ಶನಿವಾರ, ಏಪ್ರಿಲ್ 17, 2021
23 °C

ವೈದ್ಯರ ನಿರ್ಲಕ್ಷ್ಯದ ಸಾವು ಅಪಘಾತ ವಿಮಾ ವ್ಯಾಪ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವೈದ್ಯರ ಅಜಾಗರೂಕತೆ ಅಥವಾ ನಿರ್ಲಕ್ಷ್ಯದಿಂದ ಸಂಭವಿಸುವ ಸಾವು ಕೂಡ ಅಪಘಾತವಾಗ್ದ್ದಿದು, ಸಾವನ್ನಪ್ಪಿದ ವ್ಯಕ್ತಿಯ ಕುಟುಂಬ ಅಪಘಾತ ವಿಮೆ ಪಡೆಯುವ ಎಲ್ಲಾ ಅರ್ಹತೆಯನ್ನು ಹೊಂದಿದೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ (ಎನ್‌ಸಿಡಿಆರ್‌ಸಿ) ತೀರ್ಪು ನೀಡಿದೆ.ಹರಿಯಾಣದ ನರೇಂದ್ರ ಸಿಂಗ್ ಪತ್ನಿ ಶಸ್ತ್ರಚಿಕಿತ್ಸೆಯ ವೇಳೆ ಸಾವನ್ನಪ್ಪಿದ್ದರು. ಆದರೆ ಅದು ಅಪಘಾತ ದಿಂದ ಸಂಭವಿಸಿದ ಸಾವಲ್ಲ ಎಂದು ವಾದಿಸುವ ಮೂಲಕ ಭಾರತೀಯ ಜೀವವಿಮಾ ನಿಗಮವು ಸಿಂಗ್ ಅವರಿಗೆ ಅಪಘಾತ ವಿಮಾ ಮೊತ್ತ ನೀಡಲು ನಿರಾಕರಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಗ್ರಾಹಕ ವೇದಿಕೆ ಈ ತೀರ್ಪನ್ನು ನೀಡಿತಲ್ಲದೆ, ಸಿಂಗ್ ಅವರಿಗೆ ವಿಮಾ ಮೊತ್ತ ನೀಡುವಂತೆ ಜೀವವಿಮಾ ನಿಗಮಕ್ಕೆ ಆದೇಶ ನೀಡಿತು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.