ಬುಧವಾರ, ಜೂನ್ 23, 2021
29 °C

ವಿದೇಶಿ ಸಂಕ್ಷಿಪ್ತ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಷ ರಫ್ ಮನೆಗೆ ನೋಟಿಸ್: ಸೂಚನೆ

ಇಸ್ಲಾಮಾಬಾದ್ (ಪಿಟಿಐ):
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣ ಕುರಿತಂತೆ ಪಾಕ್‌ನ ಮಾಜಿ ಅಧ್ಯಕ್ಷ  ಪರ್ವೇಜ್ ಮುಷರಫ್ ಅವರಿಗೆ ಮತ್ತೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂ ಕೋರ್ಟ್, ಅದನ್ನು ಅವರ ಮನೆಗೆ ಅಂಟಿಸುವಂತೆ ಸೋಮವಾರ ಸೂಚಿಸಿದೆ.ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ನ್ಯಾಯಮೂರ್ತಿಗಳ ಪೀಠವು ಈ ನಿರ್ದೇಶನ ನೀಡಿದೆ.

ಅಮೆರಿಕದಲ್ಲಿ ಯೋಗ ಚಾಂಪಿಯನ್‌ಶಿಪ್ನ್ಯೂಯಾರ್ಕ್(ಪಿಟಿಐ):   ವಿಶ್ವಸಂಸ್ಥೆಯ ಯೋಗ ಫೆಡರೇಶನ್ ಇಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯೋಗ ಚ್ಯಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಮಕ್ಕಳೂ ಸೇರಿದಂತೆ 32 ರಾಜ್ಯಗಳ 150 ಸ್ಪರ್ಧಿಗಳು ಭಾಗವಹಿಸಿದ್ದರು.

ಮೂರನೇ ಚಂದ್ರ ಯಾನ: ಚೀನಾ ಸಿದ್ಧತೆಬೀಜಿಂಗ್ (ಪಿಟಿಐ):  ಚಂದ್ರಗ್ರಹಕ್ಕೆ ಮೂರನೇ ಬಾರಿಗೆ ಯಾನ ಬೆಳಸಲು ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಸಿದ್ಧತೆ ನಡೆಸುತ್ತಿದ್ದು, ಹಿಂದಿನ ಎರಡು ಯಾನಕ್ಕಿಂತ ಇದು ಭಿನ್ನವಾಗಿರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಚಂದ್ರಗ್ರಹದಲ್ಲಿ ಸತತ ಮೂರು ತಿಂಗಳುಗಳ ಕಾಲ ವಾಸವಿದ್ದು ಅಧ್ಯಯನ ನಡೆಸಲು ಅನುಕೂಲವಾಗುವ ರೀತಿಯಲ್ಲಿ ನೂರು ಕೆ. ಜಿ. ತೂಕದ ಲೂನಾರ್ ರೋವರ್ ವಾಹನವನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಪಾಕ್: ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ

ಇಸ್ಲಾಮಾಬಾದ್ (ಪಿಟಿಐ):
ಪಾಕಿಸ್ತಾನ ಸೋಮವಾರ ಕಡಿಮೆ ದೂರದ, ಭೂಮಿಯಿಂದ ಭೂಮಿಗೆ ಚಿಮ್ಮುವ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ `ಹತಾಫ್-2~ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.

ಭಾರತವನ್ನು ಗುರಿಯಾಗಿಟ್ಟುಕೊಂಡು ತಯಾರಿಸಿರುವ ಈ ಕ್ಷಿಪಣಿ ಪಾಕ್‌ನ ಕ್ಷಿಪಣಿ ತಂತ್ರಜ್ಞಾನವನ್ನು ಮತ್ತಷ್ಟು ಸ್ಥಿರೀಕರಿಸಿದೆ.ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಐಸ್‌ಕ್ರೀಂ ಚಟವಾಗಬಹುದು!ಲಂಡನ್ (ಪಿಟಿಐ):  ಐಸ್‌ಕ್ರೀಂ ಪ್ರಿಯರೆ ಎಚ್ಚರ! ಬಾಯಿ ಚಪ್ಪರಿಸುತ್ತ ಐಸ್‌ಕ್ರೀಂ ತಿನ್ನುತ್ತಾ ತಿನ್ನುತ್ತಾ ನೀವು ಅದಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚು ಎಂದು ಹೊಸ ಸಂಶೋಧನೆಯಿಂದ ಗೊತ್ತಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.