ಶುಕ್ರವಾರ, ಏಪ್ರಿಲ್ 16, 2021
30 °C

ಲಿಬಿಯಾದಲ್ಲಿ ಘರ್ಷಣೆ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿಪೋಲಿ (ಎಎಫ್‌ಪಿ): ಲಿಬಿಯಾದಲ್ಲಿ ಮುಅಮ್ಮರ್ ಗಡಾಫಿ ಬೆಂಬಲಿಗರು ಮತ್ತು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಮಧ್ಯಂತರ ಮಂಡಳಿ (ಎನ್‌ಟಿಸಿ) ಸರ್ಕಾರದ ನಿಷ್ಠರ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.



ಈ ಘರ್ಷಣೆಯಲ್ಲಿ ಇಬ್ಬರು ಗಡಾಫಿ ಬೆಂಬಲಿಗರು ಮತ್ತು  ಎನ್‌ಟಿಸಿ ಭದ್ರತಾ ಸಿಬ್ಬಂದಿಯೊಬ್ಬ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಎನ್‌ಟಿಸಿ ಭದ್ರತಾ ಸಮಿತಿ ಉಪಾಧ್ಯಕ್ಷ ಅಬ್ದುಲ್‌ರಜಾಕ್ ಅಲ್- ಅರಾದಿ ತಿಳಿಸಿದ್ದಾರೆ.



`ಗಡಾಫಿಯ 50ಕ್ಕೂ ಹೆಚ್ಚು ಬೆಂಬಲಿಗರು ಈ ಹಿಂಸಾಚಾರ ನಡೆಸಿದ್ದಾರೆ. 27 ಮಂದಿಯನ್ನು ಬಂಧಿಸಲಾಗಿದ್ದು, ಇವರಲ್ಲಿ ನಾಲ್ವರು ಆಫ್ರಿಕಾದವರು. ಗಡಾಫಿ ಬೆಂಬಲಿಗರು ಹಣದಾಸೆ ತೋರಿಸಿ ಆಫ್ರಿಕಾದಿಂದ ಜನರನ್ನು ಕರೆತರುತ್ತಿದ್ದಾರೆ~ ಎಂದು ಅರಾದಿ ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.