ಸೋಮವಾರ, ಜನವರಿ 27, 2020
27 °C

ವಿಮಾನ ನಿಲ್ದಾಣದಲ್ಲಿ ಗುಂಡಿನ ಕಾಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಿಲಾ(ಎಎಫ್‌ಪಿ): ಮನಿಲಾ ಅಂತರರಾಷ್ಟ್ರೀಯ ವಿಮಾನ­ನಿಲ್ದಾಣದ ಪ್ರಯಾಣಿಕರ ಟರ್ಮಿನಲ್‌ ಹೊರಗೆ  ಶುಕ್ರವಾರ ನಡೆದ ದಿಢೀರ್‌ ದಾಳಿಯಲ್ಲಿ ದಕ್ಷಿಣ ಫಿಲಿಪ್ಪೀನ್‌್ಸ ಪಟ್ಟಣದ ಮೇಯರ್‌ ಮತ್ತು ಅವರ ಪತ್ನಿ ಸೇರಿ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

‘ಮಿಂದನಾವೊದ ದಕ್ಷಿಣ ಪ್ರಾಂತ್ಯ ದ ಲಬನ್‌ಗನ್‌ ಪಟ್ಟಣದ ಮೇಯರ್‌, ಅವರ ಕುಟುಂಬ­ದವರು ಹಾಗೂ ಅವರ ಭದ್ರತಾ ಸಿಬ್ಬಂದಿಯನ್ನು ಗುರಿ­ಯಾಗಿ­ಟ್ಟು­ಕೊಂಡು ಈ ದಾಳಿ ನಡೆಸ­ಲಾಗಿದೆ.  ಇದರ ಪರಿಣಾಮ ಮೇಯರ್‌ ಮತ್ತು ಅವರ ಪತ್ನಿ ಸ್ಥಳದಲ್ಲೇ ಮೃತ­ಪಟ್ಟಿದ್ದಾರೆ. ಅಲ್ಲದೇ, ಘಟನೆಯಲ್ಲಿ ಇತರೆ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿ­ದ್ದಾರೆ’ ಎಂದು ಮನಿಲಾ ವಿಮಾನ­ನಿಲ್ದಾಣದ ವ್ಯವಸ್ಥಾಪಕ ಏಂಜಲ್‌ ಹೊನ್ರಾಡೊ ತಿಳಿಸಿದ್ದಾರೆ.

ಮೃತ ಮೇಯರ್‌ ಅವರನ್ನು ಉಕೊಲ್‌ ತಲುಂಪಾ ಎಂದು ಗುರುತಿಸ­ಲಾಗಿದೆ.

ಪ್ರತಿಕ್ರಿಯಿಸಿ (+)