ಮಂಗಳವಾರ, ಮಾರ್ಚ್ 2, 2021
28 °C

ಶಾಂತಿಯ ಸಂಕೇತ ಈ ಉದ್ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಂತಿಯ ಸಂಕೇತ ಈ ಉದ್ಯಾನ

ಈ ಚಿತ್ರವನ್ನು ಕಂಡಾಗ ‘ವಾವ್‌!’ ಎಂಬ ‘ಉದ್ಗಾರ’ ಬರದಿರಲು ಸಾಧ್ಯವಿಲ್ಲ. ಅಶ್ರುವಾಯು ಗ್ರೆನೇಡ್‌ಗಳ ಉಳಿದಿರುವ ಭಾಗವನ್ನೇ ಬಳಸಿ ಈ  ಮಹಿಳೆ ಮಾಡಿರುವ ಹೂದೋಟ ಎಂಥವರನ್ನೂ ಆಕರ್ಷಿಸುತ್ತದೆ.ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷಕ್ಕೆ ಕೊನೆ ಇಂದಿಗೂ ದೊರಕಿಲ್ಲ. ಎರಡೂ ದೇಶಗಳ ನಡುವೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದ್ದು, ಅಪಾರ ಸಾವು, ನೋವು ಸಂಭವಿಸಿದೆ.ಸಂಘರ್ಷ ಕೊನೆಗೊಂಡು ಶಾಂತಿಯಿಂದ ಜೀವನ ಸಾಗಿಸಬೇಕು ಎಂದು ಕನಸು ಕಾಣುವ ಅದೆಷ್ಟೋ ಮಂದಿ ಎರಡೂ ದೇಶಗಳಲ್ಲಿದ್ದಾರೆ. ಬಂದೂಕು ಹಾಗೂ ಬಾಂಬ್‌ಗಳ  ಸದ್ದಿನ ನಡುವೆಯೂ ಶಾಂತಿಯ ಸಂದೇಶ ಸಾರಲು ಹಲವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ವಿವಿಧ ಹಾದಿಗಳನ್ನು ಕಂಡುಕೊಂಡಿದ್ದಾರೆ.ಇಂತಹ ಪ್ರಯತ್ನದ ದಾರಿ ಹಿಡಿದ ಪ್ಯಾಲೆಸ್ಟೀನ್‌ನ ರಮಲ್ಲಾ ಪಟ್ಟಣದ ಬಳಿಯ ಬಿಲಿನ್‌ ಎಂಬ ಗ್ರಾಮದ ಮಹಿಳೆಯೊಬ್ಬರ ಶಾಂತಿಯ ಸಂದೇಶ ಜಗತ್ತಿನ ಗಮನ ಸೆಳೆದಿದೆ. ಈ ಮಹಿಳೆ ತನ್ನ ಮನೆಯ ಹಿತ್ತಲಿನಲ್ಲಿ ಒಂದು ಸುಂದರ ಉದ್ಯಾನವನ ನಿರ್ಮಿಸಿದ್ದಾರೆ. ಹಲವು ಬಗೆಯ ಹೂಗಳಿಂದ ಉದ್ಯಾನ ಕಂಗೊಳಿಸುತ್ತಿದೆ. ಇದರ ವಿಶೇಷತೆಯೆಂದರೆ ಇಲ್ಲಿರುವ ಗಿಡಗಳನ್ನು ಹೂಕುಂಡದಲ್ಲಿ ಬೆಳೆಸಿಲ್ಲ.ಬದಲಾಗಿ ಇಸ್ರೇಲಿನ ಸೈನಿಕರು ಸಿಡಿಸಿರುವ ಅಶ್ರುವಾಯು ಗ್ರೆನೇಡ್‌ಗಳ ಉಳಿದಿರುವ ಭಾಗವನ್ನೇ (ಕ್ಯಾನಿಸ್ಟರ್‌ಗಳು – ಲೋಹದ ಚಿಕ್ಕ ಡಬ್ಬಿ) ಹೂಕುಂಡದ ರೀತಿಯಲ್ಲಿ ಬಳಸಿಕೊಂಡಿದ್ದಾರೆ!ಪ್ಯಾಲೆಸ್ಟೀನ್‌ ಪ್ರತಿಭಟನಾಕಾರರನ್ನು ಚದುರಿಸಲು ಇಸ್ರೇಲ್‌ ಸೈನಿಕರು ಅಶ್ರುವಾಯು ಗ್ರೆನೇಡ್‌ಗಳನ್ನು ಬಳಸುತ್ತಾರೆ. ರಮಲ್ಲಾ ಪ್ರದೇಶದಲ್ಲಿ ಸಂಘರ್ಷ, ಪ್ರತಿಭಟನೆ ನಡೆಯುವುದು ಸಾಮಾನ್ಯ. ಆದ್ದರಿಂದ ಈಕೆಗೆ ಯಥೇಚ್ಛ ‘ಹೂಕುಂಡ’ಗಳು ದೊರೆತಿವೆ. ಕೌಶಲ ಇದ್ದರೆ ಕಸದಿಂದಲೂ ರಸ ತೆಗೆಯಬಹುದು ಎಂಬುದನ್ನು ಈ ಮಹಿಳೆ ಸಾಬೀತು ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.