ್ಲಿ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಈ ಮಳೆಗಾಲದಲ್ಲಿ ಇದುವರೆಗೆ ಗಾಂಭೀರ್ಯದಿಂದ ಕಾಣಿಸಿಕೊಂಡಿದ್ದ ಜಲಪಾತದಲ್ಲಿ ಈಗ ರುದ್ರ ರಮಣೀಯತೆ ಸೃಷ್ಟಿಯಾಗಿದೆ.

ರಾಜ, ರೋರರ್, ರಾಕೆಟ್, ರಾಣಿ ಜಲಪಾತಗಳು ತಮ್ಮ ಸೌಂದರ್ಯವನ್ನು ಬಹು ಅಪರೂಪದ ದೃಶ್ಯಕೋನಗಳಿಂದ ಪ್ರವಾಸಿಗರಿಗೆ ಗುರುವಾರ ತೆರೆದು ತೋರಿಸಿದವು. ನೀರು ಧುಮ್ಮಿಕ್ಕುತ್ತಿರುವುದರಿಂದ ಜಲಪಾತದ ಕೆಳಭಾಗಕ್ಕೆ ಪ್ರವಾಸಿಗರ ಪ್ರವೇಶವನ್ನು ಗುರುವಾರ ನಿಷೇಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.