ಹಿರೇಕೆರೂರ: ಪಟ್ಟಣದ ಪರಿಶಿಷ್ಟ ವರ್ಗದ ಹೆಣ್ಣು ಮಕ್ಕಳ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ)ಯ ತಾಲ್ಲೂಕು ಘಟಕದ ಪದಾಧಿಕಾರಿಗಳು ವಸತಿ ನಿಲಯದ ಎದುರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿ ಅಧಿ ಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ರಮೇಶ ತೋರಣಗಟ್ಟಿ ಮಾತನಾಡಿ, ವಸತಿ ಶಾಲೆಯಲ್ಲಿ 6, 7 ಹಾಗೂ 8 ನೇ ತರಗತಿಯ 126 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಕಿರಿದಾದ ಬಾಡಿಗೆ ಕಟ್ಟಡದಲ್ಲಿ ಕೇವಲ 2 ಕೊಠಡಿಗಳಲ್ಲಿ ಎಲ್ಲರನ್ನು ಸೇರಿಸಲಾಗಿದೆ. ಊಟ-ವಸತಿ ಅದೇ ಕೊಠಡಿಗಳಲ್ಲಿ ಮಾಡುವ ಪರಿಣಾಮ ಕೊಳಚೆ ತುಂಬಿ ಅವ್ಯವಸ್ಥೆಯ ಆಗರವಾಗಿದೆ ಎಂದು ದೂರಿದರು.

ಕೊಠಡಿಗಳಲ್ಲಿ ಫ್ಯಾನುಗಳ ವ್ಯವಸ್ಥೆ ಇಲ್ಲ, ಊಟದ ವ್ಯವಸ್ಥೆ ಸರಿಯಾಗಿಲ್ಲ, ಕಳಪೆ ಗುಣಮಟ್ಟದ ಆಹಾರ ನೀಡುವ ಮೂಲಕ ವಂಚಿಸಲಾಗುತ್ತಿದೆ. ಸರಕಾರದ ನಿಯಮಾವಳಿ ಪ್ರಕಾರ ಒದಗಿಸಬೇಕಾದ ಯಾವುದೇ ಸವಲತ್ತುಗಳು ಇಲ್ಲಿ ಲಭ್ಯವಿಲ್ಲ, ವಸತಿ ಶಾಲೆಯ ಸುತ್ತ ಕೊಳಚೆ ತುಂಬಿದ್ದು, ರೋಗದ ತಾಣವಾಗಿ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಮಕ್ಕಳಿಗೆ ಕೇವಲ 3 ಶೌಚಾಲಯ, 4 ಸ್ನಾನದ ಗೃಹಗಳಿದ್ದು, ಅನೇಕ ವಿದ್ಯಾರ್ಥಿನಿಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಶಿಕ್ಷಣಕ್ಕೆ ಉತ್ತಮ ವಾತಾವರಣ ಇಲ್ಲದೇ ಇರುವುದರಿಂದ ಹಗಲು ಹೊತ್ತಿನಲ್ಲಿ ಸಮೀಪದ ಹೊಲಗಳ ಬದುಗಳಲ್ಲಿ ಮರದ ಕೆಳಗೆ ಕುಳಿತು ಅಭ್ಯಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿನಿಯರಾದ ದೀಪಾ ಬುಳ್ಳಣ್ಣನವರ, ವೀಣಾ ತಳವಾರ ಮೊದಲಾದವರು ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ತಿಳಿಸಿ, ವಿಜ್ಞಾನ ಹಾಗೂ ಇಂಗ್ಲಿಷ್ ಶಿಕ್ಷಕರು ಅವಸರದಲ್ಲಿ ಪಾಠಗಳನ್ನು ಮುಗಿಸಿ ತೆರಳಿದ್ದು, ಒಂದು ತಿಂಗಳಿಂದ ಶಾಲೆಗೆ ಬಂದಿಲ್ಲ ಎಂದು ಅವ್ಯವಸ್ಥೆಗಳ ಕುರಿತು ಹೇಳುತ್ತಲೇ ಕಣ್ಣೀರಿಟ್ಟರು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಇಸ್ಮಾಯಿಲ್ಸಾಬ್ ಶಿರಹಟ್ಟಿ, ವಸತಿ ನಿಲಯದ ಅವ್ಯವಸ್ಥೆಯನ್ನು ಕಂಡು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ, ಅವ್ಯವಸ್ಥೆಯನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಕಂದಾಯ ನಿರೀಕ್ಷಕ ಅರುಣಕುಮಾರ ಕಾರಗಿ ಜೊತೆಯಲ್ಲಿ ಇದ್ದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಯು.ರಾಘವೇಂದ್ರ, ಎಂ.ಎಂ.ಆನಂದ, ರಾಜು ದೊಡ್ಡಮನಿ, ಮಲ್ಲಿಕಾರ್ಜುನ ಅಬಲೂರ, ಭರಮಪ್ಪ ಹರಿಜನ, ಕಬೀರ್ ಹೊಸಳ್ಳಿ, ಕಾಂತೇಶ ಬಾಲಬಸವರ, ಮುಸೀಸ್ ರಿಕಾರ್ಟಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.