ಬುಧವಾರ, ಜೂನ್ 23, 2021
22 °C

ಶರತ್ಕಾಲದಲ್ಲಿ ಮೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪರೂಪದ ಗಳಿಗೆ `ಮೈನಾ~ ಚಿತ್ರಕ್ಕೆ ಒದಗಿ ಬಂದಿದೆ. ನಿಜ ಜೀವನದ ಟೈಗರ್ ಕಾಪ್ ಬಿ.ಬಿ. ಅಶೋಕ್ ಕುಮಾರ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಒಟ್ಟಿಗೆ ಕುಳಿತು ನಿರ್ಮಾಪಕ ರಾಜ್‌ಕುಮಾರ್ ಅವರ `ಮೈನಾ~ ಚಿತ್ರದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಅದು ಕುಮಾರ್ ತ್ರಯರ ಸಂಗಮವೇ ಆಗಿತ್ತು. ಮೊದಲ ಬಾರಿಗೆ ನೈಜ ಕಥೆ ಆಧಾರಿತ ಪಾತ್ರದಲ್ಲಿ ಅಭಿನಯಿಸುತ್ತಿರುವ ಶರತ್ ಕುಮಾರ್, `ವೃತ್ತಿ ಜೀವನದ130 ಸಿನಿಮಾಗಳಲ್ಲಿ ಸುಮಾರು 25 ಚಿತ್ರಗಳಲ್ಲಿ ಪೊಲಿಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಆದರೆ, ಕನ್ನಡ ಚಿತ್ರದ ಈ ಪೊಲೀಸ್ ಅಧಿಕಾರಿ ಪಾತ್ರ ತುಂಬಾ ವಿಭಿನ್ನವಾಗಿದೆ~ ಎಂದರು. ಅಶೋಕ್ ಕುಮಾರ್ ಅವರನ್ನು ಹೋಲುವ ಪಾತ್ರದಲ್ಲಿ ಶರತ್ ನಟಿಸುತ್ತಿದ್ದಾರೆ. ಇದು `ಸಾರಥಿ~ ನಂತರ ಅವರ ಎರಡನೇ ಕನ್ನಡ ಸಿನಿಮಾ.`ನಿಜ ಜೀವನದ ಅಧಿಕಾರಿ ತೊಟ್ಟಿರುವ ಕ್ಯಾಪ್ ಹಾಗೂ ಭರ್ಜರಿ ಮೀಸೆಯನ್ನು ಸಿನಿಮಾಕ್ಕಾಗಿ ಇಟ್ಟುಕೊಳ್ಳಲಿದ್ದೇನೆ~ ಎಂದರು.ನೂರಕ್ಕೂ ಹೆಚ್ಚು ಕೊಲೆ ಕೇಸುಗಳನ್ನು ಭೇದಿಸಿರುವ ಹಾಗೂ 18 ಎನ್‌ಕೌಂಟರ್‌ಗಳನ್ನು ಮಾಡಿರುವ ಅಶೋಕ್‌ಕುಮಾರ್ ವೃತ್ತಿ ಜೀವನದ ಸತ್ಯ ಘಟನೆಯನ್ನು ನಿರ್ದೇಶಕ ನಾಗಶೇಖರ್ ಅವರಿಗೆ ಹೇಳಿದ್ದು, ಆ ಪ್ರಸಂಗವೇ `ಮೈನಾ~ ಚಿತ್ರಕ್ಕೆ ಪ್ರೇರಣೆಯಂತೆ.

ತಮ್ಮ ಮೂರು ರಾಷ್ಟ್ರಪತಿ ಪದಕಗಳನ್ನು ಈ ಸಿನಿಮಾದ ಚಿತ್ರೀಕರಣಕ್ಕಾಗಿ ಶರತ್ ಕುಮಾರ್‌ಗೆ ತೊಡಿಸುವುದಾಗಿ ಹೇಳಿಕೊಂಡರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.