ಮಂಗಳವಾರ, ಮಾರ್ಚ್ 2, 2021
31 °C

ವಿಶ್ವ ಭೂಮಿ ದಿನಾಚರಣೆ:ಭೂಮಿ ರಕ್ಷಣೆ ಜಾಗೃತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಭೂಮಿ ದಿನಾಚರಣೆ:ಭೂಮಿ ರಕ್ಷಣೆ ಜಾಗೃತಿ ಅಭಿಯಾನ

ಬೆಂಗಳೂರು: ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ನಗರದ ವಿವಿಧೆಡೆ ಭಾನುವಾರ ಭೂಮಿ ರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮಗಳು ನಡೆದವು. ಪರಿಸರ ವೈಪರೀತ್ಯದ ಪರಿಣಾಮ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಣದಲ್ಲಿಡುವುದು ನಾಗರಿಕರ ಕರ್ತವ್ಯವೆಂದು ವಿವಿಧ ಪರಿಸರವಾದಿ ಸಂಘಟನೆಗಳು ಕರೆ ನೀಡಿದವು.ದಿ.ಗ್ರೀನ್ ಪಾತ್ ಇಕೋ ಫೌಂಡೇಷನ್ `ಈ ವರ್ಷ ಅವ್ವ ಕೊಟ್ಟ ಹಲಸಿನ ಫಲ ಆಹಾರಗಳೊಂದಿಗೆ ಆಕೆಯ ಗುಣಗಾನ~ ಎಂಬ ಶೀರ್ಷಿಕೆಯಡಿ ಹಲಸಿನ ಆಹಾರ ಮೇಳ ಮತ್ತು ಸಾವಯವ ಸಂತೆಯನ್ನು ಆಯೋಜಿಸಿತ್ತು.

 ಭಾರತೀಯ ಸಮಾಜ ಸೇವಾ ಟ್ರಸ್ಟ್ ನಗರದ ಅಖಿಲ ಕರ್ನಾಟಕ ಮಕ್ಕಳ ಕೂಟ ಸಭಾಂಗಣದಲ್ಲಿ ವಿಶ್ವಭೂಮಿ ದಿನಾಚರಣೆಯನ್ನು ಆಚರಿಸಿತು. ವಿವಿಧ ಶಾಲೆಯಿಂದ ಆಗಮಿಸಿದ್ದ ಚಿಣ್ಣರು  ಭಾಗವಹಿಸಿದ್ದರು.

 

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಮಕ್ಕಳಿಗೆ ಪರಿಸರ ಕಾಳಜಿಯನ್ನು ಇಟ್ಟುಕೊಳ್ಳಬೇಕು. ಇದಕ್ಕೆ ಪೂರಕವಾಗಿಯೇ ದೇಶದ ಜನಪದ ಕತೆಗಳು ರಚಿತಗೊಂಡಿವೆ ಎಂದು ಹೇಳಿದರು. ಪೂರ್ವಜರು ಯಾವ ರೀತಿಯಲ್ಲಿ ಪರಿಸರ ಬಗೆಗಿನ ಪ್ರೀತಿ ವ್ಯಕ್ತಪಡಿಸುತ್ತಿದ್ದರು ಎಂದು ಪರಿಸರ ಕತೆಗಳ ಮೂಲಕವೇ ಚಿಣ್ಣರಿಗೆ ಮನಮುಟ್ಟುವಂತೆ ವಿವರಿಸಿದರು.ಮಕ್ಕಳಿಗೆಲ್ಲ ಪರಿಸರಕ್ಕೆ ಸಂಬಂಧಪಟ್ಟಂತೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪರಿಸರ ತಜ್ಞ ಡಾ.ಅ.ನ.ಯಲ್ಲಪ್ಪರೆಡ್ಡಿ, ಪರಿಸರವಾದಿ ಶಿವಮಲ್ಲು ಉಪಸ್ಥಿತರಿದ್ದರು.  ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಉದಯಭಾನು ಕಲಾಸಂಘದಲ್ಲಿ ಭೂಮಿ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ 170 ಮಂದಿ ಮಕ್ಕಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಅಂತರ್ಜಲ ಬಳಕೆ ಮತ್ತು ಮಳೆ ನೀರು ಸಂಗ್ರಹ ಕುರಿತು ಮಾಹಿತಿಯುಳ್ಳ ಕೈಪಿಡಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.ಕಲರ್ ಹ್ಯಾಂಡ್ಸ್ ಮತ್ತು ಬ್ರೇನ್ ವೇವ್ಸ್ ಮೀಡಿಯಾ ಸಂಸ್ಥೆಯು ಬಣ್ಣದ ಉತ್ಸವವನ್ನು ಆಚರಿಸುವ ಮೂಲಕ ಭೂಮಿ ದಿನಾಚರಣೆಯನ್ನು ಆಕರ್ಷಕವಾಗಿ ಹಮ್ಮಿಕೊಂಡಿತ್ತು. ಸಚಿವ ಎಸ್.ಸುರೇಶ್ ಕುಮಾರ್, ಕಲಾವಿದ ಬಿ.ಜಿ.ಗುಜ್ಜಾರಪ್ಪ, ನಟಿ ಟೀನಾ ಪೊನ್ನಪ್ಪ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.