ಬೆಂಗಳೂರು: ಬೆಂಗಳೂರು ದಕ್ಷಿಣ ವಲಯ–2 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) 25 ವಲಸೆ ಮಕ್ಕಳ ಶಾಲಾ ದಾಖಲಾತಿ ಕಾರ್ಯಕ್ರಮ ಶನಿವಾರ ನಡೆಯಿತು.

ಈ ಮಕ್ಕಳನ್ನು ಆರ್ಪಿಸಿ ಲೇಔಟ್ನ ದಿ ನ್ಯೂ ಕೇಂಬ್ರೀಡ್ಜ್ ಶಾಲೆ, ಹೋಲಿ ಏಂಜೆಲ್ಸ್ ಶಾಲೆ, ಭಾರತಿ ವಿದ್ಯಾಲಯ, ವಿಜಯನಗರದ ಆರ್.ಎನ್.ಎಸ್, ಆದಿಚುಂಚನಗಿರಿ ಆಂಗ್ಲಶಾಲೆಗಳಿಗೆ ಎಲ್ಕೆಜಿ ಹಾಗೂ ಒಂದನೇ ತರಗತಿಗೆ ಸೇರ್ಪಡೆ ಮಾಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಮ್ಮ ಡಿ. ಮಾತನಾಡಿ, ‘ವಲಸೆ ಬಂದ, ಅವಕಾಶವಂಚಿತ, ದುರ್ಬಲ ವರ್ಗದ, ಅನಾಥ ಹಾಗೂ ಬೀದಿ ಮಕ್ಕಳಿಗೆ ಶಿಕ್ಷಣ ನೀಡುವುದು ಆರ್ಟಿಇ ಆಶಯ.

ಕಳೆದ ವರ್ಷ ಸಿಗ್ನಲ್ನಲ್ಲಿ ಭಿಕ್ಷೆ ಬೇಡುತ್ತಿದ್ದ, ರಾತ್ರಿ 11 ಗಂಟೆ ವರೆಗೂ ಕಲ್ಯಾಣ ಮಂಟಪದ ಬಳಿ ಹಾಗೂ ಊರೂರು ತಿರುಗಿ ಜಾತ್ರೆಗಳಲ್ಲಿ ಬಲೂನು ಮಾರುತ್ತಿದ್ದ ಮಕ್ಕಳು ಇಂದು ಆರ್ಟಿಇ ಅಡಿಯಲ್ಲಿ ಪ್ರತಿಷ್ಠಿತ ಶಾಲೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.