ಮಂಗಳವಾರ, ಜೂನ್ 15, 2021
27 °C

ವೇತನ ತಾರತಮ್ಯ ನಿವಾರಿಸಿ:ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ನೇತೃತ್ವದಲ್ಲಿ ನೂರಾರು ಶಿಕ್ಷಕರು ಈಚೆಗೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಎನ್.ರಮೇಶ್ ಮಾತನಾಡಿ,  ಶಿಕ್ಷಕರಿಗೆ ಉತ್ತಮ ವೇತನ, ಬಡ್ತಿ ಹಾಗೂ ನಿವೃತ್ತಿ ಸೌಲಭ್ಯ ಕಲ್ಪಿಸಬೇಕು.  ವೇತನ ತಾರತಮ್ಯ ನಿವಾರಣೆ ಕೂಡಲೇ ನಿವಾರಿಸಬೇಕು. ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಅಧಿಕಾರಿ ಸಮಿತಿ ನೀಡಿದ ವರದಿ ಗೌಪ್ಯವಾಗಿದೆ.

 

ಇದು ಶಿಕ್ಷಕರ ಸಮುದಾಯಗಳಿಗೆ ಬೇಸರ ತರಿಸಿದೆ. ಪ್ರೌಢಶಾಲಾ ಹಾಗೂ ಕಾಲೇಜು ಪದವಿ ಪೂರ್ವ ಉಪನ್ಯಾಸಕರ ವೇತನಗಳನ್ನು 6ನೇ ವೇತನದಲ್ಲಿ ನಿಗದಿಗೊಳಿಸಬೇಕು ಎಂದು ತಿಳಿಸಿದರು.ನೆರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರೌಢಶಾಲಾ ಶಿಕ್ಷಕರಿಗೆ ನೀಡುವ ವೇತನಕ್ಕೂ ರಾಜ್ಯದಲ್ಲಿ ಶಿಕ್ಷಕರು ಪಡೆಯುತ್ತಿರುವ ವೇತನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೂಲವೇತನ ಹಾಗೂ ತುಟ್ಟಿಭತ್ಯೆ ಸೇರಿದಂತೆ ತಮಿಳುನಾಡಿನಲ್ಲಿ 27,492 ರೂಪಾಯಿ, ಕೇಂದ್ರ ಸರ್ಕಾರದಲ್ಲಿ 25,839 ರೂಗಳು, ಮಹಾರಾಷ್ಟ್ರದಲ್ಲಿ 32,454 ಇದೆ.  72:25ರ ಅನುಪಾತದಲ್ಲಿ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಬೇಕು ಎಂದು ಸರ್ಕಾರ ಆದೇಶ ಪಾಲನೆಯಾಗಿಲ್ಲ ಎಂದು ಹೇಳಿದರು.ಪ್ರಸಕ್ತ ಬಜೆಟ್‌ನಲ್ಲಿ 6ನೇ ವೇತನ ಜಾರಿಗೆ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಶಿಕ್ಷಕರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.   ಸಾಂಸ್ಕೃತಿಕ ಕಾರ್ಯದರ್ಶಿ ವಿ.ಮಲ್ಲಪ್ಪ, ತಾಲ್ಲೂಕು ಅಧ್ಯಕ್ಷ ಬಾಲರಾಜ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಪದಾಧಿಕಾರಿಗಳಾದ ಡಿ.ಎನ್.ಶ್ರೀನಿ ವಾಸರಾವ್, ಪಿ.ಎನ್.ರಂಗಾರೆಡ್ಡಿ, ಭೀಮೇಶ್, ಶೇಷ ಗಿರಿ, ಶೇಷಾದ್ರಿ, ವಿಜಯಲಕ್ಷ್ಮೀ, ಬಿ.ಎಸ್.ತುಳಸಿಮಾಲಾ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.